Get Updates
Get notified of breaking news, exclusive insights, and must-see stories!

Goa New Rules: ಗೋವಾ ಟ್ರಿಪ್‌ ಹೋಗುವವರಿಗೆ ಶಾಕ್‌, ಈ ತಪ್ಪು ಮಾಡಿದ್ರೆ ₹10,000 ಫೈನ್‌

ಪ್ರವಾಸಿಗರ ಮೋಸ್ಟ್‌ ಫೇವರೇಟ್‌ ಜಾಗ ಅಂದ್ರೆ ಗೋವಾ. ಯುವಕ ಯುವತಿಯರಂತೂ ಬಿಡುವು ಸಿಕ್ರೆ ಸಾಕು ಗೋವಾ ಟ್ರಿಪ್‌ ಪ್ಲ್ಯಾನ್‌ ಮಾಡೋ ಟ್ರೆಂಡ್‌ ಮೊದಲಿನಿಂದಲೂ ಇದೆ. ರಜೆ ಸಿಕ್ಕ ತಕ್ಷಣ ಅಲ್ಲಿಗೆ ಟ್ರಿಪ್‌ ಹೋಗೋಣ್ವಾ ಎಂದು ಕರೆಯೋ ಫ್ರೆಂಡ್ಸ್‌ ಕಡಿಮೆಯೇನಿಲ್ಲ. ಅಷ್ಟರಮಟ್ಟಿಗೆ ಗೋವಾ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಆದರೆ ಇನ್ನು ಮುಂದೆ ಗೋವಾಗೆ ಹೋಗುವವರು ಹುಷಾರಾಗಿರಬೇಕು. ಅಪ್ಪಿತಪ್ಪಿಯೂ ಈ ತಪ್ಪು ಮಾಡಿದ್ರೆ ಸ್ಥಳದಲ್ಲೇ ನೀವು 10,000 ರೂಪಾಯಿ ಫೈನ್‌ ಬೀಳೋದು ಗ್ಯಾರಂಟಿ.

ಗೋವಾವನ್ನು ಭಾರತದ ಪಾರ್ಟಿ ರಾಜಧಾನಿ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿನ ಕಡಲತೀರಗಳನ್ನು ಆನಂದಿಸಲು, ಪಾರ್ಟಿ, ಪಬ್‌ ಅಂತ ಮೋಜು ಮಸ್ತಿ ಮಾಡಲು ಭೇಟಿ ನೀಡುತ್ತಾರೆ. ಹೀಗಾಗಿ ಗೋವಾದಲ್ಲಿ ಪ್ರವಾಸಿಗರು ಮತ್ತು ಹೊರರಾಜ್ಯದ ವಾಹನಗಳ ಸಂಖ್ಯೆ ಕೂಡ ಅಧಿಕ. ಹೀಗಾಗಿ ಅಲ್ಲಿನ ಸರ್ಕಾರ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ. ಯಾಮಾರಿ ನೀವು ಈ ತಪ್ಪು ಮಾಡಿದರೆ ಸ್ಥಳದಲ್ಲೇ 10,000 ರೂಪಾಯಿ ದಂಡ ಬೀಳಲಿದೆ.

Goa New Rule 10000 Fine For Vehicles Without PUC Certificate Tourists Be Alert

ಗೋವಾ ಸರ್ಕಾರವು ಈಗ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಗೋವಾ ಪ್ರವೇಶಿಸುವ ಎಲ್ಲ ವಾಹನಗಳು ಅಗತ್ಯ ದಾಖಲೆಗಳನ್ನು ಹೊಂದಿರಲೇಬೇಕು. ಈ ಹೊಸ ವ್ಯವಸ್ಥೆಯು ಗೋವಾಕ್ಕೆ ಪ್ರವೇಶಿಸುವ ವಾಹನಗಳು ಪೊಲ್ಯೂಷನ್ ಅಂಡರ್ ಕಂಟ್ರೋಲ್ (ಪಿಯುಸಿ) ಪ್ರಮಾಣಪತ್ರವನ್ನು ಹೊಂದಿವೆ ಎಂದು ಖಚಿತಪಡಿಸುತ್ತದೆ. ಒಂದು ವೇಳೆ ಇದು ನಿಮ್ಮ ವಾಹನದಲ್ಲಿ ಇಲ್ಲದಿದ್ದರೆ, ಸ್ಥಳದಲ್ಲೇ 10,000 ರೂಪಾಯಿ ದಂಡ ವಿಧಿಸಲು ಮುಂದಾಗಿದೆ.

