ಅಪ್ರಾಪ್ತ ಬಾಲಕನ ವಿರುದ್ಧದ ಪೋಕ್ಸೋ ಕೇಸ್ ಕ್ಲೋಸ್ ಮಾಡಿದ ಹೈಕೋರ್ಟ್

ಬೆಂಗಳೂರು, ಸೆ.9: ಸಂತ್ರಸ್ತೆ ಮತ್ತು ಆರೋಪಿಯ ಪೋಷಕರು ರಾಜೀ ಮಾಡಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಬಾಲಕನೋರ್ವನ ವಿರುದ್ಧದ ಪೋಕ್ಸೋ ಕೇಸ್ ಕ್ಲೋಸ್ ಮಾಡಿದೆ. ಪ್ರಕರಣ ರದ್ದು ಕೋರಿ ಬಾಲಕನ ಆತನ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

''ಸಂತ್ರಸ್ತೆ ಮತ್ತು ಆರೋಪಿಯ ಪೋಷಕರ ನಡುವೆ ಸಂಧಾನ ಏರ್ಪಟ್ಟಿದೆ. ಒಂದೇ ತರಗತಿಯಲ್ಲಿ ಓದುತ್ತಿದ್ದ ಆರೋಪಿ ಹಾಗೂ ಸಂತ್ರಸ್ತೆ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಮೂಡಿದ್ದ ಆಕರ್ಷಣೆಯಿಂದ ಈ ರೀತಿ ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಅವರು, ಮನೆಬಿಟ್ಟು ಚಿಕ್ಕಮಗಳೂರಿಗೆ ತೆರಳಿದ್ದರು. ಸಂತ್ರಸ್ತೆಯೊಂದಿಗೆ ಪ್ರೀತಿಯಲ್ಲಿರುವ ಆರೋಪಿಯನ್ನು ಶಿಕ್ಷಿಸುವುದು ಪೋಕ್ಸೋ ಕಾಯ್ದೆಯ ಉದ್ದೇಶವಲ್ಲ''ಎಂದು ನ್ಯಾಯಾಲಯ ಹೇಳಿದೆ.

ಮುಕ್ತ ಮನಸ್ಸಿನಿಂದ ನೋಡಬೇಕು: ಅಲ್ಲದೆ, 10ರಿಂದ 16 ವರ್ಷಗಳು ಹದಿಹರೆಯ ವಯಸ್ಸಾಗಿದ್ದು, ಯೌವ್ವನದಿಂದ ವಯಸ್ಕ ಹಂತಕ್ಕೆ ಮಗು ರೂಪಾಂತರವಾಗುವ ಸಮಯ. ಇಂತಹ ಸಂದರ್ಭದಲ್ಲಿ ತಮ್ಮ ನಡವಳಿಕೆಯಿಂದ ಮುಂದಾಗುವ ಪರಿಣಾಮಗಳ ಬಗ್ಗೆ ಮಕ್ಕಳು ನಿರ್ಲಕ್ಷ್ಯವಹಿಸುತ್ತಾರೆ. ಹದಿಹರೆಯದ ಹುಡುಗಿ-ಹುಡುಗನ ಮಧ್ಯೆ ಆಕರ್ಷಣೆಯಿಂದ ಬೆಳೆಯುವ ಪ್ರೀತಿ ಹುಡುಗನನ್ನು ಪೋಕ್ಸೋ ಕಾಯ್ದೆಯ ನಿಯಮಗಳಡಿ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಹದಿಹರೆಯದವರು ಕಾನೂನಿನ ಪರಿಣಾಮಗಳ ಅರಿವಿನ ಕೊರತೆಯಿಂದ ಇಂತಹ ಕೃತ್ಯಗಳಲ್ಲಿ ಸಿಲುಕಿಕೊಂಡರೆ ಕೋರ್ಟ್ ಮುಕ್ತ ಮನಸ್ಸಿನಿಂದ ನೋಡಬೇಕಾಗುತ್ತದೆ'' ಎಂದು ಅಭಿಪ್ರಾಯಪಟ್ಟಿದೆ.

