ಸೂಟು, ಬೂಟು, ಕೂಲಿಂಗ್ ಗ್ಲಾಸು, ಸಿದ್ದರಾಮಯ್ಯ ಫುಲ್ ಚೇಂಜ್‌

ಮಾಸ್ಕೊ, ಸೆಪ್ಟೆಂಬರ್ 08: ಸದಾ ಬಿಳಿ ಪಂಚೆ, ಬಿಳಿ ಶರ್ಟು, ಸಾಧಾರಣ ಕನ್ನಡಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಟೈಲೇ ಚೇಂಜ್ ಆಗಿ ಹೋಗಿದೆ.

ಯೂರೋಪ್ ರಾಷ್ಟ್ರಗಳ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರ ವೇಷ ಭೂಷಣವೂ ಯೂರೋಪ್ ಮಾದರಿಯನ್ನೇ ಹೋಲುತ್ತಿದ್ದಿದೆ.

ಸೂಟು, ಬೂಟು, ತಣ್ಣನೆಯ ಕೂಲಿಂಗ್ ಗ್ಲಾಸ್ ಧರಿಸಿ ರಷ್ಯಾದ ಬೀದಿಗಳಲ್ಲಿ ವಿಹರಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಅವರ ಗೆಳೆಯರೇ ಗುರುತಿಸಲಾರರೇನೋ ಎಂಬಷ್ಟು ಬದಲಾಗಿಬಿಟ್ಟಿದೆ ಅವರ ವೇಷ-ಭೂಷಣ.

ರಷ್ಯಾದ ಮಾಸ್ಕೋದಲ್ಲಿರುವ ಸಿದ್ದರಾಮಯ್ಯ ಅವರು ಅಲ್ಲಿ ವಾಸಿಸುತ್ತಿರುವ ಕನ್ನಡಿಗರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಸಿದ್ದರಾಮಯ್ಯ ಅನುಭವ ಹಂಚಿಕೊಂಡಿದ್ದಾರೆ.

'ಕನ್ನಡ, ಕನ್ನಡಿಗರಿಲ್ಲದ ದೇಶವೇ ಇಲ್ಲ'

'ಕನ್ನಡ, ಕನ್ನಡಿಗರಿಲ್ಲದ ದೇಶವೇ ಇಲ್ಲ'

ದೂರದ ದೇಶದಲ್ಲಿ ಕನ್ನಡಿಗರನ್ನು ಭೇಟಿ ಮಾಡಿ ಪುಳಕಿತರಾಗಿರುವ ಸಿದ್ದರಾಮಯ್ಯ, 'ಕನ್ನಡ ಹಾಗೂ ಕನ್ನಡಿಗರಿಲ್ಲದ ದೇಶವೇ ಪ್ರಪಂಚದಲ್ಲಿ ಇಲ್ಲ ಎನಿಸುತ್ತದೆ. ಇಂದು ರಷ್ಯಾದ ಮಾಸ್ಕೋದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದೆ' ಎಂದು ಚಿತ್ರಗಳನ್ನೂ ಅಪ್‌ಲೋಡ್ ಮಾಡಿದ್ದಾರೆ.

ಕನ್ನಡಿಗರ ಪ್ರೀತಿ ಕಂಡು ಮೂಕವಿಸ್ಮಿತ

ಕನ್ನಡಿಗರ ಪ್ರೀತಿ ಕಂಡು ಮೂಕವಿಸ್ಮಿತ

ಅಲ್ಲಿನ ಕನ್ನಡಿಗರು ಸಿದ್ದರಾಮಯ್ಯ ಅವರೆಡೆಗೆ ತೋರಿದ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾಗಿದ್ದಾಗಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಷ್ಯಾದಲ್ಲೂ ಕೂಡ ಸಿದ್ದರಾಮಯ್ಯ ಅವರನ್ನು ಕಂಡ ಕೂಡಲೇ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಅವರನ್ನು ಮುತ್ತಿಕೊಂಡಿದ್ದಾರೆ.

10 ದಿನಗಳ ಪ್ರವಾಸ

10 ದಿನಗಳ ಪ್ರವಾಸ

ಸಿದ್ದರಾಮಯ್ಯ ಅವರು 10 ದಿನಗಳ ಕಾಲ ಯೂರೋಪ್ ಪ್ರವಾಸ ಹೋಗಿದ್ದು, ರಾಜಕಾರಣ ಜಂಜಟದಿಂದ ದೂರ ಉಳಿದು, ಫ್ರೆಷ್ ಆಗಿ ಮತ್ತೆ ಹಿಂದಿರುಗುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಯೂರೋಪ್ ಪ್ರವಾಸಕ್ಕೆ ಹೋಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಹೀಗೆ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ಅವರು ಸೇರಿಕೊಂಡಿದ್ದನ್ನು ಇಲ್ಲಿ ನೆನೆಸಬಹುದು.

ಪುತ್ರ ಯತೀಂದ್ರ ಸಹ ಜೊತೆಯಲ್ಲಿ

ಪುತ್ರ ಯತೀಂದ್ರ ಸಹ ಜೊತೆಯಲ್ಲಿ

ಸಿದ್ದರಾಮಯ್ಯ ಅವರ ಜೊತೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರು ಸೇರಿದಂತೆ ಇನ್ನೂ ಕೆಲವು ಕುಟುಂಬ ಸದಸ್ಯರು ಯೂರೋಪ್ ಪ್ರವಾಸಕ್ಕೆ ತೆರಳಿದ್ದಾರೆ.

ಯೂರೋಪ್ ಪ್ರವಾಸಕ್ಕೂ ರಾಜಕೀಯ ಅರ್ಥ

ಯೂರೋಪ್ ಪ್ರವಾಸಕ್ಕೂ ರಾಜಕೀಯ ಅರ್ಥ

ಸಿದ್ದರಾಮಯ್ಯ ಅವರು, ತಾವು ಕುಟುಂಬದ ಜೊತೆಗೆ ಯೂರೋಪ್‌ಗೆ ತೆರಳುತ್ತಿರುವುದಾಗಿ ಹೇಳಿದ್ದಾರಾದರೂ ಅವರ ಈ ಪ್ರವಾಸಕ್ಕೂ ಸಹ ರಾಜಕೀಯ ಅರ್ಥವನ್ನು ಕಲ್ಪಿಸಲಾಗಿದೆ. ಸರ್ಕಾರವು ಉರುಳುವ ಸಾಧ್ಯತೆ ಇದೆ, ಅದಕ್ಕೆ ಪರೋಕ್ಷ ಬೆಂಬಲ ನೀಡಲೆಂದು ಸಿದ್ದರಾಮಯ್ಯ ಅವರು ಇದೇ ಸಮಯದಲ್ಲಿ ಯೂರೋಪ್ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಸುದ್ದಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+