ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ

ಗದಗ, ಸೆಪ್ಟೆಂಬರ್ 25 : ಗದಗ ಜಿಲ್ಲೆಯ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆಗೊಂಡಿದೆ. 50 ಕೋಟಿ ರೂ. ವೆಚ್ಚದಲ್ಲಿ 167 ಎಕರೆ ಜಮೀನಿನಲ್ಲಿ ಪಶು ವೈದ್ಯಕೀಯ ಕಾಲೇಜನ್ನು ನಿರ್ಮಾಣ ಮಾಡಲಾಗಿದೆ.

ಪಶುಸಂಗೋಪನಾ ಸಚಿವ ಎ.ಮಂಜು ಅವರು ಸೋಮವಾರ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಉದ್ಘಾಟಿಸಿದರು. ಹೊಂಬಾಳ ರಸ್ತೆಯಲ್ಲಿ ಈ ಕಾಲೇಜು ನಿರ್ಮಾಣವಾಗಿದ್ದು, ಇಂದಿನಿಂದಲೇ ತರಗತಿಗಳು ಆರಂಭವಾಗಲಿವೆ.

 Gadag veterinary college inaugurated

ಈ ಕಾಲೇಜು ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ 50 ಕೋಟಿ ರೂ. ಮಂಜೂರಾಗಿತ್ತು. ಈ ಪೈಕಿ 38.7 ಕೋಟಿ ರೂ. ಈ ಮಹಾವಿದ್ಯಾಲಯಕ್ಕೆ ವೆಚ್ಚ ಮಾಡಲಾಡಲಾಗಿದ್ದು, ಮುಖ್ಯ ಕಟ್ಟಡ, ವಿದ್ಯಾರ್ಥಿಗಳ ಹಾಸ್ಟೆಲ್, ಮೆಸ್, ವಸತಿ ಗೃಹ, ಮೂಲಭೂತ ಸೌಕರ್ಯ ಪೂರ್ಣಗೊಳಿಸಲಾಗಿದೆ.

ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ ನಿಯಮಾವಳಿಯಂತೆ ಪಶು ವೈದ್ಯಕೀಯ ಕಾಲೇಜಿಗೆ ಒದಗಿಸಬೇಕಾದ ಸೌಕರ್ಯಗಳನ್ನು ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 2 ನೇ ಹಂತದಲ್ಲಿ 65 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ.

ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ ಅನುಮೋದನೆ ಪಡೆಯಲಾಗಿದ್ದು, ಇಂದಿನಿಂದಲೇ ಕಾಲೇಜಿನ ತರಗತಿಗಳು ಆರಂಭವಾಗಿವೆ. ಡೀನ್, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ವೃಂದದ ನೇಮಕಾತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+