ಲೈಂಗಿಕ ಕಿರುಕುಳ : ಗುಲ್ಬರ್ಗ ವಿವಿ ಪ್ರಾಧ್ಯಾಪಕ ಬಂಧನ

arrest
ಗುಲ್ಬರ್ಗ, ಡಿ.14 : ಸಂಶೋಧನಾ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ದಶರಥ್ ನಾಯಕ್ ಅವರನ್ನು ಗುಲ್ಬರ್ಗ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ನಾಯಕ್ ತಲೆಮರಿಸಿಕೊಂಡಿದ್ದರು.

ಸಂಶೋಧನಾ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ದಶರಥ್ ನಾಯಕ್ ವಿರುದ್ಧ ನ.27ರಂದು ಗುಲ್ಬರ್ಗ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನಿಂದಲೂ ಅವರು ತಲೆ ಮರಿಸಿಕೊಂಡಿದ್ದರು. ಶನಿವಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದೂರು ದಾಖಲಾದ ದಿನದಿಂದ ದಶರಥ ನಾಯಕ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಶನಿವಾರ ಮಹಾರಾಷ್ಟ್ರದ ನಾಂದೇಢ್ ಬಳಿ ಪೊಲೀಸರು ಅವರನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಗುಲ್ಬರ್ಗಕ್ಕೆ ಕರೆತರುತ್ತಿದ್ದಾರೆ. [ಪ್ರೊಫೆಸರ್ ದಶರಥ ಅಮಾನತು]

ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರೊ. ದಶರಥ ನಾಯಕ್ ಅವರ ಲೈಂಗಿಕ ಕಿರುಕಿಳ ಪ್ರಕರಣ ಬೆಳಕಿಗೆ ಬಂದ ನಂತರ ಡಿ.6ರಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತ ವಿವಿ ಕುಲಪತಿ ಡಾ. ಈ.ಟಿ.ಪುಟ್ಟಯ್ಯ ತುರ್ತ ವಿವಿ ಸಿಂಡಿಕೇಟ್ ಸಭೆ ಕರೆದು, ತಕ್ಷಣದಿಂದ ಜಾರಿಗೆ ಬರುವಂತೆ ಡಾ. ದಶರಥ ನಾಯಕ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದರು.

ಗುಲ್ಬರ್ಗ ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಾಯಕ್ ಪಿಎಚ್. ಡಿ ಸಂಶೋಧನಾ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಪ್ರಕರಣ ತಿರುಳು. ಪ್ರೊಫೆಸರ್, ವಿವಿ ಕಂಪ್ಯೂಟರಿನಲ್ಲಿಯೇ ಬ್ಲೂ ಫಿಲಂಗಳನ್ನು ಡೌನ್ ಲೋಡ್ ಮಾಡಿ ಅದನ್ನು ವಿದ್ಯಾರ್ಥಿನಿಗೆ ತೋರಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳಿವೆ.

ದಶರಥ ನಾಯಕ್ 3 ದಶಕಗಳಿಂದ ಅರ್ಥಶಾಶ್ತ್ರ ಬೋಧಿಸುತ್ತಿದ್ದಾರೆ. ಎಂಎ, ಪಿಎಚ್ ಡಿ ಮಾಡಿರುವ ಅವರಿ, ಮೈಕ್ರೋ ಎಕನಾಮಿಕ್ಸ್, ಲೇಬರ್ ಎಕನಾಮಿಕ್ಸ್ ಮತ್ತು ಇನ್ಫ್ರಾಸ್ಟ್ರಕ್ಚರ್ ವಿಷಯ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+