ಗದಗ : ಇಂದಿನಿಂದ ದೇವರಾಜ್ ಅರಸು ಛಾಯಾಚಿತ್ರ ಪ್ರದರ್ಶನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಗದಗ, ಮಾರ್ಚ್ 28 : ಡಿ. ದೇವರಾಜ ಅರಸು ಅವರ ಜೀವನಚರಿತ್ರೆ ಬಿಂಬಿಸುವ ವಿಶೇಷ ಛಾಯಾಚಿತ್ರಗಳ ಪ್ರದರ್ಶನವು ನಗರದ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ಸಮುಚ್ಛಯದಲ್ಲಿ ಮಾ. 28 ರಿಂದ ಆರಂಭವಾಗಲಿದೆ.

ಎರಡು ದಿನಗಳವರೆಗೆ ನಡೆಯುವ ಈ ಪ್ರದರ್ಶನವನ್ನು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಅವರು ಇಂದು ಉದ್ಘಾಟಿಸಲಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಪರಿವರ್ತನೆಯ ಹರಿಕಾರ ಅರಸು ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ವೀಕ್ಷಿಸಬಹುದಾಗಿದೆ. [ಅರಸು ಹುಟ್ಟೂರು ದತ್ತು ಪಡೆದ ಸರ್ಕಾರ]

devaraj urs

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವಜನ ಸಬಲೀಕರಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯೋಜಿಸಿರುವ ಈ ಅಪರೂಪದ ಛಾಯಾಚಿತ್ರ ಪ್ರದರ್ಶನದಲ್ಲಿ 76 ಚಿತ್ರಗಳಿವೆ. [ಮೈಸೂರಲ್ಲಿ ಅರಸು ಜನ್ಮಶತಮಾನೋತ್ಸವಕ್ಕೆ ಚಾಲನೆ]

devaraj urs

ಅರಸು ಅವರು ಸ್ವತಹ ಕೃಷಿಕರಾಗಿ ಉಳುಮೆ ಮಾಡುತ್ತಿದ್ದ, ಅರಸು ಕುಟುಂಬದ ಸದಸ್ಯರ, ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭ, ಭೂ ಸುಧಾರಣಾ ಕಾಯ್ದೆ ಫಲಾನುಭವಿಗಳಿಗೆ ಭೂ ಅಧಿಕಾರ ವಿತರಣೆ ಮಾಡಿದ ಚಿತ್ರ ಸೇರಿದಂತೆ ಹಲವಾರು ಚಿತ್ರಗಳಿವೆ. [ವಕೀಲೆ ಚಿತ್ರಲೇಖಾ ಕೊಲೆ ಪ್ರಕರಣ: ದೇವರಾಜ್ ಅರಸ್ ಪುತ್ರಿಗೆ ರಿಲೀಫ್]

devaraj urs2

ಜೊತೆಗೆ ಕೃಷಿ, ಕಾರ್ಮಿಕರಿಗೆ ಕನಿಷ್ಠ ವೇತನ, ಮಲ ಹೊರುತ್ತಿರುವ ಪದ್ಧತಿ ನಿಷೇಧ, ಜೀತ ವಿಮುಕ್ತಿ, ಋಣ ಪರಿಹಾರ, ನಿರುದ್ಯೋಗಿ ಪದವೀಧರರಿಗೆ ಭತ್ಯೆ, ವೃದ್ಧಾಪ್ಯ ವೇತನ, ಸೂರಿಲ್ಲದವರಿಗೆ ಜನತಾ ಮನೆ, ಕೊಳಚೆ ಪ್ರದೇಶಗಳ ಅಭಿವೃಧ್ಧಿ ಹಾಗೂ ನಿರ್ವಹಣೆ, ಹಿಂದುಳಿದ ವರ್ಗದವರಿಗೆ ಮೀಸಲು ಜಾರಿ, ಬಡವರ ನೆರವಿಗಾಗಿ ಸಹಕಾರಿ ಸಂಘಗಳ ಸ್ಥಾಪನೆ, ಹಿಂದುಳಿದ ವರ್ಗಗಳ ಇಲಾಖೆ ಸ್ಥಾಪನೆ ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತ ಮಾಹಿತಿ ಕೂಡಾ ನೀಡಲಾಗಿತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A two-day photo exhibition on the life of the former Chief Minister late D. Devaraj Urs will begin at the K.H.Patil ground Gadag, Karnataka on March 28, 2016.
Please Wait while comments are loading...