Karnataka HC quashed POCSO case against minor boy

ಅಂತಿಮವಾಗಿ ಪ್ರಕರಣದ ದಾಖಲೆಗಳ ಹಾಗೂ ಆರೋಪಿಯ ಪರೀಕ್ಷಾ ಅಂಕಪಟ್ಟಿ ನೋಡಿದರೆ ಆತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಪೋಷಕರೇ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇಂತಹ ವಾಸ್ತವ ಪರಿಸ್ಥಿತಿ ಪರಿಗಣಿಸಿ, ಪೋಷಕರ ರಾಜೀ ನಿರ್ಧಾರವನ್ನು ಒಪ್ಪಿಕೊಂಡು ಆರೋಪಿಯನ್ನು ಪ್ರಕರಣದಿಂದ ಮುಕ್ತಗೊಳಿಸುವುದು ಸೂಕ್ತ. ತಪ್ಪಿದರೆ ಆರೋಪಿಯ ಭವಿಷ್ಯ ಅಪಾಯಕ್ಕೆ ಸಿಲುಕಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಕೀಲರು, ಹಲವು ಸುತ್ತಿನ ಕೌನ್ಸೆಲಿಂಗ್ ಬಳಿಕ ಆರೋಪಿ ಮತ್ತು ಸಂತ್ರಸ್ತೆಯ ಕುಟುಂಬದವರು ಪ್ರಕರಣವನ್ನು ಸುಖಾಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಅಪ್ರಾಪ್ತರಿಬ್ಬರ ಭವಿಷ್ಯದ ದೃಷ್ಟಿಯಿಂದ ಪ್ರಕರಣ ಮುಂದುವರಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಆದ್ದರಿಂದ, ತನಿಖಾ ಪ್ರಕ್ರಿಯೆ ಕೈಬಿಡಲು ಆದೇಶಿಸಬೇಕು ಎಂದು ಕೋರಿದ್ದರಲ್ಲದೆ, ಇಂತಹ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಗಳು ನೀಡಿರುವ ತೀರ್ಪುಗಳ ಬಗ್ಗೆ ಗಮನ ನ್ಯಾಯಾಲಯದ ಗಮನ ಸೆಳೆದರು.

ಪ್ರಾಸಿಕ್ಯೂಷನ್ ಪರ ವಕೀಲರು ಆಕ್ಷೇಪಿಸಿ, ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಅಪರಾಧ ಪ್ರಕರಣ ಇದಾಗಿದೆ. ಹಾಗಾಗಿ, ಇಲ್ಲಿ ಸಂಧಾನಕ್ಕೆ ಅವಕಾಶ ಇಲ್ಲ, ಪ್ರಕರಣ ರದ್ದುಪಡಿಸಬಾರದು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಸಂತ್ರಸ್ತೆ ಹಾಗೂ ಆರೋಪಿಯ ಪೋಷಕರು ರಾಜಿಮಾಡಿಕೊಂಡಿರುವುದನ್ನು ಪರಿಗಣಿಸಿ ಕಳೆದ ವರ್ಷ ನ.21ರಂದು ಕಾಲೇಜಿಗೆ ತೆರಳಿದ್ದ ಪುತ್ರಿ ಮನೆಗೆ ಮರಳಿಲ್ಲ ಎಂದು ಅಪ್ರಾಪ್ತೆಯ ತಂದೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಮತ್ತು ಸಂತ್ರಸ್ತೆಯ ಫೋನ್ ಟ್ರ್ಯಾಕ್ ಮಾಡಿ ಇಬ್ಬರನ್ನೂ ಪತ್ತೆ ಹಚ್ಚಿದ್ದರು. ಬಳಿಕ, ಆರೋಪಿ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದರು. ಇದೀಗ ಸಂತ್ರಸ್ತೆ ಮತ್ತು ಆರೋಪಿಯ ಪೋಷಕರು ಪ್ರಕರಣಕ್ಕೆ ಮುಕ್ತಾಯಗೊಳಿಸಲು ವಿಚಾರಣೆ ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+