BPL Card: ರಾಜ್ಯದಲ್ಲಿ 12,00,000ಕ್ಕೂ ಅಧಿಕ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಬಿಗ್‌ ಶಾಕ್‌!

BPL Card: ಪಡಿತರ ಚೀಟಿಗಳಲ್ಲಿ ಹಲವು ವಿಧಗಳಿದ್ದು, ಇವುಗಳಲ್ಲಿ ಬಿಪಿಎಲ್‌ ಕಾರ್ಡ್‌ಗೆ ಹೆಚ್ಚು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಆರೋಗ್ಯ ಸೇವೆ ಸೇರಿದಂತೆ ಹಲವು ಸೌಕರ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ರಾಜ್ಯದಲ್ಲಿ ಅನರ್ಹರು ಕೂಡ ನಕಲಿ ದಾಖಲೆ ಸೃಷ್ಟಿಸಿ ಬಿಪಿಎಲ್‌ ಕಾರ್ಡ್‌ಗಳನ್ನು ಪಡೆದಿದು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ನಡುವೆಯೇ ಇದೀಗ ಈ ಸಂಬಂಧ ಮತ್ತೊಂದು ಶಾಕಿಂಗ್‌ ಸಂಗತಿ ಬಟಾಬಯಲಾಗಿದೆ.

ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಅವರಿಗೆ ಆಹಾರ ಹಾಗೂ ಸರ್ಕಾರಿ ಸೌಲಭ್ಯಗಳ ಕೊರತೆ ಆಗಬಾರದೆಂದು ಇದನ್ನು ಮೊದಲಿನಿಂದಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಇನ್ನು ಇದೀಗ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಅಲ್ಲದೆ, ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸವನ್ನು ಸಹ ಮಾಡುತ್ತಿದೆ. ಈ ನಡುವೆಯೇ ಅನರ್ಹರ ಬಳಿಯ ಬಿಪಿಎಲ್ ಕಾರ್ಡ್‌ ಪರಿಶೀಲನೆ ವೇಳೆ ಶಾಕಿಂಗ್‌ ಸಂಗತಿಯೊಂದು ಹೊರಬಿದ್ದಿದೆ.

Fake BPL Cards Exposed Government to Cancel Ineligible Beneficiaries

ರಾಜ್ಯದಲ್ಲಿ ವಿತರಣೆ ಮಾಡಿರುವ 1.17 ಕೋಟಿ ಬಿಪಿಎಲ್‌ ಕಾರ್ಡ್‌ಗಳ ಪೈಕಿ ಶಂಕೆಗೆ ಒಳಗಾಗಿರುವ 12 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪತ್ತೆ ಮಾಡಿದೆ ಎಂದು ವರದಿ ಆಗಿದೆ. ಹಾಗಾದ್ರೆ ಯಾರೆಲ್ಲ ಅನರ್ಹರು ಈ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

ಅನರ್ಹರು ಕೂಡ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿರುವುದರಿಂದ ಇದರಿಂದ ಬಡವರಿಗೆ ಸಿಗಬೇಕಾದ ಪಡಿತರ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಲಿವೆ. ಇದೀಗ ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಶಂಕಾಸ್ಪದ ಕಾರ್ಡ್‌ಗಳ ಪೈಕಿ 19,690 ಕಾರ್ಡ್‌ಗಳು ಹಲವು ಕಂಪನಿಗಳ ನಿರ್ದೇಶಕರ ಹೆಸರಿನಲ್ಲಿ ಇರುವುದು ಬೆಳಕಿದೆ ಬಂದಿದೆ.

