• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತದಾನ ಪ್ರಮಾಣ ಹೆಚ್ಚಿಸಲು ಬಿಬಿಎಂಪಿಯಿಂದ 4 ಮೊಬೈಲ್ ಆ್ಯಪ್‌

|

ಬೆಂಗಳೂರು, ಏಪ್ರಿಲ್ 05: ನಗರದ ನಿವಾಸಿಗಳು ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ನಾಲ್ಕು ಹೊಸ ಮೊಬೈಲ್ ಅಪ್ಲಿಕೇಷನ್ ಗಳನ್ನು ಬಿಬಿಎಂಪಿ ಸಿದ್ಧಪಡಿಸಿದೆ.

ಚುನಾವಣೆ ಇತಿಹಾಸದಲ್ಲಿಯೇ ನಗರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತದಾನ ಆಗುತ್ತಿಲ್ಲ. ಮತ ಕೇಂದ್ರ ಎಲ್ಲಿದೆ, ಎಲ್ಲಿಗೆ ಹುಡುಕಿಕೊಂಡು ಹೋಗಿ ಮತದಾನ ಮಾಡಬೇಕು. ಹೇಗೆ ಮತದಾನ ಮಾಡಬೇಕು ಎಂದು ಕೆಲವರಿಗೆ ತಿಳಿದಿಲ್ಲ. ಇನ್ನೂ ಕೆಲವರು ನಿರ್ಲಕ್ಷ್ಯ ತೋರಿದ್ದರಿಂದ ನಿರೀಕ್ಷೆಯ ಮತದಾನ ಆಗುತ್ತಿಲ್ಲ.

ಇದಲ್ಲವನ್ನು ಮನಗಂಡು ಬಿಬಿಎಂಪಿ ನಾಲ್ಕು ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡುತ್ತಿದ್ದು, ಇವು ಮತದಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿವೆ. ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಬೆಂಗಳೂರಿನಂತಹ ಬ್ಯುಸಿ ನಗರದಲ್ಲಿ ಒತ್ತಡದ ಜಜೀವನದ ನಡುವೆಯೂ ಮತಗಟ್ಟೆಗೆ ಬಂದು ಸುಲಭವಾಗಿ ಮತದಾನ ಮಾಡಬಹುದು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಅತಿ ಕಡಿಮೆ ಮತದಾನವಾಗುವ ನಗರ ಎಂಬ ಅಪಖ್ಯಾತಿಯಿಂದ ಹೊರ ಬರಲು ಈ ನಾಲ್ಕೂ ಅಪ್ಲಿಕೇಷನ್ ಹೊರ ತರಲಾಗಿದೆ. ಇವುಗಳನ್ನು ಬಳಕೆ ಮಾಡಿಕೊಂಡು ಮೇ 12ರಂದು ನಡೆಯಲಿರುವ ಚುನಾವಣೆ ದಿನ ಮತ ಕೇಂದ್ರಗಳಿಗೆ ಬಂದು ಮತದಾನ ಮಾಡಬೇಕೆಂದು ಚುನಾವಣಾ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ನಾವಿಗೇಟರ್ ಅಪ್ಲಿಕೇಷನ್

ನಾವಿಗೇಟರ್ ಅಪ್ಲಿಕೇಷನ್

ಮತ ಕೇಂದ್ರ ಯಾವುದು ಎಂದು ತಿಳಿಯದ ಮತದಾರರಿಗೆ ಈ ಅಪ್ಲಿಕೇಷನ್ ದಾರಿ ತೋರಲಿದೆ. ಈ ಅಪ್ಲಿಕೇಷನ್ ಬಳಕೆ ಮಾಡುವ ಮತದಾರರು ತಮ್ಮ ವೋಟರ್ ಐಡಿ ಸಂಖ್ಯೆಯನ್ನು ನಮೂದಿಸಿದರೆ ಮತ ಕೇಂದ್ರ ಯಾವುದು, ತಾವು ಇರುವ ಸ್ಥಳದಿಂದ ಸುಲಭವಾಗಿ ಹೇಗೆ ಮತ ಕೇಂದ್ರವನ್ನು ತಲುಪಬಹುದು ಎಂದು ದಾರಿ ತೋರಿಸುತ್ತದೆ. ಮತ ಕೇಂದ್ರ ಸಿಗಲಿಲ್ಲ ಎಂಬ ಗೊಂದಲಕ್ಕೆ ತೆರೆ ಬೀಳಲಿದೆ.

