ಸರ್ಕಾರಿ ನೌಕರರಿಗೆ ವೇತನ ಜತೆಗೆ ಟಿಎ, ಡಿಎ ಏರಿಕೆ ಭಾಗ್ಯ?

Recommended Video

      ಸಿದ್ದರಾಮಯ್ಯ ಸರ್ಕಾರದಿಂದ ಸರ್ಕಾರೀ ನೌಕರರಿಗೆ ಡಬಲ್ ಧಮಾಕಾ | Oneindia Kannada

      ಬೆಂಗಳೂರು, ಫೆಬ್ರವರಿ 06: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಡಬ್ಬಲ್ ಧಮಾಕ ನೀಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ.

      ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದ್ದು, ವೇತನ ಏರಿಕೆ, ಹಲವಾರು ಭತ್ಯೆಗಳನ್ನು ನೀಡಲು ನಿರ್ಧರಿಸಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರ ಬೀಳಲಿದೆ.

      ಐಎಎಸ್‌ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ಇದೇ ವರ್ಷದ ಜೂನ್‌ 1ರಂದು ವೇತನ ಆಯೋಗ ರಚಿಸಿ ಆದೇಶ ಹೊರಡಿಸಿದ್ದ ಸರ್ಕಾರ, ನಾಲ್ಕು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ತಡವಾಗಿಯಾದರೂ ಆಯೋಗ ಇತ್ತೀಚೆಗೆ ತನ್ನ ಶಿಫಾರಸು ವರದಿಯನ್ನು ಸಲ್ಲಿಸಿದೆ.

      ಸರ್ಕಾರಿ ನೌಕರರ ವೇತನ ಹೆಚ್ಚಳ ಹಾಗೂ ನಿವೃತ್ತಿ ವಯಸ್ಸನ್ನು ಎರಡು ವರ್ಷಕ್ಕೆ ಹೆಚ್ಚಳ ಮಾಡಲಿದ್ದಾರೆ. ಹಾಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಜತೆಗೆ ಕನಿಷ್ಟ ವೇತನ ಮೊತ್ತ, ವಾರದ ರಜಾದಿನ ಎಲ್ಲವೂ ಬದಲಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ವಯಸ್ಸು ಏರಿಕೆಗೆ ತಡೆ ನೀಡಲಾಗಿದೆ.

      6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ನೆರವು

      6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ನೆರವು

      ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸರ್ಕಾರಿ ನೌಕರರಿಗೆ ಜನವರಿಯಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು ನೀಡುವ ಭರವಸೆಯನ್ನು ಸಿ.ಎಂ. ನೀಡಿದ್ದಾರೆ. ಕೇಂದ್ರ ಸರ್ಕಾರ ಘೋಷಿಸುವ ತುಟ್ಟಿಭತ್ಯೆಯ ಪ್ರಮಾಣದಲ್ಲಿ ಶೇ. 0.944 ರಷ್ಟು ತುಟ್ಟಿಭತ್ಯೆ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎನ್ನಲಾಗಿದೆ.

      ಸರ್ಕಾರಿ ನೌಕರರ ಸಂಘದ ಬೇಡಿಕೆ ಏನು?

      ಸರ್ಕಾರಿ ನೌಕರರ ಸಂಘದ ಬೇಡಿಕೆ ಏನು?

      * ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು
      * ಏಪ್ರಿಲ್ 1, 2017ರಿಂದ ಅನ್ವಯಿಸುವಂತೆ ಶೇ 30ರಷ್ಟು ಹಣ ಬಿಡುಗಡೆ ಮಾಡಬೇಕು.
      * ವೇತನ ಪರಿಷ್ಕರಣೆಯಾದ ನಂತರ ಶೇ. 42.25 ರಷ್ಟು ತುಟ್ಟಿಭತ್ಯೆ ಮೂಲ ವೇತನದಲ್ಲಿ ವಿಲೀನವಾಗಬೇಕು.

      ಚಿತ್ರದಲ್ಲಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ.

      ಟಿಎ, ಡಿಎ, ಎಚ್ಆರ್ ಎ ಏರಿಕೆಗೂ ಬೇಡಿಕೆ

      ಟಿಎ, ಡಿಎ, ಎಚ್ಆರ್ ಎ ಏರಿಕೆಗೂ ಬೇಡಿಕೆ

      * ಶೇ 30ರಿಂದ 35ರಷ್ಟು ವೇತನ ಹೆಚ್ಚಳ ಮಾಡಿದರೆ, ಸರ್ಕಾರದ ಬೊಕ್ಕಸಕ್ಕೆ ಸರಿ ಸುಮಾರು 10,000 ಕೋಟಿ ರು ಹೊರೆ ಬೀಳಲಿದೆ.
      * ಮನೆ ಬಾಡಿಗೆ ಭತ್ಯೆಯನ್ನು ಶೇ. 45 ರಷ್ಟು ಫಿಟ್ ಮೆಂಟ್ ನೀಡಬೇಕೆಂದು ನೌಕರರು ಮನವಿ ಮಾಡಿದ್ದಾರೆ.
      * ಈಗ ಸಿದ್ದರಾಮಯಯ್ಯ ಅವರು ಶೇ 35ರಷ್ಟು ವೇತನ ಏರಿಕೆ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೇತನ ಅಂತರ ಶೇ32ರಷ್ಟಿರಲಿದೆ.

      6ನೇ ವೇತನ ಆಯೋಗದ ಶಿಫಾರಸುಗಳು

      6ನೇ ವೇತನ ಆಯೋಗದ ಶಿಫಾರಸುಗಳು

      * ರಾಜ್ಯ ಸರ್ಕಾರಿ ನೌಕರರ ವೇತನ ಶೇ 30ರಷ್ಟು ಹೆಚ್ಚಳ.

      * ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಸರಿ ಸಮಾನವಾಗಿರಬೇಕು.

      * ಕೆಲವು ಜಯಂತಿ /ದಿನಾಚರಣೆ ಸರ್ಕಾರಿ ರಜೆ ರದ್ದು, ವಾರದಲ್ಲಿ 5 ದಿನಗಳು ಮಾತ್ರ ಕಚೇರಿ.

      * ಕೇಂದ್ರ ಸರ್ಕಾರದ ಕಚೇರಿ ಅನ್ವಯ ವಾರದ ರಜೆ ಹಾಗೂ ಕೆಲಸದ ಅವಧಿ ಬದಲಾವಣೆ.

      * ಕನಿಷ್ಟ ವೇತನ ಮೊತ್ತ 16,350 ರು, ಗರಿಷ್ಟ ಮೊತ್ತ 1,32,925 ರು. ಎಂದು ನಿಗದಿ.

      * ಐಎಎಸ್ ಯೇತರ ಅಧಿಕಾರಿಗಳು- 95,325 ರು ನಿಂದ 1 ಲಕ್ಷ ರು.

      * ಐಎಎಸ್ ಯೇತರ ಅಧಿಕಾರಿಗಳು- 95,325 ರು ನಿಂದ 1 ಲಕ್ಷ ರು.

      * ಗ್ರೂಪ್ ಬಿ: 39,425 ರು

      * ಗ್ರೂಪ್ ಸಿ : 19, 850 ರು

      * ಗ್ರೂಪ್ ಡಿ : 16,350 ರು

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+