ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಹೆಚ್ಚಳ ಶಾಕ್

ಬೆಂಗಳೂರು, ಡಿ. 14: ಕರ್ನಾಟಕದ ಜನ ಮತ್ತೆ ವಿದ್ಯುತ್ 'ಶಾಕ್ 'ಗೆ ಒಳಗಾಗಲಿದ್ದಾರೆ. ಮಾರ್ಚ್ 31ರ ನಂತರ ಪ್ರತಿ ಯುನಿಟ್ ಗೆ 80 ಪೈಸೆ ಹೆಚ್ಚಳ ಮಾಡುವಂತೆ ರಾಜ್ಯದ 5 ವಿದ್ಯುತ್ ಪ್ರಸರಣಾ ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಎಲ್ಲ ವರ್ಗದವರು ಉಪಯೋಗಿಸುವ ವಿದ್ಯುತ್ ನ ದರ ಹೆಚ್ಚಿಸಲು ಕಂಪನಿಗಳು ಅರ್ಜಿ ಸಲ್ಲಿಸಿವೆ. ವಾಣಿಜ್ಯ ಮತ್ತು ಗೃಹ ಬಳಕೆಯ ವಿದ್ಯುತ್ ದರವೂ ಹೆಚ್ಚಾಗಲಿದೆ. ಇದರಲ್ಲಿ ರೈತರ ಪಂಪ್ ಸೆಟ್ ಗೆ ಬಳಕೆಯಾಗುವ ವಿದ್ಯುತ್ ಸಹ ಸೇರಿದ್ದು ಹಣವನ್ನು ಸರ್ಕಾರ ಭರಿಸಲಿದೆ.[ವಿದ್ಯುತ್ ಸಂಪರ್ಕಕ್ಕೆ ವಾಸ್ತವ್ಯ ಪ್ರಮಾಣ ಪತ್ರ ಕಡ್ಡಾಯ]

electricity

ಕಲಬುರಗಿ ಕಂಪನಿ 2014ನೇ ಸಾಲಿನ 308 ಕೋಟಿ ರೂಪಾಯಿ ಹಣವನ್ನು ಸರ್ಕಾರ ತುಂಬಿಸಿಕೊಡಬೇಕು ಎಂದು ಮನವಿ ಮಾಡಿದೆ. ಅಲ್ಲದೇ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ 255 ಕೋಟಿ ರೂ. ವೆಚ್ಚಭರಿಸಬೇಕು ಎಂದು ಕೋರಿದೆ.[ವಿದ್ಯುತ್ತಿಗಾಗಿ 5100 ಕೋಟಿ ರೂ ಕಾಮಗಾರಿ: ಡಿಕೆಶಿ]

ಹೊಸ ದರ ಜಾರಿಗೆ ಬರುವುದು ಮಾರ್ಚ್ 31 ರೊಳಗೆ ತೀರ್ಮಾನವಾಗಬೇಕು. ಐದು ಕಂಪನಿಗಳಲ್ಲಿ ಬೆಸ್ಕಾಂ 262 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ಯುನಿಟ್ ಗೆ 32 ಪೈಸೆ ದರ ಹೆಚ್ಚಳ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+