Government Employee: ಸರ್ಕಾರಿ ನೌಕರರ ವೇತನ, ಕೆಜಿಐಡಿ ಕಡಿತ ಎಷ್ಟು, ಮಾಹಿತಿ
ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ ನಿಯಮಗಳು, 1958ಕ್ಕೆ ತಿದ್ದುಪಡಿ ಮಾಡಿ, ಆರ್ಥಿಕ ಇಲಾಖೆ ಹೊರಡಿಸಿರುವ ಅಧಿಸೂಚನೆ ಕುರಿತು ಮಾಹಿತಿ ನೀಡಲಾಗಿದೆ. ನಿಗದಿತ ದಿನಾಂಕದೊಳಗೆ ಕಡ್ಡಾಯ ಕನಿಷ್ಠ ವಿಮೆ ಪಡೆಯದ ಅಧಿಕಾರಿ/ ನೌಕರರ ವೇತನವನ್ನು ತಡೆಹಿಡಿಯಲಾಗುವುದೆಂದು ತಿಳಿಸಲಾಗಿದೆ.
ಈ ಕುರಿತು ವಿವೇಕಾನಂದ, ಅಧೀನ ಕಾರ್ಯದರ್ಶಿ, ಲೆಕ್ಕಪತ್ರ ಶಾಖೆ-3, ಕ.ವಿ.ಸ.ಪ. ಸುತ್ತೋಲೆಯನ್ನು ಹೊರಡಿಸಿದ್ದಾರೆ. ದಿನಾಂಕ 23.10.2024ರ ಅಧಿಸೂಚನೆಯಂತೆ 50 ವರ್ಷ ಮೀರದ ಎಲ್ಲಾ ಹಂತದ ಅಧಿಕಾರಿ/ ನೌಕರರು ಅವರ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಗೆ ಪಾವತಿಸಬೇಕಾದ ಮಾಸಿಕ ಕನಿಷ್ಠ ವಿಮಾ ಕಂತು ಕಡಿಮೆ ಇದ್ದಲ್ಲಿ, ಕಡ್ಡಾಯವಾಗಿ ವಿಮೆ ಪಡೆಯುವಂತೆ ದಿನಾಂಕ 02.12.2024ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು ಎಂದು ಹೇಳಿದೆ.

ಇದುವರೆಗೂ ಕೆಲವು ಅಧಿಕಾರಿ ಹಾಗೂ ನೌಕರರು ತಮ್ಮ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಗೆ ಪಾವತಿಸಬೇಕಾದ ಕಡ್ಡಾಯ ಮಾಸಿಕ ಕನಿಷ್ಠ ವಿಮಾ ಕಂತು ಕಡಿಮೆ ಇದ್ದರೂ, ವಿಮೆ ಪಡೆಯದಿರುವುದು ಕಂಡು ಬಂದಿರುತ್ತದೆ. ಆದುದರಿಂದ, ಕನಿಷ್ಠ ವಿಮಾ ಕಂತಿಗಿಂತ ಕಡಿಮೆ ಇದ್ದಲ್ಲ, 28ನೇ ಫೆಬ್ರವರಿರೊಳಗಾಗಿ ವಿಮೆ ಪಡೆಯುವಂತೆ ಮತ್ತೊಮ್ಮೆ ತಿಳಿಸಲಾಗುತ್ತಿದೆ.
ವೇತನ ಮತ್ತು ಕೆಜಿಐಡಿ ಕಡಿತ ಎಷ್ಟು?
* ವೇತನ 27000-46675 ರೂ., ಕನಿಷ್ಠ ವಿಮಾ ಕಂತು 2300 ರೂ.ಗಳು
* 29600-52800 ರೂ.ಗಳು. 2580 ರೂ.
* 31775-61300 ರೂ.ಗಳು. 2910 ರೂ.
* 34100-67600 ರೂ.ಗಳು. 3180 ರೂ.
* 37500-76100 ರೂ.ಗಳು. 3550 ರೂ.
* 41300-81800 ರೂ.ಗಳು. 3850 ರೂ.
* 44425-83700 ರೂ.ಗಳೂ. 4000 ರೂ.
* ವೇತನ 49050-92500 ರೂ.ಗಳು. ಕನಿಷ್ಠ ವಿಮಾ ಕಂತು 4420 ರೂ.ಗಳು
* ವೇತನ 54175-99400 ರೂ.ಗಳು. 4800 ರೂ.ಗಳು.
* 58300-107500 ರೂ.ಗಳು. 5180 ರೂ.ಗಳು.
* 61300-112900 ರೂ.ಗಳು. 5440 ರೂ.ಗಳು
* 65950-124900 ರೂ.ಗಳು. 5960 ರೂ.ಗಳು
* 69250-134200 ರೂ.ಗಳು. 6360 ರೂ.ಗಳು.
* ವೇತನ 72550-141200 ರೂ.ಗಳು. ಕನಿಷ್ಠ ವಿಮಾ ಕಂತು ರೂ. 6680
* 78000-148200 ರೂ.ಗಳು. 7070 ರೂ.ಗಳು
* 83700-155200 ರೂ. ಗಳು. 7470 ರೂ.ಗಳು
* 90200-159200 ರೂ.ಗಳು. 7790 ರೂ.ಗಳು
* 97100-163200 ರೂ.ಗಳು. 8130 ರೂ.ಗಳು
* 107500-167200 ರೂ.ಗಳು. 8580 ರೂ.ಗಳು
* 112900-171200 ರೂ.ಗಳು. 8880 ರೂ.ಗಳು
* 118700-175200 ರೂ.ಗಳು. 9180 ರೂ.ಗಳು
* 131100-188200 ರೂ.ಗಳು. 9980 ರೂ.ಗಳು
* 144700-197200 ರೂ.ಗಳು. 10680 ರೂ.ಗಳು
* 155200-226200 ರೂ.ಗಳು. 11920 ರೂ.ಗಳು
* 167200-241200 ರೂ.ಗಳು. 12760 ರೂ.ಗಳು.
ಈ ಹಿಂದೆಯೂ ಸಹ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ಕುರಿತು ಸರ್ಕಾರಿ ನೌಕರರಿಗೆ ಹಲವು ಸುತ್ತೋಲೆಗಳ ಮೂಲಕ ಮಾಹಿತಿ ನೀಡಲಾಗಿತ್ತು. ಈಗ ಮತ್ತೊಮ್ಮೆ ಈ ಕುರಿತು ವಿವರಣೆ ನೀಡಲಾಗಿದೆ.












Click it and Unblock the Notifications