ಇನ್ಮುಂದೆ GoVA ರೂಲ್ಸ್‌

ಗಡಿ ವಾಹನ ಪರಿಶೀಲನೆ ವಿಧಾನವನ್ನು ಆಧುನೀಕರಿಸುವ ಸಲುವಾಗಿ ಗೋವಾ ಸರ್ಕಾರವು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಎಐ ಆಧಾರಿತ ಹೊಸ ವ್ಯವಸ್ಥೆಯನ್ನು ಪ್ರಸ್ತುತ ಮೊಲ್ಲೆಮ್ ಚೆಕ್‌ಪೋಸ್ಟ್‌ನಲ್ಲಿ ಅಳವಡಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಮಿಸ್ಟೋಟೆಕ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ವ್ಯವಸ್ಥೆಗೆ ಗೋವಾ ವಾಹನ ದೃಢೀಕರಣ ವ್ಯವಸ್ಥೆ (GoVA) ಎಂದು ಹೆಸರಿಟ್ಟಿದೆ.

ಇದು ವಾಹನ ದಾಖಲೆಗಳನ್ನು ಪರಿಶೀಲಿಸಲು, ನೈಜ-ಸಮಯದ ಡೇಟಾಬೇಸ್‌ನೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ. ಈ ಹೊಸ ಉಪಕ್ರಮಕ್ಕಾಗಿ ಗೋವಾದ ಮಾಹಿತಿ ತಂತ್ರಜ್ಞಾನ ಇಲಾಖೆ ಪೊಲೀಸ್ ಇಲಾಖೆಯೊಂದಿಗೆ ಸೇರಿ ಕೆಲಸ ಮಾಡಲಿದೆ. ಇದು ವಾಹನದ ನೋಂದಣಿ ಸಂಖ್ಯೆ ಬಳಸಿಕೊಂಡು ದಾಖಲೆಗಳ ತ್ವರಿತ ಪರಿಶೀಲನೆ ನಡೆಸುತ್ತದೆ. ವಿಮೆ ಮತ್ತು ವಾಹನ ಮಾಲಿನ್ಯ ಪ್ರಮಾಣಪತ್ರವನ್ನು ವೇಗವಾಗಿ ಪರಿಶೀಲಿಸಲಿದೆ.

ಯಾವುದಕ್ಕೆ ಎಷ್ಟು ದಂಡ?

ವಿಮೆ ಹೊಂದಿರದ ವಾಹನ ಚಾಲನೆ ಮಾಡಿದರೆ ಮೊದಲ ಬಾರಿಗೆ 2,000 ರೂ. ದಂಡ, ಎರಡನೇ ಬಾರಿಗೆ 4,000 ರೂ. ದಂಡ, ಪಿಯುಸಿ ಪ್ರಮಾಣಪತ್ರವಿಲ್ಲದ ವಾಹನಕ್ಕೆ 10,000 ರೂ. ದಂಡದ ಮೊತ್ತ ನಿಗದಿ ಮಾಡಲಾಗಿದೆ. ವಯಸ್ಸು ಮೀರಿದ ವಾಹನಗಳಿಗೆ ಗೋವಾಗೆ ಎಂಟ್ರಿಯೇ ನೀಡಲಾಗುವುದಿಲ್ಲ ಎಂದು ಖಡಕ್‌ ಆಗಿ ತಿಳಿಸಿದೆ. ಈಗಾಗಲೇ ಈ ರೂಲ್ಸ್‌ ಗೋವಾ ಚೆಕ್‌ಪೋಸ್ಟ್‌ನಲ್ಲಿ ಜಾರಿಯಾಗಿದೆ.

ಇನ್ನು ಮುಂದೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಪ್ರವೇಶಿಸುವ ವಾಹನಗಳು ಈ ಚೆಕ್‌ಪೋಸ್ಟ್‌ನಲ್ಲಿ ಸ್ವಯಂಚಾಲಿತ ದಾಖಲೆ ಪರಿಶೀಲನೆಗೆ ಒಳಗಾಗುತ್ತವೆ. ಗೋವಾಕ್ಕೆ ಪ್ರವೇಶಿಸುವ ವಾಹನಗಳಲ್ಲಿ ಯಾವುದೇ ದಾಖಲೆ ಅಮಾನ್ಯವಾಗಿದ್ದರೆ, ಅದನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಿ ಸ್ಥಳದಲ್ಲೇ ಚಲನ್ ನೀಡಿ ದಂಡ ವಿಧಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+