ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ 5 ಗ್ರೇಸ್ ಅಂಕಗಳು
ಬೆಂಗಳೂರು, ಏ. 8 : ದ್ವಿತೀಯ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ದೋಷ ವಿರುವುದರಿಂದ ವಿದ್ಯಾರ್ಥಿಗಳಿಗೆ 5 ಗ್ರೇಸ್ ಅಂಕ ನೀಡುವಂತೆ ಮೌಲ್ಯಮಾಪಕರಿಗೆ ಸೂಚನೆ ನೀಡಲಾಗಿದೆ. ಸೋಮವಾರ ಪ್ರಶ್ನೆ ಪತ್ರಿಕೆಯಲ್ಲಿ ದೋಷವಿದೆ ಎಂದು ಮೌಲ್ಯಮಾಪನ ಬಹಿಷ್ಕರಿಸಲಾಗಿತ್ತು.
ಪಿಯು ಜಂಟಿ ನಿರ್ದೇಶಕ ಆರ್.ಎಚ್. ರಿತ್ತಿ (ಪರೀಕ್ಷೆ) ಈ ಕುರಿತು ಮಾಹಿತಿ ನೀಡಿದ್ದಾರೆ. ದೋಷವಿರುವ ಪ್ರಶ್ನೆಗಳಿಗೆ ಉತ್ತರ ಬರೆದವರಿಗೆ ಅಂಕ ನೀಡುವಂತೆ ಮೌಲ್ಯಮಾಪಕರಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದ್ದು, ಮೌಲ್ಯಮಾಪನ ಮುಂದುವರೆದಿದೆ ಎಂದು ಹೇಳಿದ್ದಾರೆ. [ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ]

ರಾಜ್ಯಾದ್ಯಂತ ಸೋಮವಾರ ಇಂಗ್ಲಿಷ್ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಬಹಿಷ್ಕರಿಸಲಾಗಿತ್ತು. ಪ್ರಶ್ನೆ ಪತ್ರಿಕೆಯಲ್ಲಿರುವ ಗೊಂದಲವನ್ನು ಬಗೆಹರಿಸುವಂತೆ ಮೌಲ್ಯಮಾಪಕರು ಒತ್ತಾಯಿಸಿದ್ದರು. ಆದ್ದರಿಂದ ಮಂಗಳವಾರ 5 ಅಂಕಗಳನ್ನು ನೀಡಲು ಒಪ್ಪಿಗೆ ನೀಡಲಾಗಿದೆ. [ವಿದ್ಯಾರ್ಥಿಗಳ ವಿಶ್ವಾಸ ಹೆಚ್ಚಿಸಿದ ಪ್ರಶ್ನೆ ಪತ್ರಿಕೆಗಳು]
3 ಪ್ರಶ್ನೆಗಳಲ್ಲಿ ತಪ್ಪು : ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ 3 ಪ್ರಶ್ನೆಗಳು ದೋಷಪೂರಿತವಾಗಿದ್ದವು. ಪ್ರಶ್ನೆ ಸಂಖ್ಯೆ 1ರ ಉಪ ಪ್ರಶ್ನೆ ಸಂಖ್ಯೆ 10 (1 ಅಂಕ), ಪ್ರಶ್ನೆ ಸಂಖ್ಯೆ 26 (3 ಅಂಕ) ಹಾಗೂ ಪ್ರಶ್ನೆ ಸಂಖ್ಯೆ 30 (1 ಅಂಕ) ದೋಷಪೂರಿತವಾಗಿದ್ದವು.
ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದರು : ಪಿಯು ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ನಡೆಯುವ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಮೌಲ್ಯಮಾಪಕರು ಭಾನುವಾರ ಪ್ರತಿಭಟನೆ ನಡೆಸಿದ್ದರು. ವೇತನ ಪರಿಷ್ಕರಣೆ ಅವರು ಒತ್ತಾಯಿಸಿದ್ದರು. ಲೇಖನಿಗಳನ್ನು ಪಕ್ಕಕ್ಕಿಟ್ಟು 'ಪೆನ್ ಡೌನ್' ಮುಷ್ಕರ ಮಾಡಿದ್ದರು.












Click it and Unblock the Notifications