ಜನವರಿ 15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಬೆಂಗಳೂರು, ಡಿಸೆಂಬರ್ 19 : ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಿದೆ. ಮತದಾರರ ಪರಿಷ್ಕೃತ ಪಟ್ಟಿ ಸಹ ಪ್ರಕಟಗೊಂಡಿದ್ದು, ಜನರು ಹೆಸರು, ವಿವರಗಳು ಸರಿ ಇವೆಯೇ? ಎಂದು ಪರಿಶೀಲಿಸಿಕೊಳ್ಳಬಹುದಾಗಿದೆ.

ಜನವರಿ 15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ಹೇಳಿದೆ. 18 ತುಂಬಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಈ ಕೂಡಲೇ ಹೆಸರು ಸೇರಿಸಿ ಎಂದು ಕರೆ ನೀಡಲಾಗಿದೆ.

Enroll Your Name To Voter List Till January 15

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ ವಿಳಾಸ ದೃಢೀಕರಣಕ್ಕೆ ದಾಖಲೆಗಳು ಬೇಕು. ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು ಬೇಕು.

ಡಿಸೆಂಬರ್ 16ರಂದು ಚುನಾವಣಾ ಆಯೋಗ ಡ್ರಾಫ್ಟ್ ಎಲೆಕ್ಟೊರಲ್ ರೋಲ್ ಪ್ರಕಟಿಸಿದೆ. ಜನರು ಮತದಾರರ ಗುರುತಿನ ಚೀಟಿಯಲ್ಲಿ ಮಾಹಿತಿ ಸರಿ ಇದೆಯೇ? ಎಂದು ಖಚಿತ ಪಡಿಸಿಕೊಳ್ಳಬಹುದು. ಇಲ್ಲವಾದರಲ್ಲಿ ಜನವರಿ 15ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಜನರು www.ceokarnataka.kar.nic.in ವೆಬ್ ಸೈಟ್ ಮೂಲಕವೂ ತಮ್ಮ ಮಾಹಿತಿ ತಿಳಿಯಬಹುದಾಗಿದೆ. ಜನರು ಗ್ರಾಮ ಪಂಚಾಯಿತಿ ಕಚೇರಿ, ತಾಲೂಕು ಕಚೇರಿ, ಬಿಬಿಎಂಪಿ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+