ಕೇರಳದಲ್ಲಿ ಅಸಹಕಾರ, ಕರ್ನಾಟಕದಲ್ಲಿ ಸಹಕಾರ, ಇದೆಂಥಾ ಕಾಂಗ್ರೆಸ್‌ ನೀತಿ?: ಕುಮಾರಸ್ವಾಮಿ

ಬೆಂಗಳೂರು, ಫೆಬ್ರವರಿ 06: ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಳೆ(ಫೆಬ್ರವರಿ 06) ಚಲೋ ದಿಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ.

ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಗೆ ಯಾತ್ರೆ ಹೊರಟಿರುವ ಕಾಂಗ್ರೆಸ್‌ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಅದರ ವರಸೆ ಹೇಗಿದೆ ಎಂದರೆ, ಕರ್ನಾಟಕಕ್ಕೆ ಒಂದು ನೀತಿ. ಕೇರಳಕ್ಕೆ ಮತ್ತೊಂದು ನೀತಿ. ಉದ್ದೇಶ ಲೋಕಸಭೆ ಚುನಾವಣೆ ಎಂದಿರುವ ಕುಮಾರಸ್ವಾಮಿ ರಾವಣ ತಲೆಗಳ ಕಾಂಗ್ರೆಸ್ ರಾಜಕಾರಣ ಎಂದು ಕಿಡಿಕಾರಿದ್ದಾರೆ.

 H.D Kumaraswamy Lashes Out At Congress Protest In Delhi

ಕೇರಳದ ಸಿಎಂ ಶ್ರೀ ಪಿಣರಾಯಿ ವಿಜಯನ್ ಅವರು, 'ನಮ್ಮ ರಾಜ್ಯಕ್ಕೆ ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯ ಆಗಿದೆ. ಅದಕ್ಕೆ ಕೇಂದ್ರದ ವಿರುದ್ಧ ಧ್ವನಿ ಎತ್ತೋಣ ಬನ್ನಿ, ಸಹಕಾರ ನೀಡಿ' ಎಂದು ಕರೆದರೆ, ಅದಕ್ಕೆ ಕೇರಳ ಕಾಂಗ್ರೆಸ್ಸಿಗರು ಕೊಟ್ಟ ಉತ್ತರ ಹೀಗಿತ್ತು. 'ಜನರ ಹಣವನ್ನು ನೀವು ಅನಗತ್ಯ ವೆಚ್ಚಗಳಿಗೆ ಪೋಲು ಮಾಡುತ್ತಿದ್ದೀರಿ, ನಾವು ಬರಲ್ಲ' ಎಂದಿದ್ದಾರೆ.

ವಿಜಯನ್ ಅವರು ಕರೆದಿದ್ದ ಸರ್ವಪಕ್ಷ ಸಭೆಗೂ ಅಸಹಕಾರ ತೋರಿರುವ ಕಾಂಗ್ರೆಸ್ಸಿಗರು, ಕೇಂದ್ರ ಸರಕಾರದ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಾಗಲೂ ಗೈರು ಹಾಜರಾಗಿದ್ದಾರೆ ಮತ್ತು ಕಲಾಪವನ್ನೇ ಬಹಿಷ್ಕರಿಸಿದ್ದಾರೆ. ಅಷ್ಟೇ ಅಲ್ಲ, ಫೆಬ್ರುವರಿ 8ನೇ ತಾರೀಖು ದಿಲ್ಲಿಯಲ್ಲಿ ವಿಜಯನ್ ಅವರು ಹಮ್ಮಿಕೊಂಡಿರುವ ಪ್ರತಿಭಟನೆಯನ್ನೂ ಕೇರಳ ಕಾಂಗ್ರೆಸ್ಸಿಗರು ಬಹಿಷ್ಕರಿಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್, ಕೇರಳಕ್ಕೆ ತದ್ವಿರುದ್ಧ ದಿಕ್ಕಿನಲ್ಲಿದೆ. ಒಂದೆಡೆ ಬಿಜೆಪಿ ಸಂಸದರು ಶೋ ಪೀಸುಗಳು, ಗಂಡಸ್ತನ ಇಲ್ಲದವರು ಎಂದು ಕಾಂಗ್ರೆಸ್ ನಾಯಕರು ನಾಲಿಗೆ ಜಾರಿ ಬಿಡುತ್ತಿದ್ದಾರೆ. ಈಗ ನೋಡಿದರೆ, ಪ್ರತಿಭಟನೆಗೆ ಬನ್ನಿ. ನಿಮ್ಮ ಸಹಕಾರವೂ ಇರಲಿ ಎಂದು ಆ ಪಕ್ಷದ ಸಂಸದರನ್ನು ಅದೇ ನಾಲಿಗೆಯಿಂದಲೇ ಕರೆಯುತ್ತಿದ್ದಾರೆ. ಜೆಡಿಎಸ್‌ ಸಂಸದರಿಗೂ ಪತ್ರ ಬರೆದಿದ್ದಾರೆ. ಇದೆಂಥಾ ವೈರುಧ್ಯ? ಇದೆಂಥಾ ಚೋದ್ಯ? ಎಂದು ವ್ಯಂಗ್ಯವಾಡಿದ್ದಾರೆ.

ಕೇರಳದ ಎಲ್‌ಡಿಎಫ್‌ ಸರ್ಕಾರ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದಾದರೆ, ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮಾಡುತ್ತಿರುವುದೇನು? ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವುದೇನು? ಕೇರಳದಲ್ಲಿ ಅಸಹಕಾರ! ಕರ್ನಾಟಕದಲ್ಲಿ ಸಹಕಾರ! ಇದೆಂಥಾ ನೀತಿ ? ಎರಡು ತಲೆಗಳು ಮಾತ್ರವಲ್ಲ, ರಾವಣ ತಲೆಗಳ ಕಾಂಗ್ರೆಸ್‌ ಪಕ್ಷಕ್ಕೆ ಮೈಯ್ಯೆಲ್ಲಾ ರಾಜಕೀಯವೇ ತುಂಬಿದೆ. ಅದು ಸ್ವಾರ್ಥ ರಾಜಕೀಯ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+