ಕಲಬುರಗಿ ಜೈಲಿನಿಂದ ಪರಾರಿಯಾದರು, ಲಾರಿಯಲ್ಲಿ ಸಿಕ್ಕರು

ಕಲಬುರಗಿ, ಏ.9 : ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಇಬ್ಬರು ಕೈದಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿಗೆ ಹೋಗುತ್ತಿದ್ದ ಲಾರಿಯಲ್ಲಿ ಅಡಗಿ ಕುಳಿತಿದ್ದ ಇಬ್ಬರನ್ನು ಜೇವರ್ಗಿ ಬಳಿ ಬಂಧಿಸಲಾಗಿದೆ.

ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಮಹಮದ್ ಸಾಧಿಕ್ ಮತ್ತು ರಫೀಕ್ ಎಂಬ ಕೈದಿಗಳು ಕಲಬುರಗಿ ಕೇಂದ್ರ ಕಾರಾಗೃಹದ ಗೋಡೆ ಹಾರಿ ತಪ್ಪಿಸಿಕೊಂಡಿದ್ದರು. ಪೊಲೀಸರು ಜೈಲಿನ ಸುತ್ತ ಹುಡುಕಾಟ ನಡೆಸಿದರೂ ಕೈದಿಗಳ ಸುಳಿವು ಪತ್ತೆಯಾಗಿರಲಿಲ್ಲ. [ಸೈಕೋ ಜೈಶಂಕರ್ ಸೆರೆಸಿಕ್ಕಿದ್ದು ಹೇಗೆ?]

jail

ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿ ನಾಕಾಬಂಧಿ ಹಾಕಿದರು. ಕೈದಿಗಳು ಜಿಲ್ಲೆ ಬಿಟ್ಟು ಹೋಗದಂತೆ ತಡೆದರು.[ಮಂಗಳೂರು ಜೈಲಿನಲ್ಲಿ ಶೀಘ್ರವೇ ಮೊಬೈಲ್ ಜಾಮರ್]

ರಾತ್ರಿ 11 ಗಂಟೆ ವೇಳೆಗೆ ಪೊಲೀಸರು ಜೇವರ್ಗಿ ಬಳಿ ಲಾರಿಗಳನ್ನು ತಪಾಸಣೆ ಮಾಡುವಾಗ ಅದರಲ್ಲಿ ಮಹಮದ್ ಸಾಧಿಕ್ ಮತ್ತು ರಫೀಕ್ ಇದ್ದರು. ತಕ್ಷಣ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಯಲ್ಲಿ ಇಬ್ಬರು ಅಡಗಿ ಕುಳಿತಿದ್ದರು.

ಶಿಕ್ಷೆಗೆ ಗುರಿಯಾಗಿದ್ದರು : ಮಹಮದ್ ಸಾಧಿಕ್‌ಗೆ 5 ವರ್ಷ ಮತ್ತು ರಫೀಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಇವರನ್ನು ಕಲಬುರಗಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.

ಸಿಕ್ಕಿದ್ದು ಹೇಗೆ : ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ರಫೀಕ್ ಮೊದಲು ಲಾರಿ ಓಡಿಸುವ ಕೆಲಸ ಮಾಡಿಕೊಂಡಿದ್ದ. ಆದ್ದರಿಂದ ಲಾರಿಯಲ್ಲಿ ಪರಾರಿಯಾಗಬಹುದು ಎಂದು ಶಂಕಿಸಿದ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಕೆಲವೇ ಗಂಟೆಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+