2,997 ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದ ತಯಾರಿ

ಬೆಂಗಳೂರು, ಜುಲೈ 09 : ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ 2,997 ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಆದ್ದರಿಂದ, ಪದವಿ ಪೂರ್ವ ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದೆ. ಶೀಘ್ರದಲ್ಲಿಯೇ ಈ ಕುರಿತು ಅಧಿಸೂಚನೆ ಹೊರಡಿಸಲಾಗುತ್ತದೆ.

ನೇರ ನೇಮಕಾತಿ ಮೂಲಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ತನಕ ಅಥವ ಮಾರ್ಚ್ 2109ರ ವರೆಗೆ ಇದರಲ್ಲಿ ಯಾವುದು ಮೊದಲು ಅಗುತ್ತದೆಯೋ ಅದು ಅನ್ವಯವಾಗುವ ಷರತ್ತಿನೊಂದಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

Government to appoint 2000 guest lecturer soon

ಮಾಸಿಕ 9 ಸಾವಿರ ರೂ. ಗೌರವ ಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಉಪನ್ಯಾಸಕರಿಗೆ ನಿಗದಿತ ಕಾರ್ಯಭಾರವನ್ನು ಸರಿದೂಗಿಸುವ ಸಲುವಾಗಿ ಅಗತ್ಯವಿರುವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.

ಜಿಲ್ಲಾವಾರು ಹಂಚಿಕೆ : ಯಾವ ಜಿಲ್ಲೆಗೆ ಎಷ್ಟು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ ಎಂಬ ವಿವರ ಇಲ್ಲಿದೆ. ಬೆಂಗಳೂರು ಉತ್ತರ 31, ಬೆಂಗಳೂರು ದಕ್ಷಿಣ 30, ಬೆಂಗಳೂರು ಗ್ರಾಮಾಂತರ 46, ರಾಮನಗರ 70, ಬಳ್ಳಾರಿ 117, ಚಿಕ್ಕೋಡಿ 70, ಬೆಳಗಾವಿ 125, ಬಾಗಲಕೋಟೆ 118, ವಿಜಯಪುರ 69, ಬೀದರ್ 77, ದಾವಣಗೆರೆ 71, ಚಿತ್ರದುರ್ಗ 70, ಚಿಕ್ಕಮಗಳೂರು 111, ಗದಗ 86, ಹಾವೇರಿ 76, ಧಾರವಾಡ 50 ಹುದ್ದೆಗಳು.

ಕಲಬುರಗಿ 100, ಯಾದಗಿರಿ 98, ಹಾಸನ 150, ಚಿಕ್ಕಬಳ್ಳಾಪುರ 84, ಕೋಲಾರ 100, ಚಾಮರಾಜನಗರ 39, ಮೈಸೂರು 154, ಮಂಡ್ಯ 117, ಉತ್ತರ ಕನ್ನಡ 97, ಕೊಪ್ಪಳ 103, ರಾಯಚೂರು 127, ದಕ್ಷಿಣ ಕನ್ನಡ 217, ಉಡುಪಿ 77, ಶಿವಮೊಗ್ಗ 88, ತುಮಕೂರು 141 ಮತ್ತು ಕೊಡಗು 43 ಹುದ್ದೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+