ಸ್ಥಳೀಯ ಸ್ಟಾರ್ಟ್-ಅಪ್‌ಗಳಿಗೆ ಬೆಂಬಲ:ಕರ್ನಾಟಕ ಸರ್ಕಾರದೊಂದಿಗೆ ಗೂಗಲ್ ಒಪ್ಪಂದ

ಬೆಂಗಳೂರು, ನ. 18: ರಾಜ್ಯದ ಸ್ಥಳೀಯ ಸ್ಟಾಟ್‌ ಅಪ್‌ಗಳಿಗೆ ಬೆಂಬಲ ಮತ್ತು ಉತ್ತೇಜನ ನೀಡಲು ಗೂಗಲ್ ಸಂಸ್ಥೆ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಕುರಿತು ತಿಳುವಳಿಕೆ ಪತ್ರಕ್ಕೆ (Memorandum of understanding) ಸಹಿ ಹಾಕಿದೆ. ಸ್ಥಳೀಯ ಆವಿಷ್ಕಾರವನ್ನು ಉತ್ತೇಜಿಸಲು ಮತ್ತು ರಾಜ್ಯದಾದ್ಯಂತ ಸ್ಟಾರ್ಟ್-ಅಪ್‌ಗಳ ಬೆಳವಣಿಗೆಯನ್ನು ಉತ್ತೇಜಿಸಲು ಗೂಗಲ್ ಒಪ್ಪಿಗೆ ಸೂಚಿಸಿದೆ.

ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (KITS) ಸಹಯೋಗದೊಂದಿಗೆ, ಗೂಗಲ್‌ನ ಮಹಿಳಾ ನೇತೃತ್ವದ ಸಂಸ್ಥಾಪಕರು ನಗರಗಳಾದ್ಯಂತ ಅಗತ್ಯ ತರಬೇತಿ, ಪಾಲುದಾರರಿಗೆ ಪ್ರವೇಶ, ಗೂಗಲ್‌ನ ಪರಿಕರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡುತ್ತವೆ.

Google ties up with Karnataka to support local start ups

ಬಳಕೆದಾರರ ಅನುಭವ, ಆಂಡ್ರಾಯ್ಡ್, ವೆಬ್, ಉತ್ಪನ್ನ ತಂತ್ರ, ನಾಯಕತ್ವ ಮತ್ತು ಮಾರ್ಕೆಟಿಂಗ್‌ನಂತಹ ಕ್ಷೇತ್ರಗಳಲ್ಲಿ ಜ್ಞಾನ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಗೂಗಲ್‌ನ ಹೇಳಿಕೆಯಲ್ಲಿ ತಿಳಿಸಿದೆ.

ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ವೃತ್ತಿ ಪ್ರಮಾಣಪತ್ರಗಳಿಗಾಗಿ ಗೂಗಲ್ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತದೆ. ಜೊತೆಗೆ ಮಕ್ಕಳಿಗೆ ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವದ ಮೂಲಭೂತ ಅಂಶಗಳನ್ನು ಉತ್ತೇಜಿಸಲು 'Be Internet Awesome' ಕಾರ್ಯಕ್ರಮ ನಡೆಸಲು ಯೋಜಿಸಿದೆ.

ಇತ್ತ, ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಗೂಗಲ್‌ ತನ್ನ ಹಿಡಿತವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಈ ಬಾರಿ ಸಿಸಿಐ (ಭಾರತದ ಸ್ಪರ್ಧಾತ್ಮಕ ಆಯೋಗ) ಕಣ್ಣಿಗೆ ಗುರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+