ಅಷ್ಟೇ ಅಲ್ಲದೆ, ವಾರ್ಷಿಕ 25,00,000 ರೂಪಾಯಿಗಿಂತ ಅಧಿಕ ವಹಿವಾಟು ನಡೆಸುತ್ತಿರುವ 2,684 ಜನರು ಬಿಪಿಎಲ್‌ ಕಾರ್ಡ್‌ಗಳನ್ನು ಹೊದಿದ್ದಾರೆ. ಕೆಲವರು ಮೃತಪಟ್ಟವರ ಹೆಸರು ಮತ್ತು ನಕಲಿ ಕಾರ್ಡ್‌ ಬಳಸಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಶೇಕಡ 76.04, ನಗರ ಪ್ರದೇಶಗಳಲ್ಲಿ ಶೇಕಡ 49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್‌ ಕಾರ್ಡ್‌ ನೀಡಬೇಕು ಎಂಬ ನಿಯಮ ಇದೆ. ಆದರೆ, ರಾಜ್ಯದಲ್ಲಿ 3,93,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್‌ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14,00,000 ಬಿಪಿಎಲ್‌ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅದರಲ್ಲೂ, ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ, ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವ, 7 ಹೆಕ್ಟೇರ್‌ಗೂ ಅಧಿಕ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ ಅಥವಾ ಅನುದಾನರಹಿತ ಶಾಲಾ-ಕಾಲೇಜು ನೌಕರರು, ನೋಂದಾಯಿತ ಗುತ್ತಿಗೆದಾರರು, ಬಹುರಾಷ್ಟ್ರೀಯ ಕಂಪನಿ ಮತ್ತು ಕೈಗಾರಿಕೆಗಳಲ್ಲಿಉದ್ಯೋಗದಲ್ಲಿ ಇರುವವರು, ಸ್ವಂತವಾಗಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ಕಾರು ಹೊಂದಿರುವವರು ಸರ್ಕಾರ ನಿಯಮವನ್ನು ಉಲ್ಲಂಘಿಸಿ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನುವ ಶಾಕಿಂಗ್‌ ಸಂಗತಿ ಬಟಾಬಯಲಾಗಿದೆ.

ಅನುಮಾನಾಸ್ಪದ ಕಾರ್ಡ್‌ಗಳು: ಇ-ಕೆವೈಸಿ ಮಾಡಿಸದೆ ಇರುವವರು 6,16,196 ಜನ, 20,00,000 ರೂಪಾಯಿಗಳಿಗಿಂತ ಅಧಿಕ ಆದಾಯ ಹೊಂದಿದವರು 5,13,613 ಜನ, ಅಂತಾರಾಜ್ಯ ಪಡಿತರ ಚೀಟಿದಾರರು 57,864 ಜನ, 5 ಹೆಕ್ಟೇರ್‌ಗಂತ ಅಧಿಕ ಜಮೀನು ಹೊಂದಿರುವವರು 33,456 ಜನ, 6 ತಿಂಗಳಿನಿಂದ ರೇಷನ್ ಪಡೆಯದವರು 19,893 ಜನ, ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರ ಬಳಿ 19,690 ಬಿಪಿಎಲ್‌ ಕಾರ್ಡ್, 25 ಲಕ್ಷ ರೂಪಾಯಿ ವಹಿವಾಟು ಮೀರಿದವರ ಬಿಎಪಿಎಕ್ ಕಾರ್ಡ್‌ಗಳು 2,684, ಮೃತ ಸದಸ್ಯರ ಹೆಸರಲ್ಲಿ 1,446 ಮಂದಿ ಬಿಪಿಎಲಗ್ ಕಾರ್ಡ್ಗಳನ್ನು ಹೊಂದಿದ್ದಾರೆ ಎನ್ನುವ ಶಾಕಿಂಗ್ ಸಂಗತಿ ಬಯಲಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದವರು ನೆಲೆಸಿದ್ದು, ಇವರಲ್ಲಿ 57,864 ಜನ ನಕಲಿ ದಾಖಲೆ ಸೃಷ್ಟಿಸಿ ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಇವರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುತ್ತಿರುವುದರಿಂದ ಸರ್ಕಾರಕ್ಕೆ ಕೋಟಿ.. ಕೋಟಿ ನಷ್ಟ ಆಗುವುದಲ್ಲದೆ, ಅರ್ಹರಿಗೂ ಸಮಸ್ಯೆ ಎದುರಿಸುವಂತಾಗಿದೆ. ಇದನ್ನು ತಡೆಗಟ್ಟಲು ಆಹಾರ ಇಲಾಖೆ ರೇಷನ್‌ ಕಾರ್ಡ್‌ಗೆ ಇ-ಕೆವೈಸಿ ಮಾಡುವುದನ್ನು ಕಡ್ಡಾಯ ಮಾಡಿದೆ. ಇದರಿಂದ ನಕಲಿಗಳ ಅಸಲಿ ಆಟ ಬಯಲಾಗುತ್ತಿದೆ. ರಾಜ್ಯದಲ್ಲಿ ಇನ್ನು 6,16,196 ಕಾರ್ಡ್‌ದಾರರು ಇ-ಕೆವೈಸಿ ಮಾಡಿಸಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಈ ಮಹತ್ವದ ಕ್ರಮದಿಂದ ಅರ್ಹರಿಗೆ ತುಂಬಾ ಉಪಯುಕ್ತ ಆದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+