ಬಜೆಟ್ ವೇಳೆ ಕರೆಂಟ್ ಕಟ್: ನಾಲ್ವರು ಇಂಜಿನಿಯರ್ ಅಮಾನತು

Subscribe to Oneindia Kannada

ಬೆಂಗಳೂರು, ಮಾರ್ಚ್, 18: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಬಂಡಿಸುತ್ತಿದ್ದ ಸಂದರ್ಭದಲ್ಲೇ ವಿದ್ಯುತ್ ಕಡಿತವಾಗಿದ್ದು ಸುದ್ದಿಯಾಗಿದ್ದು. ವಿರೋಧ ಪಕ್ಷಗಳು ಸಿದ್ದರಾಮಯ್ಯ ಕತ್ತಲೆ ಭಾಗ್ಯ ಕೊಟ್ಟರು ಎಂದು ಆಡಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯಲೋಪ ಆರೋಪದ ಮೇಲೆ ವಿಧಾನ ಸೌಧ ವಿದ್ಯುತ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ರಾಮಲಿಂಗಯ್ಯ ಸೇರಿದಂತೆ ನಾಲ್ವರು ಇಂಜಿನಿಯರ್ ಗಳನ್ನು ಅಮಾನತು ಮಾಡಲಾಗಿದ ಎಂದು ಇಂಧನ ಇಲಾಖೆ ತಿಳಿಸಿದೆ. [ಕರೆಂಟ್ ಕೈ ಕೊಟ್ಟರೂ ವಿದ್ಯುತ್ ಕ್ಷೇತ್ರಕ್ಕೆ ಹಲವು ಕೊಡುಗೆ]

karanatatka

ಬಜೆಟ್ ಮಂಡನೆ ವೇಳೆ ಎರಡು ಸಾರಿ ವಿದ್ಯುತ್ ಕೈಕೊಟ್ಟಿತ್ತು. ಒಂದು ಸಾರಿ ಸಿದ್ದರಾಮಯ್ಯ ಅಧಿಕಾರಿಯೊಬ್ಬರ ಮೊಬೈಲ್ ಫ್ಲ್ಯಾಶ್ ಲೈಟ್ ನಲ್ಲಿ ಭಾಷಣ ಓದಲು ಯತ್ನಿಸಿದ್ದರು. ವಿದ್ಯುತ್ ಬಂದ ಬಳಿಕ ಭಾಷಣ ಮುಂದುವರಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಆರೋಪ ಮಾಡಿದ್ದರು.[ಬಜೆಟ್: ಯಾವುದು ಏರಿಕೆ, ಯಾವುದು ಇಳಿಕೆ]

ಬಜೆಟ್ ಮಂಡನೆ ಬಳಿಕ ಸಿದ್ದರಾಮಯ್ಯ ಇಂಧನ ಸಚಿವ ಡಿಕೆ ಶಿವವಕುಮಾರ್ ರಿಂದ ಮಾಹಿತಿ ಪಡೆದು ವಿಧಾನಸೌಧದ ಜವಾಬ್ದಾರಿ ವಹಿಸಿಕೊಂಡಿದ್ದ ಇಂಜಿನಿಯರ್ ಗಳ ಅಮಾನತು ಮಾಡಲು ಸೂಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Budget 2016-17 : Engineers incharge of power supply to Vidhana Soudha suspended after power blackout during presentation of budget by CM Siddaramaiah in Bengaluru. Before Siddaramaiah faced two times power cut during budget presentation.
Please Wait while comments are loading...