ದಲಿತ ಮಹಿಳೆಗೆ ಆರ್ಥಿಕ ಸಹಾಯ ಮಾಡಿದ ಕುಮಾರಸ್ವಾಮಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 01 : ಜನತಾ ದರ್ಶನದ ವೇಳೆ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ದಲಿತ ಮಹಿಳೆ ಸವಿತಾಗೆ ಎಚ್‌.ಡಿ.ಕುಮಾರಸ್ವಾಮಿ ಅವರು ಆರ್ಥಿಕ ನೆರವು ನೀಡಿದ್ದಾರೆ. ಸವಿತಾ ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸವಿತಾ ಅವರು ಬೇಕರಿ ನಡೆಸಲು ಅನುಕೂಲವಾಗುವಂತೆ 2 ಲಕ್ಷ ರೂ. ಸಹಾಯ ಮಾಡಿರುವ ಕುಮಾರಸ್ವಾಮಿ ಅವರು, ನೊಂದ ಮಹಿಳೆಗೆ ಹಕ್ಕುಪತ್ರ ಕೊಡಿಸಲು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯ ಮತ್ತು ಬಿಬಿಎಂಪಿ ಉಪ ಮೇಯರ್ ಹೇಮಲತಾ ಅವರಿಗೆ ಸೂಚನೆ ಕೊಟ್ಟಿದ್ದಾರೆ. [ಮಹಿಳೆಗೆ ಕಿರುಕುಳ, ಸರ್ಕಾರಕ್ಕೆ ಗಡುವು ಕೊಟ್ಟ ಎಚ್ಡಿಕೆ]

hd kumaraswamy

'ನೊಂದ ಮಹಿಳೆಗೆ ಸಹಾಯ ಮಾಡಲು ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದೆ. ಆದರೆ, ಅದು ಈಡೇರಿಲ್ಲ. ಚುನಾವಣೆ ಇರುವುದರಿಂದ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದನ್ನು ಮುಂದೂಡಿದ್ದೇನೆ. ಮಹಿಳೆಗೆ ನ್ಯಾಯ ಸಿಗದಿದ್ದರೆ ಧರಣಿ ನಡೆಸುವುದು ಖಂಡಿತ' ಎಂದು ಕುಮಾರಸ್ವಾಮಿ ಹೇಳಿದ್ದಾರೆ. [ಪೊಲೀಸರ ಕಿವಿ ಹಿಂಡಿದ ಸಿದ್ದರಾಮಯ್ಯ]

ಯಾರು ಈ ಸವಿತಾ? : ಬೆಂಗಳೂರಿನ ಹೊಸಹಳ್ಳಿ ನಿವಾಸಿ ಸವಿತಾ ಅವರು ಮೇ 17ರಂದು ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋಗಿದ್ದರು. ಆದರೆ, ಸಿದ್ದರಾಮಯ್ಯ ಗೃಹ ಕಚೇರಿ ಬಳಿ ಇದ್ದ ಪೊಲೀಸರು ರಾತ್ರಿ 8 ಗಂಟೆಯ ತನಕ ಆಕೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. [ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ ನೀಡಿದ ಸೂಚನೆಗಳೇನು?]

ಸವಿತಾ ಅವರನ್ನು ಸಿಎಂ ಮನೆ ಬಳಿಯಿಂದ ಹೈಗೌಂಡ್ಸ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಮಾನವೀಯವಾಗಿ ವರ್ತಿಸಲಾಗಿದೆ. ವೇಶ್ಯಾವಾಟಿಕೆ ಕೇಸು ದಾಖಲು ಮಾಡುವುದಾಗಿ ಬೆದರಿಸಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬುದು ಆರೋಪವಾಗಿದೆ.

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Janata Dal (S) state president H.D. Kumaraswamy extened financial help to dalit woman Savitha. Savitha who was allegedly ill-treated by the police in Bengaluru during Chief Minister Siddaramaiah Janata Darshan.
Please Wait while comments are loading...