ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ಕಡ್ಡಾಯ; ಪೋಷಕರ ಆಕ್ರೋಶ

ಬೆಂಗಳೂರು, ಮೇ 05; ಎಲ್‌ಕೆಜಿಗೆ ಮಕ್ಕಳನ್ನು ದಾಖಲು ಮಾಡಲು 2023-24ನೇ ಸಾಲಿನಿಂದ ಜೂನ್ 1ಕ್ಕೆ ಕಡ್ಡಾಯವಾಗಿ 4 ವರ್ಷ ತುಂಬಿರಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದ್ದು, ಈ ವಿಚಾರ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಲು ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮ 2025-26ನೇ ಸಾಲಿನಿಂದ ಜಾರಿಗೆ ಬರಲಿದೆ. ಈ ಹಿನ್ನಲೆಯಲ್ಲಿ ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷದ ವಯೋಮಿತಿ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.

Four Year Age Norm For LKG Admission Orders By Karnataka Govt

ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಕ್ಕಳನ್ನು ಪೂರ್ವ ಪ್ರಾಥಮಿಕ ಶಾಲಾ ದಾಖಲಾತಿ ಮಾಡಲು ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ ಎಂಬ ವಿಚಾರವನ್ನು ಈ ಆದೇಶ ಒಳಗೊಂಡಿದೆ. ಆರ್. ಟಿ. ಇ ಕಾಯಿದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ.

ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಿದೆ ಎಂಬುದನ್ನು 2025-26ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿದೆ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ.

Four Year Age Norm For LKG Admission Orders By Karnataka Govt

ಉಳಿದಂತೆ ದಿನಾಂಕ 26/07/2022ರ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 2023-24ನೇ ಸಾಲಿನಿಂದ ಎಲ್. ಕೆ. ಜಿ ತರಗತಿಗೆ ದಾಖಲಾತಿ ಹೊಂದಲು ಜೂನ್ 1ನೇ ತಾರೀಖಿಗೆ ಅನ್ವಯವಾಗುವಂತೆ 4 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿರುತ್ತದೆ ಎಂದು ಆದೇಶ ಹೇಳಿದೆ.

ಪೋಷಕರ ವಿರೋಧ ಏಕೆ?; ಈ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಗೆ ದಾಖಲಾಗುವ ಮಕ್ಕಳು 2025-26ಕ್ಕೆ 1ನೇ ತರಗತಿಗೆ ದಾಖಲಾಗಿದ್ದಾರೆ. ಆಗ ಮಕ್ಕಳ ದಾಖಲಾತಿಗೆ ವಯಸ್ಸಿನ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಇದೀಗ ಪೂರ್ವ ಪ್ರಾಥಮಿಕ (ಎಲ್‌ಕೆಜಿ) ಪ್ರವೇಶಕ್ಕೂ ವಯೋಮಿತಿ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಎಲ್‌ಕೆಜಿಗೆ ದಾಖಲಾಗುವ ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಆದೇಶ ಹೊರಡಿಸಲಾಗಿದೆ. ಇಲ್ಲವಾದಲ್ಲಿ ಎಲ್‌ಕೆಜಿ, ಯುಕೆಜಿ ಮುಗಿದರೂ ಮಕ್ಕಳ ವಯಸ್ಸು ಆರು ವರ್ಷವಾಗದ ಕಾರಣ ಒಂದನೇ ತರಗತಿ ಪ್ರವೇಶ ಸಾಧ್ಯವಾಗುವುದಿಲ್ಲ. ಆದ್ದರಿಂದ ವಯೋಮಿತಿ ನಿಗದಿ ಮಾಡಲಾಗಿದೆ ಎಂಬುದು ಅಧಿಕಾರಿಗಳ ಮಾಹಿತಿ.

ಈ ವಯೋಮಿತಿ ನಿಗದಿ ಅವೈಜ್ಞಾನಿಕ ಎಂದು ಪೋಷಕರು ಹೇಳಿದ್ದಾರೆ. ಜೂನ್ 1ಕ್ಕೆ ನಿಗದಿತ ವಯಸ್ಸು ತುಂಬಲು ಒಂದು ದಿನ ಕಡಿಮೆ ಇದ್ದರೂ ಸಹ ಅಂತಹ ಮಕ್ಕಳಿಗೆ ಪ್ರವೇಶ ಸಿಗುವುದಿಲ್ಲ. ಇದರಿಂದ ಮಕ್ಕಳು ಒಂದು ವರ್ಷ ಶಿಕ್ಷಣದಿಂದ ವಂಚಿತರಾಗಿ ಇರಬೇಕಾಗುತ್ತದೆ. ಆದ್ದರಿಂದ ಹಿಂದಿನ ನಿಯಮವೇ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೆ ಎಲ್‌ಕೆಜಿ ದಾಖಲಾತಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು. 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ತನಕ ವಯೋಮತಿ ಇತ್ತು. ಈ ನಿಯಮವನ್ನೇ ಮತ್ತೆ ಜಾರಿಗೆ ತಂದರೆ ಉತ್ತಮ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಹೊಸ ನಿಯಮಗಳ ಕಾರಣ ಪೋಷರು ಶಾಲೆಗಳಲ್ಲಿ ದಾಖಲಾತಿಗೆ ಹೋಗುವಾಗ ಹಲವು ಗೊಂದಲ ಉಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+