ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ, ವೇತನ ಹೆಚ್ಚಳ, ಎಷ್ಟು?
ಬೆಂಗಳೂರು, ಜನವರಿ 30: ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೊಂದು ಸಿಹಿಸುದ್ದಿ, ಉಪನ್ಯಾಸಕರ ಗೌರವ ಧನ ಹೆಚ್ಚಿಸಲು ಯುಜಿಸಿ ನಿರ್ಧರಿಸಿದೆ.
ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಕುಲಪತಿಗಳಿಗೆ ಸೂಚನೆ ನೀಡಿದೆ. ಅದರ ಪ್ರಕಾರ ಮಾಸಿಕ ಗರಿಷ್ಠ 50 ಸಾವಿರ ರೂವರೆಗೆ ವೇತನ ನೀಡಬೇಕಾಗುತ್ತದೆ.
ಅತಿಥಿ ಉಪನ್ಯಾಸಕರನ್ನು ಬೇಕಾಬಿಟ್ಟಿ ನೇಮಕ ಮಾಡುವಂತಿಲ್ಲ, ವಿವಿಗಳು ಪ್ರತ್ಯೇಕ ಸಮಿತಿ ರಚಿಸಬೇಕು. ಕುಲಪತಿ ಅಥವಾ ಅವರು ಸೂಚಿಸಿದ್ದ ವ್ಯಕ್ತಿಯು ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ವಿಷಯ ತಜ್ಞ, ಆಯಾ ವಿಷಯ ಹಿರಿಯ ಡೀನ್, ವಿಭಾಗದ ಮುಖ್ಯಸ್ಥ, ಶೈಕ್ಷಣಿಕ ತಜ್ಞರು ಸಮಿತಿಯಲ್ಲಿರಬೇಕು.

ಅತಿಥಿ ಉಪನ್ಯಾಸಕರಿಗೂ ಏಳನೇ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಗೌರವ ಧನ ನೀಡಬೇಕೆಂದು ವಿವಿ ಧನ ಸಹಾಯ ಆಯೋಗ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಿಳಿಸಿತ್ತು.
ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 14 ಸಾವಿರ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ 11-14 ಸಾವಿರ ರೂ ಮಾಸಿಕ ಗೌರವ ಧನ ನೀಡುತ್ತಿದೆ.ಈ ಎಲ್ಲಾ ನಿಯಮಗಳು ಜನವರಿ 28ರಿಂದಲೇ ಅನ್ವಯವಾಗಲಿವೆ.












Click it and Unblock the Notifications