ಚುನಾವಣಾ ದೂರು: ಮುಖ್ಯಮಂತ್ರಿಗಳ ತವರು ಹಾಸನ ಮೊದಲು

Recommended Video

      Lok Sabha Election 2019 : ಮುಖ್ಯಮಂತ್ರಿಗಳ ತವರು ಹಾಸನ ಮೊದಲು | Oneindia Kannada

      ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯೂ ಮುಗಿದಿದೆ ಅದರೊಂದಿಗೆ ದೂರುಗಳು ಕೂಡ ಸಲ್ಲಿಕೆಯಾಗಿವೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಪಕ್ಷದ ಕಾರ್ಯಕರ್ತ ಗುಟ್ಟಾಗಿ ಕೊಡುತ್ತಿರುವ ಗಿಫ್ಟ್ ಕೂಪನ್‌ಗಳು, ಮತ್ತೊಂದೆಡೆ ಅಭ್ಯರ್ಥಿಯೊಬ್ಬರ ಬೆಂಬಲಿಗನ ಕೈಯಿಂದ ಮತದಾರನ ಕೈಗೆ ವರ್ಗಾವಣೆಯಾಗುತ್ತಿರುವ ಹಣ, ಇಂಥ ಹಲವು ಪ್ರಕರಣಗಳನ್ನು ಈಗ ಸ್ವತಃ ಮತದಾರರು ಪತ್ತೆ ಹಚ್ಚಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದಾರೆ.

      ಇದರಲ್ಲಿ ಮತದಾರರಿಗೆ ಉಡುಗೊರೆಯಾಗಿ ನೀಡುತ್ತಿರುವುದು, ಮದ್ಯ ಹಂಚುತ್ತಿರುವುದು , ಹಣ ವಿತರಿಸುತ್ತಿರುವುದು ಸೇರಿದಂತೆ ಹತ್ತು ಹಲವು ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

      ಇದು ಸಿ-ವಿಜಿಲ್ ಅಪ್ಲಿಕೇಷನ್ ಎಫೆಕ್ಟ್

      ಇದು ಸಿ-ವಿಜಿಲ್ ಅಪ್ಲಿಕೇಷನ್ ಎಫೆಕ್ಟ್

      ಇದು ಚುನಾವಣೆಯಲ್ಲಿ ಅಕ್ರಮ ತಡೆಗೆ ಚುನಾವಣಾ ಆಯೋಗ ಪರಿಚಯಿಸಿರುವ ಸಿ ವಿಜಿಲ್ ಅಪ್ಲಿಕೇಷನ್ ಎಫೆಕ್ಟ್, ಈ ಅಪ್ಲಿಕೇಷನ್ ಬಿಡುಗಡೆ ಮಾಡಿದ 25 ದಿನಗಳ ಅಂತರದಲ್ಲಿ ರಾಜ್ಯದಲ್ಲಿ ಚುನಾವಣಾ ಆಮಿಷವೊಡ್ಡಿದ ಸುಮಾರು 850ಕ್ಕೂ ಅಧಿಕ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಫೋಟೊ ಸಮೇತ ದೂರು ನೀಡಿದ್ದಾರೆ.

      ಮುಖ್ಯಮಂತ್ರಿಗಳ ತವರು ಜಿಲ್ಲೆಯಿಂದ ಹೆಚ್ಚು ದೂರು

      ಮುಖ್ಯಮಂತ್ರಿಗಳ ತವರು ಜಿಲ್ಲೆಯಿಂದ ಹೆಚ್ಚು ದೂರು

      ಹೆಚ್ಚು ದೂರು ದಾಖಲಾದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಸನ ಮೊದಲ ಸ್ಥಾನದಲ್ಲಿದೆ. ಹಾಸನದಿಂದಲೇ 139 ದೂರುಗಳು ಬಂದಿವೆ. ಅದರಲ್ಲಿ 11 ಮಾತ್ರ ಸಾಬೀತಾಗಿವೆ.

      ದೂರುದಾರರ ಹೆಸರು ಗೌಪ್ಯವಾಗಿರಲಿದೆ

      ದೂರುದಾರರ ಹೆಸರು ಗೌಪ್ಯವಾಗಿರಲಿದೆ

      ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಫೋಟೊಒ ಮತ್ತು ವಿಡಿಯೋ ಅಪ್‌ಲೋಡ್ ಮಾಡುತ್ತಿರುವವರ ಹೆಸರು ಗೌಪ್ಯವಾಗಿರಲಿವೆ. ದೂರು ಕೊಟ್ಟವರ ಹೆಸರು ಬಹಿರಂಗ ಪಡಿಸುವುದಿಲ್ಲ ಹೀಗಾಗಿ ಮುಕ್ತವಾಗಿ ದೂರು ನೀಡಬಹುದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

      ಎಲ್ಲೆಲ್ಲಿ ಎಷ್ಟು ದೂರು ದಾಖಲು

      ಎಲ್ಲೆಲ್ಲಿ ಎಷ್ಟು ದೂರು ದಾಖಲು

      870 ದಾಖಲಾದ ದೂರುಗಳು
      166 ಸಾಬೀತಾಗಿರುವುದು
      139 ಹಾಸನದಲ್ಲಿ ದಾಖಲಾದ ದೂರುಗಳು
      11 ಸಾಬೀತಾಗಿರುವುದು
      2ನೇ ಸ್ಥಾನ ರಾಯಚೂರು(70)
      3 ನೇ ಸ್ಥಾನ ಬೆಂಗಳೂರು ನಗರ(65)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+