‘ಲೈನ್‍ಮನ್’ಗೆ ಪರ್ಯಾಯ ಹೆಸರು ಸೂಚಿಸಿ ಬಹುಮಾನ ಗೆಲ್ಲಿ: ಡಿಕೆಶಿ

ಬೆಂಗಳೂರು, ಜುಲೈ 7: ಮನೆಗಳಿಗೆ ವಿದ್ಯುತ್ ಸಮಸ್ಯೆಯಾದರೆ ಥಟ್ಟನೆ ನೆನಪಾಗುವವರು 'ಲೈನ್‍ಮನ್'ಗಳು. ಕರ್ನಾಟಕದಲ್ಲಿ ಸಾವಿರಾರು 'ಲೈನ್‍ಮನ್'ಗಳು ಕಾರ್ಯ ನಿರ್ವಹಿಸುತ್ತಾರೆ. ಈ 'ಲೈನ್‍ಮನ್' ಪದಕ್ಕೆ ಪರ್ಯಾಯ ಹೆಸರು ಸೂಚಿಸಿ ಎಂದು ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಕೇಳಿಕೊಂಡಿದ್ದಾರೆ.

"ರಾಜ್ಯಕ್ಕೆ 'ಲೈನ್‍ಮನ್'ಗಳು ನೀಡುತ್ತಿರುವ ಸೇವೆಯನ್ನು ಪರಿಗಣಿಸಿ, ರಾಜ್ಯ ಇಂಧನ ಇಲಾಖೆಯು ಈ ಹುದ್ದೆಯಲ್ಲಿರುವವರಿಗೆ ನೂತನ ಹೆಸರನ್ನು ಇಡಲು ಇಚ್ಚಿಸಿದೆ," ಎಂದು ಅವರು ತಮ್ಮ ಫೇಸ್ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

Give a new name to ‘Lineman’ and win attractive prize: dk shivakumar

ಇದಕ್ಕೆ 2 ಸಾವಿರಕ್ಕೂ ಅಧಿಕ ಜನ ಕಮೆಂಟ್ ಮಾಡಿದ್ದು ಫೇಸ್ಬುಕ್ಕಿನಲ್ಲಿ ವೈರಲ್ ಆಗಿದೆ. ಹಲವರು ತಮ್ಮ ಇಷ್ಟದ ಹೆಸರನ್ನು ಸೂಚಿಸಿದ್ದರೆ, ಇನ್ನು ಕೆಲವರು ಇಂಥಹದ್ದೊಂದು ಹೆಸರಿನ ಬದಲಾವಣೆಯ ಔಚಿತ್ಯದ ಬಗ್ಗೆಯೇ ಅಪಸ್ವರ ಎತ್ತಿದ್ದಾರೆ. ಇನ್ನು ಕೆಲವರು ನಮ್ಮ ಹುದ್ದೆಗೆ ಗೌರವ ನೀಡಿ ಅಷ್ಟೇ ಸಾಕು ಎಂದು ಹೇಳಿದ್ದಾರೆ.

ಮಾತ್ರವಲ್ಲ ಆಯ್ಕೆಯಾದ ಹೆಸರು ಕಳುಹಿಸಿದವರಿಗೆ ಆಕರ್ಷಕ ಬಹುಮಾನವಿರಲಿದೆ. ಅಂತಿಮವಾಗಿ ಆಯ್ಕೆಯಾದ ಹೆಸರಿಗೆ ಒಂದಕ್ಕಿಂತಲೂ ಹೆಚ್ಚಿನ ಪ್ರವೇಶಗಳು ಬಂದಲ್ಲಿ ಲಕ್ಕಿ ಡ್ರಾ ಮೂಲಕ ಒರ್ವ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದ್ದಾರೆ.

ಹೆಸರು ಸೂಚಿಸಲು ಕೊನೆಯ ದಿನಾಂಕ ಜುಲೈ 20, 2017. ಹೆಸರುಗಳನ್ನು ಫೇಸ್ಬುಕ್ ಮೂಲಕವೂ ನೀಡಬಹುದು, ಇ-ಮೇಲ್‍ ಮಾಡುವವರು [email protected] ಅಥವಾ +919108461480 ನಂಬರ್‍ಗೆ ವಾಟ್ಸ್ ಆಪ್ ಸಂದೇಶ ಕಳುಹಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+