ಕರ್ನಾಟಕ ಚುನಾವಣೆ; ಅಂಚೆ ಮತದಾನಕ್ಕಾಗಿ ವೇತನ ಸಹಿತ ರಜೆ

ಬೆಂಗಳೂರು, ಏಪ್ರಿಲ್ 27; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದೆ. ಆದರೆ ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಂಡಿರುವ ಅಧಿಕಾರಿ/ ಸಿಬ್ಬಂದಿಗಳು ಜನರಿಗಿಂತ ಮೊದಲೇ ಮತದಾನ ಮಾಡಲಿದ್ದಾರೆ. ಸೇವಾ ಮತದಾರರು ಅಂಚೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈ ಕುರಿತು ಆದೇಶ ಹೊರಡಿಸಿದೆ. ಕರ್ನಾಟಕ ಸಾರ್ವತ್ರಿಕ ಚುನಾವಣೆಗಳು-2023ರ ಹಿನ್ನಲೆಯಲ್ಲಿ ಅಗತ್ಯ ಸೇವೆಗಳು ಎಂದು ಗುರುತಿಸಲಾದ ಇಲಾಖೆಗಳ ವಿವರಗಳನ್ನು ಸರ್ಕಾರದಿಂದ ಪಡೆಯಲಾಗಿತ್ತು. ಅದರಂತೆ ಸದರಿ ಇಲಾಖೆಗಳನ್ನು ಅಗತ್ಯ ಸೇವೆಗಳ ಇಲಾಖೆಗಳು ಎಂದು ಗುರುತಿಸಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.

Election Commission Directed To Issue Pay Holiday For Postal Voting

ಭಾರತದ ಚುನಾವಣಾ ಆಯೋಗವು ಈ ರೀತಿ ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ಆಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಗೈರು ಹಾಜರಿ ಮತದಾರರಿಗೆ (AVES) ಪೋಸ್ಟಲ್ ವೋಟಿಂಗ್ ಸೆಂಟರ್ ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ಸ್ಥಾಪನೆ ಮಾಡಲಾಗುತ್ತದೆ.

ಆದ್ದರಿಂದ ಅಂಚೆ ಮತದಾನ ಸೆಂಟರ್ ಅನ್ನು ದಿನಾಂಕ 2/5/2023 ರಿಂದ 4/5/2023ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿ/ ಸಿಬ್ಬಂದಿಗಳು ಅಂಚೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಆದೇಶ ಹೇಳಿದೆ.

ಎಷ್ಟು ಮತದಾರರು?: ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಈ ಬಾರಿ ಚುನಾವಣೆಯಲ್ಲಿ 5,31,33,054 ಜನರು ಮತದಾನ ಮಾಡಲು ಅರ್ಹರು. ಇವರಲ್ಲಿ ಪುರುಷರು 2,67,28,053, ಮಹಿಳೆಯರು 2,64,00,074 ಮತ್ತು ಇತರೆ ಮತದಾರರು 4,927.

counting

ಸೇವಾ ಮತದಾರರು 47,488. ಇವರಲ್ಲಿ ಪುರುಷರು 45,897 ಮತ್ತು ಮಹಿಳೆಯರು 1,591. ಚುನಾವಣಾ ಕಾರ್ಯದಲ್ಲಿ ತೊಡಗುವ ಸೇವಾ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಅಂಚೆ ಮತದಾನ ಸೆಂಟರ್ ಅನ್ನು ದಿನಾಂಕ 2/5/2023 ರಿಂದ 4/5/2023ರ ತನಕ ಎಲ್ಲಾ ಜಿಲ್ಲೆಗಳಲ್ಲಿ ತೆರೆಯಲಾಗುತ್ತದೆ.

ಅಂಚೆ ಮತದಾನ ಮಾಡುವುದು ಹೇಗೆ?; ಸೇವಾ ಮತದಾರರು ಅಂಚೆ ಮತದಾನ ಮಾಡುವುದು ಹೇಗೆ? ಎಂದು ಈಗಾಗಲೇ ಮಾಹಿತಿ ನೀಡಲಾಗಿದೆ. ಒಟ್ಟು 5 ನಮೂನೆ ಮತ್ತು ಲಕೋಟೆಗಳನ್ನು ಇದಕ್ಕಾಗಿ ನೀಡಲಾಗುತ್ತದೆ.

1 . ಮತಪತ್ರ, ನಮೂನೆ 13 ಎ (ಮತದಾರರಿಂದ ಘೋಷಣೆ)
2. ನಮೂನೆ 13 ಬಿ (ಅಂಚೆ ಮತಪತ್ರವನ್ನು ಹಾಕುವ ಲಕೋಟೆ
3. ನಮೂನೆ 13 ಸಿ (ಅಂಚೆ ಮತಪತ್ರವಿರುವ ಲಕೋಟೆ ಮತ್ತು ಮತದಾರರ ಘೋಷಣೆಯನ್ನು ಹಾಕುವ ಲಕೋಟೆ)
4. ನಮೂನೆ 13 ಡಿ ( ಮತದಾರರ ಮಾರ್ಗದರ್ಶನಕ್ಕಾಗಿ ಸೂಚನೆಗಳು)
5 ನಮೂನೆ 13 ಎ ರಲ್ಲಿ ಮತದಾರರ ಘೋಷಣೆ ನಮೂನೆಯಲ್ಲಿ ಮತದಾರನು ಘೋಷಣೆ ಮಾಡಿ, ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿಕೊಳ್ಳಬೇಕು.

ಮೊದಲು ಮತ ಎಣಿಕೆ; ಅಂಚೆ ಮತದಾರನು ಅಂಚೆ ಮತಪತ್ರದಲ್ಲಿ ಮತದಾನವನ್ನು ಮಾಡಿ (ಕ್ರಾಸ್ ಗುರುತು ಅಥವಾ ಟಿಕ್ ಮಾರ್ಕ್ ಮಾಡುವ ಮೂಲಕ) ನಮೂನೆ 13 ಬಿ ಲಕೋಟೆಯ ಮೇಲೆ ವಿಧಾನ ಸಭಾ ಕ್ಷೇತ್ರದ ಹೆಸರು ಮತ್ತು ಮತಪತ್ರದ ಕ್ರಮಸಂಖ್ಯೆಯನ್ನು ನಮೂದಿಸಿ, 13 ಬಿ ಲಕೋಟೆಯೊಳಗೆ ಮತ ಚಲಾಯಿಸಿದ ಮತಪತ್ರವನ್ನು ಹಾಕಿ ಲಕೋಟೆಯನ್ನು ಮುಚ್ಚಬೇಕು.

ನಂತರ ನಮೂನೆ 13 ಸಿ ನಲ್ಲಿ ಮತ ಚಲಾಯಿಸಿದ ಮತ ಪತ್ರವಿರುವ ಲಕೋಟೆ (13 ಬಿ) ಮತ್ತು ಮತದಾರನಿಂದ ಘೋಷಣೆ (ನಮೂನೆ 13 ಎ) ಅನ್ನು ಹಾಕಿ ಗಮ್ಮಿನಿಂದ ಲಕೋಟೆಯನ್ನು ಮುಚ್ಚಿ, ಲಕೋಟೆ ಮೇಲೆ ಸಹಿ ಮಾಡಿ, ಚುನಾವಣಾಧಿಕಾರಿಗಳ ವಿಳಾಸವನ್ನು ನಮೂದಿಸಬೇಕು.
ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಮತ ಎಣಿಕೆಯ ದಿನ ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಿದ ಬಳಿಕ ಮತಯಂತ್ರದಲ್ಲಿನ ಮತಗಳ ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+