Get Updates
Get notified of breaking news, exclusive insights, and must-see stories!

POCSO cases in Karnataka: ಕಾಯ್ದೆಯಡಿ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಶೇ.50 ವಿಚಾರಣೆ ಹಂತದಲ್ಲಿವೆ, ಅಂಕಿ ಅಂಶದ ಮಾಹಿತಿ

ಕರ್ನಾಟಕ ರಾಜ್ಯದಲ್ಲಿ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ-2012 ಅಡಿಯಲ್ಲಿ ದಾಖಲಾದ ಇದುವರೆಗಿನ ಪ್ರಕರಣಗಳಲ್ಲಿ ಶೇಡಕಾ ಅರ್ಧದಷ್ಟು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲೇ ಇವೆ ಎಂಬ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು, ಮಾರ್ಚ್ 21: ಕರ್ನಾಟಕ ರಾಜ್ಯದಲ್ಲಿ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ-2012 ಅಡಿಯಲ್ಲಿ ದಾಖಲಾದ ಇದುವರೆಗಿನ ಪ್ರಕರಣಗಳಲ್ಲಿ ಶೇಡಕಾ ಅರ್ಧದಷ್ಟು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲೇ ಇವೆ ಎಂಬ ಅಂಶ ಬೆಳಕಿಗೆ ಬಂದಿದೆ.

ಇದುವರೆಗೆ ಸರಿಸುಮಾರು 20,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕನಿಷ್ಠವೆಂದರೂ ಶೇಕಡಾ 50 ಪ್ರತಿಶದಷ್ಟು ಪ್ರಕರಣಗಳು ಇನ್ನೂ ವಿಚಾರಣೆ ಪೂರ್ಣಗೊಂಡಿಲ್ಲ, ನಡೆಯುತ್ತಲೇ ಇದೆ. ಇನ್ನೂ ಈಗಾಗಲೇ ವಿಚಾರಣೆ ಪೂರ್ಣಗೊಂಡ ಪ್ರಕರಣಗಳಲ್ಲಿ, ಶೇಕಡಾ ಐದು ಪಟ್ಟಿ ಕೇಸುಗಳು ಖುಲಾಸೆಗೊಂಡಿವೆ ಎಂದು ತಿಳಿದು ಬಂದಿದೆ.

POCSO cases in Karnataka: Half Of The 20,000 Cases Registered Under POCSO Act Are Under Trial

ಕರ್ನಾಟಕ ರಾಜ್ಯ ಗೃಹ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಕರ್ನಾಟಕ ಸರ್ಕಾರ 2012ರಲ್ಲಿ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ' ಪರಿಚಯಿಸಿತು. ಈವರೆಗೆ ರಾಜ್ಯವು 20,010 ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ಬೆಳಕಿಗೆ ಬಂದಿವೆ.

ಅವುಗಳಲ್ಲಿ 9,940 ರಷ್ಟು ಅಂದರೆ ಶೇಕಡಾ 49 ರಷ್ಟು ಕೇಸುಗಳು ಸಂಬಂಧಿತ ನ್ಯಾಯಾಲಯಗಳಲ್ಲಿ ವಿಚಾಣೆ ನಡೆಯುತ್ತಿವೆ. ಗೃಹ ಇಲಾಖೆ ಒಟ್ಟು ಪ್ರಕರಣಗಳಲ್ಲಿ ದೂರು ಬಂದ ನಂತರವೂ 94 ಪ್ರಕರಣ ಪತ್ತೆಯಾಗದೇ ಉಳಿದಿವೆ. ಜೊತೆಗೆ 350 ಕೇಸ್‌ಗಳಲ್ಲಿ ಸುಳ್ಳು ಮಾಹಿತಿ ನೀಡಲಾಗಿತ್ತು ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಈ ಕುರಿತು ಅಪರಾಧ ವಿಭಾಗದ ಎಡಿಜಿಪಿ ಆರ್ ಹಿತೇಂದ್ರ ಅವರು, ಪ್ರಕರಣಗಳನ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ. ನಿಗದಿತ ಕಾಲಮೀತಿಯೊಳಗೆ ಅಂತಿಮ ವರದಿ (ಚಾರ್ಜ್‌ಶೀಟ್) ಸಲ್ಲಿಸುತ್ತಿದ್ದೇವೆ. ಆದರೆ ನ್ಯಾಯಲಯದಲ್ಲಿ ಇನ್ನೂ ಪ್ರಕರಣಗಳು ಬಾಕಿ ಇರುವಾದ ಆ ಬಗ್ಗೆ ಪ್ರತಿಕ್ರಿಯೆ ಸೂಕ್ತವಲ್ಲ ಎಂದು ಅವರು ತಿಳಿಸಿದರು.

