ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ
Recommended Video

ಮಾಜಿ ಕೇಂದ್ರ ಸಚಿವ ಸಿ ಕೆ ಜಾಫರ್ ಷರೀಫ್ ನಿಧನ | Oneindia Kannada
ಬೆಂಗಳೂರು, ನವೆಂಬರ್ 25: ಕೇಂದ್ರದ ಮಾಜಿ ಸಚಿವ , ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ. ಜಾಫರ್ ಷರೀಫ್(85) ನಿಧನ ಹೊಂದಿದ್ದಾರೆ, ದೇಶಕ್ಕೆ ಬ್ರಾಡ್ ಗೇಜ್ ರೈಲು ಪರಿಚಯಿಸಿದ ದೂರದೃಷ್ಟಿ ರಾಜಕಾರಣಿಯಾಗಿದ್ದರು.

ಜಾಫರ್ ಷರೀಫ್ 1933ರ ನವೆಂಬರ್ 3 ರಂದು ಚಿತ್ರದುರ್ಗ ಚಳ್ಳಕೆರೆಯಲ್ಲಿ ಹುಟ್ಟಿದ್ದರು, 1991ರಿಂದ 1995ರವರೆಗೆ ಪಿವಿ ನರಸಿಂಹ ರಾವ್ ಸಂಪುಟದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದರು.
1972ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಬ್ರಾಡ್ ಗೇಡಜ ರೈಲನ್ನು ದೇಶಕ್ಕೆ ಪರಿಚಯಿಸಿದ ರಾಜಕಾರಣಿಯಾಗಿದ್ದರು. ಕಳೆದ ಒಂದು ವಾರದಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಾಫರ್ ಷರೀಫ್ ಅವರಲ್ಲಿ ಕಿರಿಯ ಪುತ್ರ, 2008ರಲ್ಲಿ ಪತ್ನಿ, 2009ರಲ್ಲಿ ಹಿರಿಯ ಪುತ್ರನನ್ನು ಕಳೆದುಕೊಂಡಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಜಾಫರ್ ಷರೀಫ್ ಆಪ್ತರಾಗಿದ್ದರು.












Click it and Unblock the Notifications