ಕೇಬಲ್ ಟಿವಿ ಕಾರ್ಯಮಗಳ ಬಗ್ಗೆ ದೂರು ಕೊಡಬಹುದು

ಬೆಂಗಳೂರು, ಡಿಸೆಂಬರ್ 12 : ಕೇಬಲ್ ಟಿವಿ ಮತ್ತು ಸ್ಯಾಟಲೈಟ್ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ದೂರುಗಳಿದ್ದರೆ ಜನರು ಸಲ್ಲಿಸಬಹುದಾಗಿದೆ. ಇದಕ್ಕಾಗಿ 24*7 ನಿಯಂತ್ರಣ ಕೊಠಡಿಯನ್ನು ಸಹ ತೆರೆಯಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಬಲ್ ಟಿವಿ ಮತ್ತು ಸ್ಯಾಟಲೈಟ್ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು, ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಈ ಕುರಿತು ಪ್ರಕಟಣೆಯನ್ನು ಹೊರಡಿಸಿದೆ.

ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ದೂರುಗಳೇನಾದರೂ ಇದ್ದಲ್ಲಿ, ಸಾರ್ವನಿಕರು ತಮ್ಮ ದೂರುಗಳನ್ನು 24*7 ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 080 22028013, ಮೊಬೈಲ್ ಸಂಖ್ಯೆ 9480841212ಗೆ ದೂರು ನೀಡಬಹುದಾಗಿದೆ.

File A Complaint About Tv Programs

ಕೇಬಲ್ ಟೆಲಿವಿಷನ್ ನೆಟ್ ವರ್ಕ್‌ (ರೆಗ್ಯುಲೇಷನ್) ನಿಯಮ 1995ರ ಪರಿಚ್ಛೇಧ 6 ಕಾರ್ಯಕ್ರಮ ಸಂಹಿತೆ. ಪರಿಚ್ಛೇಧ 7 ಜಾಹೀರಾತು ಸಂಹಿತೆ ಅಥವ ಯಾವುದೇ ಉಪಬಂಧಗಳ ಉಲ್ಲಂಘನೆ ಕಂಡು ಬಂದಲ್ಲಿ ದೂರು ಸಲ್ಲಿಸಬಹುದು.

ಇ-ಮೇಲ್ ಮೂಲಕವೂ ದೂರಗಳನ್ನು ಸಲ್ಲಿಸಬಹುದಾಗಿದೆ. [email protected]. ದೂರು ಸಲ್ಲಿಸುವವರ ಗಮನಕ್ಕೆ ಸ್ಪಷ್ಟತೆಗಾಗಿ ಸ್ಥಿರ ದೂರವಾಣಿ ಕರೆಗಳನ್ನು ಧ್ವನಿ ಮುದ್ರಣ ಮಾಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಜನರು ದೂರು ನೀಡುವ ಮುನ್ನ ಪರಿಚ್ಛೇಧ 6, ಪರಿಚ್ಛೇಧ 7ರ ಜಾಹೀರಾತು ಸಂಹಿತೆ ಬಗ್ಗೆ ತಿಳಿದುಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+