ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಕ್ಸೋ ಕೇಸ್ ಹೆಚ್ಚಳ: ವಯೋಮಿತಿ ಇಳಿಕೆಗೆ ಹೈಕೋರ್ಟ್ ಸಲಹೆ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ನ.7: ಸಮಾಜದಲ್ಲಿ ಮಕ್ಕಳ ಮೇಲಿನ ಲೈಂಗಿಕ ಹಗರಣ ಪ್ರಕರಣಗಳು ಹೆಚ್ಚಾಗಿರುವುದರ ನಡುವೆಯೇ, ಪೋಕ್ಸೋ ಕಾಯ್ದೆ ಅಡಿಯ ಲೈಂಗಿಕ ಸಮ್ಮತಿ ವಯೋಮಿತಿ ಇಳಿಕೆ ಮಾಡಬೇಕು ಎಂದು ಭಾರತೀಯ ಕಾನೂನು ಆಯೋಗಕ್ಕೆ ಹೈಕೋರ್ಟ್ ಸಲಹೆ ಮಾಡಿದೆ.

ಹಾಗೆಯೇ, ವಿದ್ಯಾರ್ಥಿಗಳಿಗೆ ಐಪಿಸಿ ಹಾಗೂ ಪೋಕ್ಸೊ ಕಾಯ್ದೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಶಿಕ್ಷಣ ನೀಡಲು ಸಾಮಗ್ರಿ ರೂಪಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.

ಅಪ್ರಾಪ್ತ ಬಾಲಕನ ವಿರುದ್ಧದ ಪೋಕ್ಸೋ ಕೇಸ್ ಕ್ಲೋಸ್ ಮಾಡಿದ ಹೈಕೋರ್ಟ್ಅಪ್ರಾಪ್ತ ಬಾಲಕನ ವಿರುದ್ಧದ ಪೋಕ್ಸೋ ಕೇಸ್ ಕ್ಲೋಸ್ ಮಾಡಿದ ಹೈಕೋರ್ಟ್

ಅಪ್ರಾಪ್ತೆಯೊಂದಿಗೆ ಸಮ್ಮತಿ ಸೆಕ್ಸ್ ನಡೆಸಿದ ಸಂಬಂಧ ವ್ಯಕ್ತಿಯೊಬ್ಬನ ವಿರುದ್ಧದ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ರದ್ದುಪಡಿಸಿದ ಕೆಳ ನ್ಯಾಯಾಲಯದ ಕ್ರಮ ರದ್ದು ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ನೇತೃತ್ವದ ವಿಭಾಗೀಯ ಪೀಠ ಹೀಗೆ ಹೇಳಿದೆ.

HC express concern over rising POCSO cases: Suggested to reduce age of consent for sex

ಹೈಕೋರ್ಟ್ ಏನು ಆದೇಶಿಸಿದೆ: ಪೋಕ್ಸೋ ಕಾಯ್ದೆಯಲ್ಲಿ ಲೈಂಗಿಕ ಸಂಪರ್ಕಕ್ಕೆ ನೀಡಿದ ಸಮ್ಮತಿಯ ಮಾನ್ಯ ವಯಸ್ಸು 18 ವರ್ಷ. ಆದರೆ ಬಹುತೇಕ ಪ್ರಕರಣಗಳಲ್ಲಿ 18 ತುಂಬದ ಬಾಲಕಿಯರು ಸಮ್ಮಿತಿ ನೀಡಿರುತ್ತಾರೆ. ಆದರೆ 16 ಮತ್ತು 17 ತುಂಬಿದ ಬಾಲಕಿ ನೀಡಿದ ಸಮ್ಮತಿ ಮಾನ್ಯವಾಗುವುದಿಲ್ಲ. ಈ ವಾಸ್ತವ ನೆಲಗಟ್ಟಿನಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಸಮ್ಮತಿ ವಯಸ್ಸಿನ ಮಾನದಂಡದ ಬಗ್ಗೆ ಕಾನೂನು ಆಯೋಗ ಮರುಚಿಂತನೆ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದೆ.

9ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯ ನಿಯಮದ ಬಗ್ಗೆ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಶಿಕ್ಷಣ ಸಾಮಗ್ರಿ ರೂಪಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಮಿತಿ ರಚಿಸಬೇಕು. ಐಪಿಸಿ ಮತ್ತು ಪೋಕ್ಸೋ ಕಾಯ್ದೆ ನಿಯಮ ಉಲ್ಲಂಘನೆ ಮಾಡುವುದರಿಂದ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಈ ಕುರಿತ ಮುನ್ನೆಚ್ಚರಿಕೆ ನೀಡುವಂತೆ ಎಲ್ಲಾ ಶಾಲೆಗಳಿಗೆ ಸೂಚಿಸಬೇಕು. ಸಮಿತಿ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

HC express concern over rising POCSO cases: Suggested to reduce age of consent for sex

ಅಪ್ರಾಪ್ತೆ ಮನೆಯಿಂದ ಓಡಿಹೋಗಿ ಪ್ರೀತಿಸಿದ ಬಾಲಕನ ಜೊತೆಗೆ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಹಲವು ಪ್ರಕರಣಗಳು ಕಂಡು ಬರುತ್ತಿವೆ. ಅಂತಹ ಸಂತ್ರಸ್ತ ಬಾಲಕಿ ಮತ್ತು ಆರೋಪಿ ಪರಿಚಿತರಾಗಿದ್ದು, ಪ್ರೀತಿಯಲ್ಲಿ ಮುಳುಗಿರುತ್ತಾರೆ. ಆದರೆ, ಪೋಷಕರು ಮದುವೆಗೆ ಒಪ್ಪದಕ್ಕೆ ಮನೆಬಿಟ್ಟು ಹೋಗಿರುತ್ತಾರೆ. ನಂತರ ಮದುವೆಯಾಗಿ, ಸಮ್ಮತಿಯಿಂದ ಲೈಂಗಿಕ ಸಂಪರ್ಕ ಬೆಳೆಸಿರುತ್ತಾರೆ. ಜ್ಞಾನದ ಕೊರತೆಯಿಂದ ಪೋಕ್ಸೋ ಕಾಯ್ದೆಯಡಿ ಅಪರಾಧ ಕೃತ್ಯ ಎಸಗಿರುತ್ತಾರೆ ಎಂದು ಪೀಠ ಹೇಳಿದೆ.

ಪ್ರಕರಣವೇನು?: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ 17 ವರ್ಷದ ಸಂತ್ರಸ್ತೆ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದರು. 2015ರ ಡಿ.26ರಂದು ಬೆಳಗ್ಗೆ 9 ಗಂಟೆಗೆ ಕಾಲೇಜಿಗೆ ಹೋದ ಸಂತ್ರಸ್ತೆ ಹಿಂದಿರುಗಿರಲಿಲ್ಲ. ಇದರಿಂದ ತಾಯಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಆರೋಪಿಯನ್ನು ಸಂತ್ರಸ್ತೆ ಪ್ರೀತಿಸುತ್ತಿದ್ದು, ಆಕೆಯ ಸಮ್ಮತಿಗೆ ಮೇರೆಗೆ ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದ. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್ 376 2(ಜೆ) ಅಡಿಯಲ್ಲಿ ಅತ್ಯಾಚಾರ, ಅಪಹರಣ ಮತ್ತು ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ವಿಚಾರಣಾ ಹಂತದಲ್ಲಿರುವಾಗಲೇ ಆರೋಪಿ ಮತ್ತು ಸಂತ್ರಸ್ತೆ ಮದುವೆಯಾಗಿದ್ದರು. ಅವರಿಗೆ ಎರಡು ಮಕ್ಕಳು ಜನಿಸಿದ್ದವು. ಪ್ರಕರಣ ಮುಂದುವರಿಸುವ ಬಯಕೆ ತಮಗಿಲ್ಲ ಎಂದು ಮೆಮೊ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ್ದ ಸ್ಥಳೀಯ ಪೋಕ್ಸೋ ವಿಶೇಷ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಈ ಆದೇಶ ರದ್ದು ಕೋರಿ ಸರ್ಕಾರ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು.

English summary
Karnataka High court concern over rising POCSO cases: Suggested to reduce age of consent for sex
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X