ಸೈಕಲ್ ರವಿ ಯಾರೆಂಬುದೇ ಗೊತ್ತಿಲ್ಲ: ಎಂ.ಬಿ.ಪಾಟೀಲ್ ಸ್ಪಷ್ಟನೆ

ಬೆಂಗಳೂರು, ಜುಲೈ 17: ಭೂಗತ ಪಾತಕಿ ಸೈಕಲ್ ರವಿಗೂ ಮಾಜಿ ಸಚಿವ ಎಂ.ಬಿ.ಪಾಟೀಲ್‌ಗೂ ನಂಟಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಂ.ಬಿ.ಪಾಟೀಲ್ ಅವರು ಸೈಕಲ್ ರವಿ ಯಾರು ಎಂಬುದೇ ಗೊತ್ತಿಲ್ಲ ಎಂದಿದ್ದಾರೆ.

ಸೈಕಲ್ ರವಿ ಮೊಬೈಲ್ ಸಂಖ್ಯೆಯಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಮೊಬೈಲ್‌ಗೆ ಹಲವು ಬಾರಿ ಕರೆಗಳು ಹೋಗಿದ್ದವು ಎಂದು ಖಾಸಗಿ ಚಾನೆಲ್‌ಗಳಲ್ಲಿ ವರದಿಯಾಗಿತ್ತು ಆ ನಂತರ ಅದು ಸೈಕಲ್ ರವಿ ಮೊಬೈಲ್ ಸಂಖ್ಯೆ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.

ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್ 'ಸೈಕಲ್ ರವಿ ಯಾರು ಎಂಬುದೇ ಗೊತ್ತಿಲ್ಲ, ಮಾಧ್ಯಮಗಳಲ್ಲಿ ಹೇಳಲಾಗುತ್ತಿರುವ ಮೊಬೈಲ್ ಸಂಖ್ಯೆ ಕಾಂಗ್ರೆಸ್ ಮುಖಂಡರೊಬ್ಬರದ್ದು' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Ex Minister MB Patil denies contact with cycle Ravi

ಕಾಂಗ್ರೆಸ್ ಮುಖಂಡನ ಮೊಬೈಲ್ ಸಂಖ್ಯೆಯ ಬಗ್ಗೆ ಸಿಸಿಬಿ ಏಕೆ ಸಿಡಿಆರ್ ತೆಗೆಸಿದೆ, ಆ ಸಂಖ್ಯೆಯನ್ನು ಸೈಕಲ್ ರವಿಯ ಮೊಬೈಲ್ ಸಂಖ್ಯೆ ಎಂದು ತಪ್ಪಾಗಿ ಹೇಗೆ ಗ್ರಹಿಸಲಾಯಿತು ಎಂಬ ಬಗ್ಗೆ ತಮಗೂ ಅನುಮಾಗಳಿವೆ ಎಂದು ಅವರು ಹೇಳಿದ್ದಾರೆ.

ಸಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದು, ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ ಆ ನಂತರ ಬೆಂಗಳೂರಿನಲ್ಲಿ ನಾನೇ ಸುದ್ದಿಗೋಷ್ಠಿ ಕರೆದು ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+