POCSO cases in Karnataka: Half Of The 20,000 Cases Registered Under POCSO Act Are Under Trial

ಕೆಲ ವರ್ಷಗಳ ಹಿಂದೆ ಕೇವಲ ಎರಡೇ ತಿಂಗಳಲ್ಲಿ ಶೇಕಡಾ 30 ರಿಂದ 40ರಷ್ಟು ಪ್ರಕರಣಗಳ ಚಾರ್ಜ್‌ ಶೀಟ್‌ಗಳು ಸಲ್ಲಿಕೆಯಾಗಿದ್ದವು. ಅದಾದ ಬಳಿಕ ಆರವತ್ತು ದಿನಗಳಲ್ಲಿ ಶೆಕಡಾ 60 ಪ್ರತಿಶದಷ್ಟು ಪ್ರಕರಣಗಳನ್ನು ಪೂರ್ಣಗೊಳಿಸಿ ಚಾರ್ಜ್ ಶೀಟ್‌ ಸಲ್ಲಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ.

ಈ ವರ್ಷದ ಇಷ್ಟು ಪ್ರಕರಣ ವಿಚಾರಣೆ ಹಂತದಲ್ಲಿವೆ

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ವ್ಯಾಪ್ತಿಯಡಿ ಬರುವ ಪ್ರಕರಣಗಳಲ್ಲಿ 2017 ಮತ್ತು ಅದಕ್ಕಿಂದ ಹಿಂದಿನ ವರ್ಷದ ಪ್ರಕರಣಗಳಲ್ಲಿ ಶೇಕಡಾ 20ರಷ್ಟು ಇಲ್ಲವೇ 1,918 ಪ್ರಕರಣಗಳ ವಿಚಾರಣೆಯಲ್ಲಿವೆ. ದಶಕದ ಹಿಂದಿನ 100 ಕ್ಕೂ ಹೆಚ್ಚು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ. 2022 ರಿಂದ ಬಹುಪಾಲು ಪ್ರಕರಣಗಳು ತನಿಖೆಯಲ್ಲಿವೆ ಎನ್ನಲಾಗಿದೆ.

ಇನ್ನೂ ತನಿಖೆ, ವಿಚಾರಣೆ ಪೂರ್ಣಗೊಂಡ 1,200 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಆದರೆ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಅಥವಾ 6,766 ರಲ್ಲಿ ಶಂಕಿತರನ್ನು ಖುಲಾಸೆ ಮಾಡಲಾಗಿದೆ. ಕಾನೂನುಬದ್ಧ ವಯಸ್ಸಿನಲ್ಲದ ಇಬ್ಬರು ವ್ಯಕ್ತಿಗಳು ಸಂಬಂಧದಲ್ಲಿದ್ದಾಗ ಮತ್ತು ಒಪ್ಪಿತ ಲೈಂಗಿಕತೆ ಪ್ರಕರಣಗಳು ದಾಖಲಿಸಬೇಕಾಗುತ್ತದೆ. ಹೀಗಾಗಿ ಹಲವು ಪ್ರಕರಣಗಳು ಖುಲಾಸೆಗೊಂಡಿವೆ ಎಂದು ತಜ್ಞರು ಮಾಹಿತಿ ನೀಡಿದರು.

ನ್ಯಾಯಮೂರ್ತಿಳ ವಿಭಾಗೀಯ ಪೀಠವೊಂದು, ಇಂತದ್ದೇ ಪ್ರಕರಣದಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ನೀಡಿದ ತೀರ್ಪಿನಲ್ಲಿ ಈ ರೀತಿ ಹೇಳಿತ್ತು. 16 ವರ್ಷ ಮೇಲ್ಪಟ್ಟ ಅಪ್ರಾಪ್ತ ಬಾಲಕಿಯರು ಪ್ರೀತಿಸಿ ಓಡಿಹೋದ ಪ್ರಕರಣಗಳು ಮತ್ತು ಈ ನಡುವೆ ಹುಡುಗನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಭಾರತದ ಕಾನೂನು ಆಯೋಗವು ವಯೋಮಾನದ ಮಾನದಂಡಗಳ ಬಗ್ಗೆ ಮರು ಚಿಂತನೆ ಮಾಡಬೇಕಾಗುತ್ತದೆ. ಜೊತೆಗೆ ವಾಸ್ತವಾಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+