 ಎಲೆಕ್ಷನ್ ಡೈರೆಕ್ಟರಿ

ಎಲೆಕ್ಷನ್ ಡೈರೆಕ್ಟರಿ

ಈ ಅಪ್ಲಿಕೇಷನ್ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳ ಸಂಪೂರ್ಣ ಮಾಹಿತಿ ನೀಡಲಿದೆ. ಯಾವ ವಿಧಾನಸಭಾ ಕ್ಷೇತ್ರಕ್ಕೆ ಯಾವ ಅಧಿಕಾರಿ ಇದ್ದಾರೆ. ಮತದಾರರು ಅವರನ್ನು ಹೇಗೆ ಸಂಪರ್ಕಿಸಬಹುದು ಎಂಬ ಬಗ್ಗೆ ತಿಳಿಯಬಹುದು. ಮತದಾರರು ಮೆಸೇಜ್ ಮಾಡಿದ ಕೂಡಲೇ ಅಧಿಕಾರಿಗಳು ಅವರಿಗೆ ಉತ್ತರ ನೀಡುತ್ತಾರೆ.

ಬಿಬಿಎಂಪಿಯಿಂದ ನೀತಿ ಸಂಹಿತೆ ಅಪ್ಲಿಕೇಷನ್

ಬಿಬಿಎಂಪಿಯಿಂದ ನೀತಿ ಸಂಹಿತೆ ಅಪ್ಲಿಕೇಷನ್

ಈ ಅಪ್ಲಿಕೇಷನ್ ನಲ್ಲಿ ನಗರದ ನಾಗರಿಕರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಲ್ಲೇ ನೀತಿ ಸಂಹಿತೆ ಉಲ್ಲಂಘನೆಯಾದರೆ ಅದರ ಬಗ್ಗೆ ದೂರು ನೀಡಬಹುದು. ಅಷ್ಟೇ ಅಲ್ಲ ಆಮಿಷ ಒಡ್ಡುವ ಕುರಿತು ಆಡಿಯೋ, ವಿಡಿಯೋ ತುಣುಕುಗಳಿದ್ದರೆ ಅವುಗಳನ್ನೂ ಸಹ ಈ ಅಪ್ಲಿಕೇಷನ್ ಮೂಲಕ ಕಳುಹಿಸಬಹುದಾಗಿದೆ. ಇಂತಹ ಚಿತ್ರಣವನ್ನು ಹಾಕಿದ ಕೂಡಲೇ ನಿಯಂತ್ರಣ ಕೊಠಡಿಗೆ ಇದರ ಸಂದೇಶ ಹೋಗುತ್ತದೆ. ತಕ್ಷಣ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.

ಚುನಾವಣಾ ರಸ ಪ್ರಶ್ನೆ

ಚುನಾವಣಾ ರಸ ಪ್ರಶ್ನೆ

ಈ ಅಪ್ಲಿಕೇಷನ್ ಮೂಲಕ 16 ವರ್ಷದಿಂದ 60 ವರ್ಷದ ವಯೋಮಾನದವರೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ 10ಪ್ರಶ್ನೆಗಳು ಇರುತ್ತವೆ. ಇವುಗಳಿಗೆ ಉತ್ತರಿಸಬಹುದು. ಈ ಮಾಹಿತಿಯನ್ನುಯ ಇನ್ನೊಬ್ಬರಿಗೂ ಹಂಚಿಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four mobile applications will be launched today for exclusively for Bengalureans to help create better awareness among voters about polling and also actively involve them to ensure better polling practices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more