Gold And Silver Price: ಚಿನ್ನದ ಬೆಲೆ ಮತ್ತೆ ಏರಿಕೆ; ಬೆಂಗಳೂರಿನಲ್ಲಿ ಆ.12ರ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ

ಬೆಂಗಳೂರು: ಆಷಾಢ ಮಾಸ ಮುಗಿದು ಶ್ರಾವಣ ಮಾಸಕ್ಕೆ ಕಾಲಿಡುವ ಸಮಯವಾಗಿದ್ದು, ರಾಜ್ಯದಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಹಲವು ಶುಭ ಕಾರ್ಯಗಳಿಗೆ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಆಭರಣ ಖರೀದಿಗೆ ಮುಂದಾಗಿರುವ ಗ್ರಾಹಕರಿಗೆ ಆತಂಕ ಮೂಡಿಸಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆ, ಹಣದುಬ್ಬರ, ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಸಂಗ್ರಹ ಹೆಚ್ಚಿಸುತ್ತಿರುವುದು ಹಾಗೂ ವಿವಿಧ ಭೌಗೋಳಿಕ-ರಾಜಕೀಯ ಬೆಳವಣಿಗೆಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಿವೆ. ಮುಂದಿನ ದಿನಗಳಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Gold And Silver Price Today Check Latest Gold Rate On August 12 2026

1 ಗ್ರಾಮ್​ಗೆ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ

ಬೆಂಗಳೂರು: 14,195 ರೂ

ಚೆನ್ನೈ: 14,220 ರೂ

ಮುಂಬೈ: 14,220 ರೂ

ದೆಹಲಿ: 14,235 ರೂ

ಕೋಲ್ಕತಾ: 14,220 ರೂ

ಕೇರಳ: 14,220 ರೂ

ಅಹ್ಮದಾಬಾದ್: 14,225 ರೂ

ಜೈಪುರ್: 14,235 ರೂ

ಲಕ್ನೋ: 14,235 ರೂ

ಭುವನೇಶ್ವರ್: 14,220 ರೂ

ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರ ಮತ್ತೆ ಏರಿಕೆ

24 ಕ್ಯಾರೆಟ್‌ ಚಿನ್ನ: ಪ್ರತಿ ಗ್ರಾಂಗೆ 104 ಏರಿಕೆ, 15,486

24 ಕ್ಯಾರೆಟ್‌ ಚಿನ್ನ: 10 ಗ್ರಾಂಗೆ ₹1,040 ಏರಿಕೆ, 1,54,860

22 ಕ್ಯಾರೆಟ್‌ ಚಿನ್ನ: ಪ್ರತಿ ಗ್ರಾಂಗೆ ₹95 ಏರಿಕೆ, 14,195

22 ಕ್ಯಾರೆಟ್‌ ಚಿನ್ನ: 10 ಗ್ರಾಂಗೆ ₹950 ಏರಿಕೆ, 1,41,950

18 ಕ್ಯಾರೆಟ್‌ ಚಿನ್ನ: ಪ್ರತಿ ಗ್ರಾಂಗೆ ₹77 ಏರಿಕೆ, 11,614

18 ಕ್ಯಾರೆಟ್‌ ಚಿನ್ನ: 10 ಗ್ರಾಂಗೆ ₹770 ಏರಿಕೆ, 1,16,140

ಕಳೆದ 5 ದಿನಗಳ ಚಿನ್ನದ ದರ

ಆಗಸ್ಟ್‌ 8ರಂದು 24 ಕ್ಯಾರೆಟ್‌ ಚಿನ್ನದ ಪ್ರತಿ ಗ್ರಾಂ ದರದಲ್ಲಿ 109 ಏರಿಕೆ ಕಂಡುಬಂದಿತ್ತು. 22 ಕ್ಯಾರೆಟ್‌ ಚಿನ್ನದ ದರ ಪ್ರತಿ ಗ್ರಾಂಗೆ 100 ಹೆಚ್ಚಾಗಿತ್ತು. ಆಗಸ್ಟ್‌ 9ರಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಆಗಸ್ಟ್‌ 10ರಂದು 24 ಕ್ಯಾರೆಟ್‌ ಚಿನ್ನದ ಪ್ರತಿ ಗ್ರಾಂ ದರದಲ್ಲಿ 38 ಇಳಿಕೆ ಹಾಗೂ 22 ಕ್ಯಾರೆಟ್‌ ಚಿನ್ನದ ದರದಲ್ಲಿ 35 ಇಳಿಕೆ ದಾಖಲಾಗಿತ್ತು.

ಆಗಸ್ಟ್‌ 11ರಂದು ಮತ್ತೆ ಭರ್ಜರಿ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್‌ ಚಿನ್ನದ ಪ್ರತಿ ಗ್ರಾಂ ದರ 185 ಹಾಗೂ 22 ಕ್ಯಾರೆಟ್‌ ಚಿನ್ನದ ದರ 170 ಹೆಚ್ಚಾಗಿತ್ತು.ಇದೀಗ ಆಗಸ್ಟ್‌ 12ರಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 24 ಕ್ಯಾರೆಟ್‌ ಪ್ರತಿ ಗ್ರಾಂಗೆ 104 ಹಾಗೂ 22 ಕ್ಯಾರೆಟ್‌ ಪ್ರತಿ ಗ್ರಾಂಗೆ 95 ಹೆಚ್ಚಳವಾಗಿದೆ.

ಇಂದು ಬೆಳ್ಳಿ ದರ ಎಷ್ಟಿದೆ?

ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ, ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

1 ಗ್ರಾಂ ಬೆಳ್ಳಿ: 255 ರೂ

10 ಗ್ರಾಂ ಬೆಳ್ಳಿ: 2,550 ರೂ

1 ಕೆಜಿ ಬೆಳ್ಳಿ: 2,55,000 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+