Free Bus Travel: ಉಚಿತ ಬಸ್ ಪ್ರಯಾಣಕ್ಕೆ ಮನವಿ ಮಾಡಿದ ಸಾರಿಗೆ ನಿವೃತ್ತ ನೌಕರರು
ಬೆಂಗಳೂರು, ಜೂನ್ 05: ರಾಜ್ಯ ಸರ್ಕಾರದ ಬಹುನಿರೀಕ್ಷೆಯ ಮಹಿಳೆಯರಿಗೆ ಕರ್ನಾಟಕದಾದ್ಯಂತ ಉಚಿತ ಬಸ್ ಪ್ರಯಾಣ ಯೋಜನೆ ಜೂನ್ 11ರಿಂದ ಜಾರಿಗೆ ಬರಲಿದೆ. ಇತ್ತ ಕರ್ನಾಟಕ ಸಾರಿಗೆ ಎಲ್ಲ ನಿಗಮಗಳ ನಿವೃತ್ತ ನೌಕರರು ಬೇಡಿಕೆಯೊಂದನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆ ಕಾಂಗ್ರೆಸ್ ಭರವಸೆಯಂತೆ ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಸಂಬಂಧ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಖಚಿತ ಪಡಿಸಿದ್ದು, ಯೋಜನೆ ಜೂನ್ 11 ರಿಂದ ಈ ಯೋಜನೆ ಜಾರಿಯಾಗಲಿದೆ.

ಇತ್ತ ಪುರುಷರು ಸಹ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸಾಮಾನ್ಯವಾಗಿದೆ. ಇವರೊಂದಿಗೆ ಈಗಾಗಲೇ ಸಾರಿಗೆ ಇಲಾಖೆಯಡಿ ವಿವಿಧ ನಿಗಮಗಳಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿ ಉದ್ಯೋಗಿಗಳು ಸಹ ಉಚಿತ ಬಸ್ ಪ್ರಯಾಣಕ್ಕೆ ಆಗ್ರಹಿಸಿದ್ದಾರೆ.
ಸಾರಿಗೆ ಇಲಾಖೆಯ ಅಡಿ ಸೇವೆ ಮಾಡಿ ನಾವು ನಿವೃತ್ತಿ ಹೊಂದಿದ ಬಳಿಕ ವಾರ್ಷಿಕವಾಗಿ 500 ರೂ ನಿಗಮಗಳು ವಸೂಲಿ ಮಾಡುತ್ತಿವೆ. ಸುಮಾರು ಮೂರರಿಂದ ನಾಲ್ಕು ದಶಕಗಳ ಕಾಲ ಸಾರಿಗೆ ಇಲಾಖೆ/ಸರ್ಕಾರ ಏಳಿಗೆಗಾಗಿ ಶ್ರಮಿಸಿದ್ದೇವೆ. ಹೀಗಾದರೂ ಸಹ ನಮ್ಮಿಂದ 500 ರೂ. ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ ನಮ್ಮ ಉಚಿತ ಬಸ್ ಪ್ರಯಾಣಕ್ಕೆ ಪರಿಗಣಿಸಬೇಕು.
ಸಾರಿಗೆ ಸಚಿವರಿಗೂ ಸಿಎಂಗೂ ಒಕ್ಕೂಟ ಪತ್ರ
ಜೂನ್ 11 ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ವೇಳೆ ನಾಲ್ಕು ನಿಗಮಗಳ ನಿವೃತ್ತಿ ನೌಕರರ ಪತಿ-ಪತ್ನಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿಕೊಟ್ಟು ಅಧಿಕೃತವಾಗಿ ಘೋಷಿಸಬೇಕು. ಈ ಬಗ್ಗೆ ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ.

ಸದ್ಯ ರಾಜ್ಯ ಸರ್ಕಾರ ಘೋಷಿಸಿದಂತೆ ಮಹಿಳೆಯರು ಉಚಿತ ಪ್ರಯಾಣದ ಯೋಜನೆಯಡಿ BMTC, KSRTC, NWKRTC, KKRTC ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲಿದ್ದಾರೆ. ಹವಾ ನಿಯಂತ್ರಿ (ಎಸಿ) ಬಸ್, ಎಸಿ ಸ್ಲೀಪಿರ್ ಬಸ್‌ಗಳು, ಐಶಾರಾಮಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ನಿಷೇಧಿಸಲಾಗಿದೆ. ಕರ್ನಾಟಕ ರಾಜ್ಯದ ಒಳಗೆ ಪ್ರಯಾಣಿಸಲು ಅವಕಾಶ ಇದ್ದು, ಬೇರೆಡೆ ಅವಕಾಶ ಇಲ್ಲ ಎಂದು ಸರ್ಕಾರ ತಿಳಿಸಿದೆ.
ಇನ್ನು ಪುರಷರ ಪ್ರಯಾಣ ಹಿತ ದೃಷ್ಟಿಯಿಟ್ಟುಕೊಂಡ ಸರ್ಕಾರ KSRTC ಬಸ್‌ಗಳಲ್ಲಿ ಶೇಕಡಾ 50ರಷ್ಟು ಆಸನಗಳನ್ನು ಕಾಯ್ದಿರಿಸಿ ಆದೇಶಿಸಿದೆ.












Click it and Unblock the Notifications