ಕರ್ನಾಟಕ: ಸರ್ಕಾರಿ ಶಾಲೆಗಳಿಗೆ ಶುಲ್ಕ ನಿಗದಿ, ಎಷ್ಟು ತಿಳಿಯಿರಿ
ಬೆಂಗಳೂರು, ಮೇ 28: ಕರ್ನಾಟಕದ ಖಾಸಗಿ ಶಾಲೆಗಳು ಶೇ 20 ರಿಂದ 30ರಷ್ಟು ದರ ಏರಿಕೆ ಮಾಡಿವೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. 2024-25ನೇ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ/ ಅನುದಾನಿತ ಶಾಲೆಗಳ ಶುಲ್ಕಗಳನ್ನು ನಿಗದಿ ಮಾಡಲಾಗಿದೆ.
ಪ್ರಾಥಮಿಕ ಶಾಲಾ ವಿಭಾಗ/ ಪ್ರೌಢ ಶಾಲಾ ವಿಭಾಗ ಎಂದು ವರ್ಗೀಕರಣ ಮಾಡಿ ಶುಲ್ಕ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡುವವರು ಶುಲ್ಕವ ವಿವರ ತಿಳಿಯಿರಿ.

ಸರ್ಕಾರದ ಮಾಹಿತಿ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲಾ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇದೆ. ಎಲ್ಲಾ ಹೆಣ್ಣು ಮಕ್ಕಳಿಗೆ, ರೂ. 2ಲಕ್ಷ ಮಿತಿಯೊಳಗೆ ಪ್ರವರ್ಗ-1ರಡಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ, ರೂ. 44,500 ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇದೆ.
ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಇರುವ ಶಾಲೆಗಳಲ್ಲಿ ಪ್ರತಿ ಘಟಕಕ್ಕೆ ತಲಾ 5 ರೂ. ಸಂಗ್ರಹ ಮಾಡುವುದು. ವಿದ್ಯಾರ್ಥಿ ಕ್ರೀಡಾ ನಿಧಿ, ಶಿಕ್ಷಕರ ದಿನಾಚರಣೆ, ಬಾವುಟದ ನಿಧಿ (ಕ್ರಮ ಸಂಖ್ಯೆ 9, 10, 11 ಮತ್ತು 12)ಗಳಿಗೆ, ಶುಲ್ಕ ರಿಯಾಯಿತಿ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಈ ನಿಧಿಗಳ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.
ಎಷ್ಟು ಶುಲ್ಕ ಪಾವತಿಸಬೇಕು?: ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಕ್ರೀಡಾ ನಿಧಿ 1-5ನೇ ತರಗತಿ ಶುಲ್ಕವಿಲ್ಲ, 6-7 10 ರೂ.ಗಳು. ಶಿಕ್ಷಕ ದಿನಾಚರಣೆ ಬಾವುಟ 1-5 ಶುಲ್ಕವಿಲ್ಲ, 6-7ನೇ ತರಗತಿ 5 ರೂ.ಗಳು. ಒಟ್ಟು 15 ರೂ.ಗಳು.
ಪ್ರೌಢ ಶಾಲಾ ವಿಭಾಗ: 8ನೇ ತರಗತಿ ಒಟ್ಟು 70 ರೂ., 9-10ನೇ ತರಗತಿ ಒಟ್ಟು 220 ರೂ.ಗಳು. ಇವುಗಳಲ್ಲಿ ದಾಖಲಾತಿ ಶುಲ್ಕ 8ನೇ ತರಗತಿ 0, 9-10ನೇ ತರಗತಿ 10 ರೂ.ಗಳು. ಕ್ರೀಡಾ ಶುಲ್ಕ 8ನೇ ತಗರತಿ 0, 9-10ನೇ ತರಗತಿ 25 ರೂ.ಗಳು. ರೀಡಿಂಗ್ ಶುಲ್ಕ 8ನೇ ತರಗತಿ, 9-10ನೇ ತರಗತಿ 20 ರೂ.ಗಳು., ಪ್ರಯೋಗಾಲಯ ಶುಲ್ಕ 8ನೇ ತರಗತಿ 0, 9-10 20 ರೂ.ಗಳು.
ದೃಕ್ ಶ್ರವಣ ಶುಲ್ಕ (ಎ. ವಿ. ಇ) 8ನೇ ತರಗತಿ 0, 9-10ನೇ ತರಗತಿ 10 ರೂ., ಡ್ರಾಯಿಂಗ್/ ವೃತ್ತಿ ಶಿಕ್ಷಣ ಶುಲ್ಕ 8ನೇ ತರಗತಿ 0, 9-10ನೇ ತರಗತಿ 25 ರೂ., ವೈದ್ಯಕೀಯ ಶುಲ್ಕ 8ನೇ ತರಗತಿ 0, 9-10ನೇ ತರಗತಿ 5 ರೂ.ಗಳು. ಶಾಲಾ ಸ್ವಚ್ಛತಾ ಶುಲ್ಕ 8ನೇ ತರಗತಿ 0, 9-10 15 ರೂ.ಗಳು.
ವಿದ್ಯಾರ್ಥಿ ಕ್ರೀಡಾ ನಿಧಿ 8ನೇ ತರಗತಿ 20 ರೂ., 9-10ನೇ ತರಗತಿ 20 ರೂ.ಗಳು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ 8ನೇ ತರಗತಿ 15, 9-10 15 ರೂ. ಗಳು. ಶಿಕ್ಷಕರ ಕಲ್ಯಾಣ ನಿಧಿ 8ನೇ ತರಗತಿ 15 ರೂ., 9-10 15 ರೂ.ಗಳು. ಶಿಕ್ಷಕರ ದಿನಾಚರಣೆಯ ಬಾವುಟ 8ನೇ ತರಗತಿ 10 ರೂ., 9-10 10 ರೂ.ಗಳು. ಶಾಲಾಭಿವೃದ್ಧಿ ಶುಲ್ಕ 8ನೇ ತರಗತಿ 0, 9-10 20 ರೂ.ಗಳು. ರೆಡ್ ಕ್ರಾಸ್ ಸದಸ್ಯತ್ವ/ ಚಟುವಟಿಕೆ ಶುಲ್ಕ 8ನೇ ತರಗತಿ 10, 9-10 10 ರೂ.ಗಳು.
ಮೇ 29ರಂದು ಶಾಲೆಗಳು ಆರಂಭ: ಕರ್ನಾಟಕದಲ್ಲಿ ಬೇಸಿಗೆ ರಜೆಗಳು ಮುಗಿದು ಮೇ 29ರಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲು ಶಿಕ್ಷಕರು, ಸಿಬ್ಬಂದಿ ತಯಾರಾಗಿದ್ದಾರೆ.
ಶಾಲೆಗಳು ಆರಂಭವಾದ ಕೂಡಲೇ ಶೇ 100ರಷ್ಟು ಸಮವಸ್ತ್ರ ಪೂರೈಕೆ, ಪಠ್ಯ ಪುಸ್ತಕಗಳನ್ನು ಒದಗಿಸಲು ಸರ್ಕಾರ ತಯಾರಿ ಮಾಡಿಕೊಂಡಿದೆ. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡುವ ಮೂಲಕ ಅವರನ್ನು ಸ್ವಾಗತಿಸಲಾಗುತ್ತದೆ.
ಮೇ 29ರಂದು ಶಾಲೆಗಳು ಆರಂಭಗೊಂಡರೂ ಸಹ ಮೇ 30ರಿಂದ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ನಿರೀಕ್ಷೆ ಇದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಶಿಕ್ಷಣ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.












Click it and Unblock the Notifications