ಲೈಂಗಿಕ ದೌರ್ಜನ್ಯ ಕೇಸ್: ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ
ಚಿತ್ರದುರ್ಗ, ನವೆಂಬರ್, 16: ನಗರದ ಹೊರವಲಯದಲ್ಲಿರುವ ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಮುರುಘಾ ಶ್ರೀ ಕಾರಾಗೃಹದಿಂದ ಬಿಡುಗಡೆಯಾದ ಹಿನ್ನೆಲೆ, ಮಠದ ಭಕ್ತರು, ಅಭಿಮಾನಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೆ ಇದೇ ವೇಳೆ ಶ್ರೀಗಳ ಪರ ಘೋಷಣೆ ಕೂಗಿ, ಜೈಕಾರ ಹಾಕಿದರು.

7 ಷರತ್ತುಗಳನ್ನ ವಿಧಿಸಿ ಜಾಮೀನು ನೀಡಿದ ಹೈಕೋರ್ಟ್
1. ನ್ಯಾಯಾಲಯ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು.
2. ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶ ಮಾಡುವಂತಿಲ್ಲ
3. ಜಾಮೀನು ಪಡೆಯುವ ಮೊದಲು ಇಬ್ಬರ ಶ್ಯೂರಿಟಿ ನೀಡಬೇಕು.
4. ವಿದೇಶಕ್ಕೆ ಹೋಗದಂತೆ ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು.
5. 2 ಲಕ್ಷ ರೂಪಾಯಿ ಬೆಲೆ ಬಾಳುವ ಬೇಲ್ ಬಾಂಡ್ ನೀಡಬೇಕು.
6. ವಿಚಾರಣಾ ನ್ಯಾಯಾಲಯ ಹೈಕೋರ್ಟ್‌ನ ಜಾಮೀನು ಅರ್ಜಿ ಆದೇಶ ಮೇಲೆ ಪ್ರಭಾವಗೊಳ್ಳಬಾರದು.
7. ಇದೇ ರೀತಿ ಅಪರಾಧವಾದ ಎಸಗುವಂತಿಲ್ಲ.
ದಾವಣಗೆರೆಗೆ ಭೇಟಿ ನೀಡಿದ ಮುರುಘಾ ಶ್ರೀ
ಪೋಕ್ಸೋ ಕೇಸ್‌ನಲ್ಲಿ ಬಂಧಿತರಾಗಿದ್ದ ಚಿತ್ರದುರ್ಗದ ಮರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶ್ರೀ ಇಂದು ಜೈಲಿನಿಂದ ಬಿಡುಗಡೆಯಾದ ನಂತರ ದಾವಣಗೆರೆಗೆ ಭೇಟಿ ನೀಡಿದರು. ನಗರದ ಶಿವಯೋಗಿ ಮಂದಿರಕ್ಕೆ ಆಗಮಿಸಿದ ಶ್ರೀಗಳಿಗೆ ಹೂಮಾಲೆ ಹಾಕಿ ಹಿಸಿ ತಿನ್ನಿಸಿ ಭಕ್ತರು ಸ್ವಾಗತ ಕೋರಿದರು.
ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರಕ್ಕೆ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ಬಳಿಕ ಆಗಮಿಸಿದ ಶ್ರೀಗಳಿಗೆ ಭಕ್ತರು ಸ್ವಾಗತ ಕೋರಿದರು. ಶಿವಯೋಗಿ ಮಂದಿರದಲ್ಲಿ ಜಯದೇವ ಶ್ರೀಗಳು ಮತ್ತು ಮುರುಘರಾಜೇಂದ್ರ ಶ್ರೀಗಳ ಗದ್ಧುಗೆಗೆ ಭೇಟಿ ನೀಡಿ ದರ್ಶನ ಪಡೆದರು. ಹಿರಿಯ ಶ್ರೀಗಳ ಗದ್ದುಗೆಗೆ ನಮಸ್ಕರಿಸಿದ ಮುರುಘಾ ಶ್ರೀಗಳು ಬಳಿಕ ದಾವಣಗೆರೆಯ ವಿರಕ್ತ ಮಠಕ್ಕ ತೆರಳಿದರು. ಇಲ್ಲಿಯೇ ಮುರುಘಾ ಶ್ರೀಗಳು ವಾಸ್ತವ್ಯ ಹೂಡಲಿದ್ದಾರೆ. ಆದರೆ ಎಷ್ಟು ದಿನಗಳವರೆಗೆ ಶ್ರೀಗಳು ವಾಸ್ತವ್ಯ ಹೂಡುತ್ತಾರೆ ಎಂಬ ಕುರಿತಂತೆ ಮಾಹಿತಿ ಇಲ್ಲ.
ಶ್ರೀಗಳು ಬಿಡುಗಡೆಯಾಗಿ ಬಂದ ಬಳಿಕ ಜಯದೇವ ಮುರುಘಾ ರಾಜೇಂದ್ರ ಮಹಾಸ್ವಾಮಿಗಳ ಕರ್ತೃ ಗದ್ದುಗೆ ದರ್ಶನ ಪಡೆದರು. ಈ ವೇಳೆ ಪಕ್ಕದಲ್ಲಿಯೇ ಇದ್ದ ಮಾಜಿ ಶಾಸಕ ಹೆಚ್. ಎಸ್.ಶಿವಶಂಕರ್ ಅವರು ಗುರುಗಳು ಬೆಂಗಳೂರು ಇಲ್ಲವೇ ಬೇರೆ ಕಡೆ ಹೋಗುತ್ತೀರಾ ಎಂದು ಭಾವಿಸಿದ್ದೆವು. ನೀವು ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡುತ್ತಿರುವುದು ತುಂಬಾನೇ ಖುಷಿ ತಂದಿದೆ. ದಾವಣಗೆರೆಯು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ ಹೆಸರು ಪಡೆದಿರುವ ಜಿಲ್ಲೆ. ಇಲ್ಲಿಯೇ ನೀವು ತಂಗುತ್ತಿರುವುದು ನಮಗೆಲ್ಲಾ ಸಮಾಧಾನ ತಂದಿದೆ ಎಂದು ಹೇಳಿದರು.
ನೀವು ಬೇರೆ ಜಿಲ್ಲೆಗೆ ಹೋಗುತ್ತೀರಾ. ಇಲ್ಲವೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುತ್ತೀರಾ ಎಂದು ಕೆಲವರು ಭಾವಿಸಿದ್ದರು. ಆದರೆ ನೀವು ದಾವಣಗೆರೆಯ ಮಂಡಿಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ವಾಸ್ತವ್ಯ ಮಾಡುತ್ತಿದ್ದು, ಭಕ್ತರಿಗೆ ಸಂತಸ ತಂದಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಹೌದು ದಾವಣಗೆರೆಯು ಸಾಂಸ್ಕೃತಿಕ ನಗರಿ. ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದೇನೆ ಎಂದು ಹೇಳಿದರು.












Click it and Unblock the Notifications