ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬಿ.ಎಲ್.ಸಂತೋಷ್ ಟ್ವೀಟ್

ಬೆಂಗಳೂರು, ಡಿ 30: ಈ ತಿಂಗಳ 22 ಮತ್ತು 27ರಂದು ಎರಡು ಹಂತದಲ್ಲಿ ನಡೆದ ಲೋಕಲ್ ಫೈಟ್ (ಗ್ರಾಮ ಪಂಚಾಯಿತಿ ಚುನಾವಣೆ) ಮತಎಣಿಕೆ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ. ಕೊರೊನಾ ಆತಂಕದ ನಡುವೆಯೂ ಬಿರುಸಿನ ಮತದಾನ ನಡೆದಿತ್ತು.

5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಚುನಾವಣೆ ನಡೆದಿತ್ತು ಮತ್ತು 2,22,814 ಅಭ್ಯರ್ಥಿಗಳು ಕಣದಲ್ಲಿದ್ದರು. 8,074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಯಾವುದೇ ಪಕ್ಷದ ಚಿಹ್ನೆಯಿಲ್ಲದೇ ನಡೆದ ಚುನಾವಣೆ ಇದಾಗಿತ್ತು.

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಂತೋಷ್ ಅಭಿನಂದಿಸಿದ್ದಾರೆ.

Gram Panchayat Election Result: BL Santosh Congratulated Yediyurappa And Nalin Kumar Kateel

"82,616 ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ಇದರಲ್ಲಿ ಬಿಜೆಪಿ ಇದುವರೆಗಿನ ಫಲಿತಾಂಶದ ಪ್ರಕಾರ 5,344 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಶೇ. 48ರಷ್ಟು ವಾರ್ಡ್ ಗಳಲ್ಲಿ ನಮ್ಮ ಪಕ್ಷದ ಬೆಂಬಲಿಗರು ಜಯ ಸಾಧಿಸಿದ್ದಾರೆ. ಕಟೀಲ್ ಮತ್ತು ಬಿಎಸ್ವೈಗೆ ಅಭಿನಂದನೆಗಳು"ಎಂದು ಸಂತೋಷ್ ಟ್ವೀಟ್ ಮಾಡಿದ್ದಾರೆ.

ತಮ್ಮ ಪಕ್ಷದ ಬೆಂಬಲಿಗರನ್ನು ಗೆಲ್ಲಿಸುವ ಛಲದೊಂದಿಗೆ ಮೂರೂ ಪಕ್ಷಗಳು ಕಾರ್ಯತಂತ್ರ ರೂಪಿಸಿದ್ದವು. ಹಣ, ಹೆಂಡ ಮತ್ತು ಇತರ ಆಮಿಷಗಳನ್ನು ಮತದಾರರಿಗೆ ಹೇರಳವಾಗಿ ಒಡ್ಡಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು.

ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಕೆ ಮಾಡಿದ್ದನ್ನು ಬಿಟ್ಟರೆ, ಮಿಕ್ಕ ಜಿಲ್ಲೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿತ್ತು. ಹಾಗಾಗಿ, ಫಲಿತಾಂಶ ಪ್ರಕಟವಾಗುವುದಕ್ಕೆ ವಿಳಂಬವಾಗುತ್ತಿದ್ದು, ತಡರಾತ್ರಿ ಹೊತ್ತಿಗೆ ಎಲ್ಲಾ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+