Industry: ₹3607.19 ಕೋಟಿ ಬಂಡವಾಳ ಹೂಡಿಕೆಯ 62 ಯೋಜನೆಗಳಿಗೆ ಕರ್ನಾಟಕ ಒಪ್ಪಿಗೆ, ಉದ್ಯೋಗ ಸೃಷ್ಟಿ
ಬೆಂಗಳೂರು, ನವೆಂಬರ್ 29: ಕರ್ನಾಟಕ ರಾಜ್ಯ ಸರ್ಕಾರ ಕೈಗಾರಿಕೋದ್ಯಮ, ಬಂಡವಾಳ ಹೂಡಿಕೆ ವಲಯದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸಾವಿರಾರು ಕೋಟಿ ರೂಪಾಯಿ ಬಂಡವಾಳದ ಒಟ್ಟು 62 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸುಮಾರು 10 ಸಾವಿರಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೈಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಹೌದು, ಬೃಹತ್ ಮತ್ತು ಕೈಗಾರಿಕೆ, ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಸಚಿವ ಎಂಬಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ 141ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ ನಡೆಯಿತು. ಒಟ್ಟು ₹ 3,607.19 ಕೋಟಿ ಬಂಡವಾಳ ಹೂಡಿಕೆಯ 62 ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇವುಗಳಿಂದ 10,755 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

₹50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ₹2,088.44 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಲಿದೆ. ಇವುಗಳಿಂದ 6,360 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.
4 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ
₹15 ಕೋಟಿಗಳಿಂದ ₹50 ಕೋಟಿ ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 51 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹941.40 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಅಂದಾಜು 4,395 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಗೆ ಸಭೆಯು ಅನುಮೋದಿಸಿದ್ದು ಇದರಿಂದ ₹577.35 ಕೋಟಿ ಬಂಡವಾಳ ಹೂಡಿಕೆ ಆಗಲಿದೆ ಎಂದು ಇಲಾಖೆಯು ಪ್ರಕಟಣೆಲ್ಲಿ ತಿಳಿಸಿದೆ. ಸಭೆಯಲ್ಲಿ ಯೋಜನೆ ಜಾರಿ ಆರಂಭಿಕ ಸಿದ್ಧತೆಗಳ ಕುರಿತು ಸಚಿವರು ಮತ್ತು ಅಧಿಕಾರಿಗಳು ಚರ್ಚಿಸಿದರು. ಅನುಮೋದಿತ ಯೋಜನೆಗಳು, ಬಂಡವಾಳದ ವಿವರ ಈ ಕೆಳಗಿನಂತಿದೆ.
ಅನುಮೋದನೆ ನೀಡಿರುವ ಪ್ರಸ್ತಾವನೆಗಳ ಪಟ್ಟಿ
* ಸಂಸ್ಥೆ: ಟೆಕ್ಸ್ ಕಾನ್ ಸ್ಟೀಲ್ಸ್ ಲಿಮಿಟೆಡ್
ಸ್ಥಳ: ರಾಯಚೂರು
ಹೂಡಿಕೆ: ₹480 ಕೋಟಿ
ಉದ್ಯೋಗ: 200
* ಸಂಸ್ಥೆ: ಹುಂಡ್ರಿ ಷುಗರ್ಸ್ ಅಂಡ್ ಎಥೆನಾಲ್ ಪೈವೇಟ್ ಲಿಮಿಟೆಡ್
ಸ್ಥಳ: ಧಾರವಾಡ ಜಿಲ್ಲೆ
ಹೂಡಿಕೆ: ₹476.54 ಕೋಟಿ
ಉದ್ಯೋಗ: 300
* ಸಂಸ್ಥೆ: ಬ್ರೆನ್ ಲೈಫ್ ಸೈನ್ಸಸ್ ಪೈವೇಟ್ ಲಿಮಿಟೆಡ್
ಸ್ಥಳ: ಬೆಂಗಳೂರು ನಗರ ಜಿಲ್ಲೆ
ಹೂಡಿಕೆ: ₹ 230.56 ಕೋಟಿ
ಉದ್ಯೋಗ: 1,750
* ಸಂಸ್ಥೆ: ಅಲ್ಟೈನ್ ಎಥೆನಾಲ್ ಪೈವೇಟ್ ಲಿಮಿಟೆಡ್
ಸ್ಥಳ: ಗದಗ ಜಿಲ್ಲೆ
ಹೂಡಿಕೆ: ₹229.19 ಕೋಟಿ
ಉದ್ಯೋಗ: 107
* ಸಂಸ್ಥೆ: ವಿರೂಪಾಕ್ಷ ಲ್ಯಾಬೊರೇಟರೀಸ್ ಪೈವೇಟ್ ಲಿಮಿಟೆಡ್
ಸ್ಥಳ: ಯಾದಗಿರಿ ಜಿಲ್ಲೆ
ಹೂಡಿಕೆ: ₹ 212.55ಕೋಟಿ
ಉದ್ಯೋಗ: 790
* ಸಂಸ್ಥೆ: ಕ್ವಾಲ್ ಕಾಂ ಇಂಡಿಯಾ ಪೈವೇಟ್ ಲಿಮಿಟೆಡ್
ಸ್ಥಳ: ಬೆಂಗಳೂರು
ಹೂಡಿಕೆ: ₹175 ಕೋಟಿ
ಉದ್ಯೋಗ: 1,553
* ಸಂಸ್ಥೆ: ಎಲ್.ಆರ್.ಬಿ ವುಡ್ ಇಂಡಸ್ಟ್ರಿ (ಇಂಡಿಯಾ)
ಸ್ಥಳ: ಚಾಮರಾಜನಗರ ಜಿಲ್ಲೆ
ಹೂಡಿಕೆ: ₹ 102.50 ಕೋಟಿ
ಉದ್ಯೋಗ: 160
* ಸಂಸ್ಥೆ: ಮಾತಾ ಇಂಡಸ್ಟ್ರೀಸ್
ಸ್ಥಳ: ಬೆಂಗಳೂರು ನಗರ ಜಿಲ್ಲೆ
ಹೂಡಿಕೆ: ₹ 102.10 ಕೋಟಿ
ಉದ್ಯೋಗ: 1,500












Click it and Unblock the Notifications