ಶಾಲಾ ಮಕ್ಕಳಿಗೆ ಮೊಟ್ಟೆ ಪೂರೈಕೆ, ಗುಣಮಟ್ಟ ಪರಿಶೀಲನೆ ಮಾರ್ಗಸೂಚಿ
ಬೆಂಗಳೂರು, ಅಕ್ಟೋಬರ್ 09; ಕರ್ನಾಟಕ ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ಮೊಟ್ಟೆಯನ್ನು ಪೂರೈಸಲಾಗುತ್ತಿದೆ. ಈಗ ಸರಬರಾಜು ಮಾಡಲಾಗುವ ಮೊಟ್ಟೆಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡುವ ಕುರಿತು ಮಾರ್ಗಸೂಚಿಯೊಂದನ್ನು ಪ್ರಕಟಿಸಲಾಗಿದೆ.
ನಿರ್ದೇಶಕರು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರ ಕಛೇರಿ, ಹೆಬ್ಬಾಳ ಈ ಮಾರ್ಗಸೂಚಿ ಪ್ರಕಟಿಸಿದೆ. ಆಹಾರಕ್ಕಾಗಿ ಸರಬರಾಜು ಮಾಡಲಾದ ಮೊಟ್ಟೆಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡುವ ಕುರಿತು ಎಂಬ ವಿಷಯವನ್ನು ಇದು ಒಳಗೊಂಡಿದೆ. ಪತ್ರದಲ್ಲಿ ಕರ್ನಾಟಕ ಸರ್ಕಾರದ ಮೂಲಕ ಇಲಾಖೆಗಳಿಂದ ಮೊಟ್ಟೆಗಳನ್ನು ಪೌಷ್ಟಿಕ ಆಹಾರವಾಗಿ ಪೂರೈಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಮೊಟ್ಟೆಗಳ ಶೇಖರಣೆ ಮತ್ತು ಗುಣಮಟ್ಟ ಪರಿಶೀಲನೆಗೆ ಸಂಬಂಧಿಸಿದಂತೆ ಕೆಲವೊಂದು ಉಪಯುಕ್ತ ಮಾಹಿತಿ ನೀಡಲಾಗಿದೆ ಎಂದು ಹೇಳಿದೆ.

ಎಲ್ಲಾ 4 ವಿಭಾಗೀಯ ಜಂಟಿ ನಿರ್ದೇಶಕರು (ರಾಜ್ಯ ವಲಯ) ಪಶುಪಾಲನಾ ಪಶುವೈದ್ಯಕೀಯ ಸೇವಾ ಇಲಾಖೆ, ಹೆಸರಘಟ್ಟ ಮೈಸೂರು, ರಾಯಚೂರು ಮತ್ತು ಧಾರವಾಡ ಮತ್ತು ಎಲ್ಲಾ 31 ಜಿಲ್ಲಾ ಉಪ ನಿರ್ದೇಶಕರು (ಆಡಳಿತ), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯವರಿಗೆ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕಾಗಿ ಇದನ್ನು ಕಳಿಸಲಾಗಿದೆ.
ಮೊಟ್ಟೆಗಳ ಪೌಷ್ಟಿಕಾಂಶ ಮತ್ತು ಆರೋಗ್ಯ ಪ್ರಯೋಜನಗಳು
ಮೊಟ್ಟೆ, ಅಥವಾ ಟೇಬಲ್ ಎಗ್ಸ್ ಪೌಷ್ಟಿಕ ಆಹಾರಕ್ಕಾಗಿ ಉಪಯೋಗಿಸುವ ಮೊಟ್ಟೆಗಳು ಎಂದರೆ ಆಧುನಿಕ ವೈಜ್ಞಾನಿಕ ವಾಣಿಜ್ಯ ಫಾರ್ಮ್‌ಗಳಲ್ಲಿ ಕೋಳಿಯಿಂದ ಉತ್ಪತ್ತಿಯಾಗುವ ಮೊಟ್ಟೆಗಳು. ಅವುಗಳನ್ನು ಟೇಬಲ್ ಎಗ್ಸ್ ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಯಾವುದೇ ಜೀವಂತ ಕೋಶಗಳನ್ನು ಹೊಂದಿರುವುದಿಲ್ಲ ಅಥವಾ ಅವು ಮರಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಸಸ್ಯಾಹಾರಿಗಳು ಹಾಲನ್ನು ಸೇವಿಸುವಂತೆ ಮೊಟ್ಟೆಯನ್ನು ಸೇವಿಸಬಹುದಾಗಿದೆ. ಮೊಟ್ಟೆ, ಅತ್ಯಂತ ಪೌಷ್ಟಿಕಾಂಶದ, ಕಲಬೆರಕೆಯಿಲ್ಲದ ನೈಸರ್ಗಿಕ ಆಹಾರವಾಗಿದ್ದು, ಹೆಚ್ಚಿನ ಜೈವಿಕ ಮೌಲ್ಯ ಹೊಂದಿರುತ್ತದೆ.
