105 ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಬದಲು

ಬೆಂಗಳೂರು, ಆಗಸ್ಟ್ 17 : ರಾಜ್ಯ ಚುನಾವಣಾ ಆಯೋಗ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿದೆ. ಆಗಸ್ಟ್ 29ರಂದು ನಿಗದಿಯಾಗಿದ್ದ ಚುನಾವಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಲಾಗಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದಾಗಿ ಒಂದು ದಿನದ ಸರ್ಕಾರ ರಜೆ ಘೋಷಣೆಯಾಗಿದೆ. ಆದ್ದರಿಂದ, ಆಯೋಗ ಚುನಾವಣೆಯನ್ನು ಮುಂದೂಡಿ ಗುರುವಾರ ಆದೇಶ ಹೊರಡಿಸಿದೆ.

ಚುನಾವಣಾ ಆಯೋಗ 29 ನಗರ ಸಭೆ, 53 ಪುರಸಭೆ ಮತ್ತು 23 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿತ್ತು. ಆದರೆ, ನಾಮಪತ್ರ ಸಲ್ಲಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ, ಚುನಾವಣೆಯ ದಿನಾಂಕವನ್ನು ಆಗಸ್ಟ್ 31ಕ್ಕೆ ನಿಗದಿ ಮಾಡಲಾಗಿದೆ.

Election Commission changed ULBAs election date

ನೂತನ ವೇಳಾಪಟ್ಟಿ

* ನಾಮಪತ್ರ ಸಲ್ಲಿಕೆಗೆ ಆ.18 ಕೊನೆ ದಿನ
* ನಾಮಪತ್ರ ವಾಪಸ್ ಪಡೆಯಲು ಆ.23 ಕೊನೆ ದಿನ
* ಆಗಸ್ಟ್ 31ರಂದು ಮತದಾನ
* ಸೆ.3ರಂದು ಮತ ಎಣಿಕೆ

ಮೂರು ರಾಜಕೀಯ ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪರದಾಡುತ್ತಿವೆ. ಆಗಸ್ಟ್ 14ರ ತನಕ 308 ಜನರು ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದಾರೆ.

2574 ವಾರ್ಡ್‌ಗಳಿಗೆ ನಡೆಯುವ ಚುನಾವಣೆಗೆ ಪ್ರತಿ ವಾರ್ಡ್‌ಗೆ ಕನಿಷ್ಠ ಮೂರು ನಾಮಪತ್ರಗಳು ಸಲ್ಲಿಕೆಯಾದರೂ 8000 ಅಭ್ಯರ್ಥಿಗಳು ಕಣದಲ್ಲಿರಬೇಕು.

3 ಪಾಲಿಕೆಗಳಿಗೆ ಚುನಾವಣೆ : ಆಗಸ್ಟ್ 31ರಂದು ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಸೆಪ್ಟೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+