Gold Price: ಚಿನ್ನದ ಬೆಲೆ 11,000 ರೂಪಾಯಿ ಕುಸಿತ, ಆಭರಣ ಪ್ರಿಯರಿಗೆ ಭರ್ಜರಿ...
ಚಿನ್ನ.. ಚಿನ್ನ... ಅಂತಾ ಚಿನ್ನದ ಜಪ ಮಾಡುತ್ತಿದ್ದ ಜನರಿಗೆ ಇದೀಗ ಭರ್ಜರಿ ಸುದ್ದಿಯೇ ಸಿಗುತ್ತಿದೆ. ಒಂದು ಕಡೆ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದೆ, ಇನ್ನು ಮುಂದೆ ಹೇಗಪ್ಪಾ ಚಿನ್ನ ಖರೀದಿ ಮಾಡುವುದು? ಅಂತಾ ಚಿಂತೆ ಜನರಲ್ಲಿ ಇತ್ತು. ಆದರೆ ಇದೀಗ ಆ ಚಿಂತೆ & ಸಮಸ್ಯೆ ದೂರ ಆದಂತೆ ಆಗಿದೆ. ಅಂದ್ರೆ ದಿಢೀರ್ ಚಿನ್ನದ ಬೆಲೆ ಮತ್ತೆ ಕುಸಿತ ಕಾಣುತ್ತಿದ್ದು, ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಸಖತ್ ಖುಷಿ ನೀಡಿದೆ. ಚಿನ್ನದ ಬೆಲೆ 11,000 ರೂಪಾಯಿ ಕುಸಿತ, ಆಭರಣ ಪ್ರಿಯರಿಗೆ ಭರ್ಜರಿ...
ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದ ಹಿನ್ನೆಲೆ, ಜನರು ಕೂಡ ಚಿಂತೆ ಮಾಡುವ ಪರಿಸ್ಥಿತಿ ಇತ್ತು. ಯಾಕಂದ್ರೆ ಈಗಾಗಲೇ ಮದುವೆ ಸೀಸನ್ ಆರಂಭ ಆಗಿದ್ದು, ಇನ್ನೇನು ಮದುವೆಗಳಿಗೆ ಮುಹೂರ್ತ ಕೂಡ ಇರುವುದಿಲ್ಲ, ಹೀಗಾಗಿ ಜನರು ಕೂಡ ಶುಭಕಾರ್ಯ ಮಾಡಿ ಮುಗಿಸಲು ಚಿನ್ನದ ಆರ್ಡರ್‌ಗೆ ಮುಂದಾಗಿದ್ದರು. ಆದರೆ ಇದೇ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿತ್ತು. ಹೀಗಿದ್ದಾಗಲೇ, ಚಿನ್ನದ ಬೆಲೆ 11,000 ರೂಪಾಯಿ ಕುಸಿತ, ಆಭರಣ ಪ್ರಿಯರಿಗೆ ಭರ್ಜರಿ...

ಚಿನ್ನದ ಬೆಲೆ 11,000 ರೂಪಾಯಿ....
ಹೌದು, ಇದೀಗ ಚಿನ್ನದ ಬೆಲೆ ಮತ್ತೆ ಕುಸಿತದ ಹಾದಿಯನ್ನ ಹಿಡಿಯುತ್ತಿದೆ. ಅದರಲ್ಲೂ ಕೆಲ ದಿನಗಳಿಂದ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಕುಸಿತದ ಹಾದಿಗೆ ವಾಪಸ್ ಬಂದಿರುವುದು ಆಭರಣ ಪ್ರಿಯರಿಗೆ ಸಖತ್ ಖುಷಿ ನೀಡಿದೆ. ಮತ್ತೊಂದು ಕಡೆಯಲ್ಲಿ ಚಿನ್ನ ಖರೀದಿ ಮಾಡಲು ಇದು ಸೂಕ್ತ ಸಮಯ ಆಗಿದೆಯೇ? ಎಂಬ ಬಗ್ಗೆ ಕೂಡ ಜನರು ಈ ಸಂದರ್ಭದಲ್ಲಿ ಯೋಚನೆ ಮಾಡುತ್ತಿದ್ದಾರೆ. ಹಾಗಿದ್ರೆ ಕುಸಿತದ ನಂತರ ಎಷ್ಟಿದೆ ಚಿನ್ನದ ಬೆಲೆ?
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ...
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಕುಸಿತ ಕಂಡು ಪ್ರತಿ 1 ಕೆ.ಜಿಗೆ ಇದೀಗ 10,000 ರೂಪಾಯಿ ಇಳಿಕೆ ಕಂಡಿದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 1,000 ರೂಪಾಯಿ ಇಳಿಕೆ ಕಂಡಿದೆ. ಹೀಗಾಗಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 71,500 ರೂ. ಆಗಿದೆ.
ಮತ್ತೊಂದು ಕಡೆ 24 ಕ್ಯಾರೆಟ್ ಚಿನ್ನದ ಬೆಲೆಯು ಕುಸಿತ ಕಂಡು ಪ್ರತಿ 1 ಕೆ.ಜಿಗೆ ಇದೀಗ 11,000 ರೂಪಾಯಿ ಇಳಿಕೆ ಆಗಿದೆ. ಈ ಮೂಲಕ ಸದ್ಯಕ್ಕೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 78,000 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿ ಬದಲಾವಣೆ ಆಗಿಲ್ಲ, ಹೀಗಾಗಿ ಬೆಳ್ಳಿ ಇದೀಗ ಪ್ರತಿ 1 ಕೆ.ಜಿಗೆ 91,500 ರೂಪಾಯಿಗೆ ಮಾರಾಟ ಆಗುತ್ತಿದೆ.












Click it and Unblock the Notifications