ಇದು ಇತರ ಆಹಾರಗಳ ಗುಣಮಟ್ಟ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ನಿರ್ಣಯಿಸಲು ಉತ್ತಮ ಮಾನದಂಡವಾಗಿದೆ. ಒಂದು ಮೊಟ್ಟೆಯು ವಯಸ್ಕರಿಗೆ ಶಿಫಾರಸ್ಸು ಮಾಡಲಾದ ದೈನಂದಿನ ಪೌಷ್ಟಿಕಾಂಶದ 10% ಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವನ್ನು ಪೂರೈಸುತ್ತದೆ. ಮೊಟ್ಟೆಗಳು ಭೂಮಿಯ ಮೇಲಿರುವ ಅತ್ಯಂತ ಪೌಷ್ಟಿಕ ಆಹಾರ.
ಮೊಟ್ಟೆಯ ಪೌಷ್ಟಿಕಾಂಶದ ಮೌಲ್ಯಗಳು
* ಒಂದು ಮಧ್ಯಮ ಗಾತ್ರದ ಮೊಟ್ಟೆಯು (50 ಗ್ರಾಂ) 6 ಗ್ರಾಂ ಪ್ರೋಟೀನ್, 5 ಗ್ರಾಂ ಕೊಬ್ಬು ಮತ್ತು ಪ್ರಾಯೋಗಿಕವಾಗಿ ಶೂನ್ಯ ಕಾರ್ಬೋಹೈಡ್ರೈಟ್‌ಗಳನ್ನು ಹೊಂದಿರುತ್ತದೆ. ಇದು ಎಲ್ಲಾ ಕೊಬ್ಬು-ಕರಗಬಲ್ಲ ಜೀವಸತ್ವಗಳು ಮತ್ತು ಬಿ-ಕಾಂಪ್ಲೆಕ್ಸ್ ಜೀವಸತ್ವಗಳನ್ನು ಹೊಂದಿರುತ್ತದೆ. ವಿಶೇಷವಾಗಿ ವಿಟಮಿನ್ ಬಿ 12 ಹೊಂದಿರುತ್ತದೆ. ಇದು ಸಸ್ಯ ಮೂಲಗಳ ಆಹಾರದಲ್ಲಿ ಇರುವುದಿಲ್ಲ. ಮೊಟ್ಟೆಗಳು ದೇಹಕ್ಕೆ ಅಗತ್ಯವಾದ ಎಲ್ಲಾ ಖನಿಜಗಳನ್ನು ಹೊಂದಿರುತ್ತವೆ.
* ಮೊಟ್ಟೆಗಳು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಮೂಳೆಗಳು, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಉತ್ತಮ ದೃಷ್ಟಿಯನ್ನು ಉತ್ತೇಜಿಸುತ್ತದೆ.
* ಮೊಟ್ಟೆಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
* ಮೊಟ್ಟೆಯ ಸೇವನೆಯು ಮಧುಮೇಹಿಗಳು ಸೇರಿದಂತೆ ಮಕ್ಕಳು, ಗರ್ಭಿಣಿಯರು, ಪೋಷಣೆ ನೀಡುವ ತಾಯಂದಿರು, ವೃದ್ಧರು, ಕ್ರೀಡಾಪಟುಗಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಳ್ಳೆಯ ಪೌಷ್ಟಿಕ ಆಹಾರವಾಗಿದೆ.
* ಮೊಟ್ಟೆಯ ಹಳದಿ ಬಣ್ಣವು ಬದಲಾಗಬಹುದು (ಹಳದಿಯಿಂದ ತಿಳಿ ಹಳದಿ) ಇದು
ಪೌಷ್ಟಿಕಾಂಶದ ಮೌಲ್ಯದ ಮೇಲೆ ಅತ್ಯಲ್ಪ ಪ್ರಭಾವ ಬೀರುತ್ತದೆ. ಹಳದಿ ಲೋಳೆಯ ಬಣ್ಣದ ಬದಲಾವಣೆಯು ಕೋಳಿಗೆ ನೀಡುವ ಧಾನ್ಯಗಳ ಕಾರಣದಿಂದ ಉಂಟಾಗುತ್ತದೆ.
ಸ್ವೀಕಾರಾರ್ಹ ಮೊಟ್ಟೆಯಲ್ಲಿ ಗಮನಿಸಬೇಕಾದ ಅಂಶಗಳು; ಸಾಮಾನ್ಯವಾಗಿ ಮೊಟ್ಟೆಯ ಗಾತ್ರವು 40-60 ಗ್ರಾಂಗಳಷ್ಟು ಬದಲಾಗುತ್ತದೆ. 40-55 ಗ್ರಾಂ ತೂಕದ ಮೊಟ್ಟೆಯು ತುಲನಾತ್ಮಕವಾಗಿ ದಪ್ಪವಾದ ಚಿಪ್ಪನ್ನು ಹೊಂದಿರುತ್ತದೆ ಮತ್ತು ಒಡೆಯದ ಸಾಗಿಸಲು ಸುಲಭವಾಗಿದೆ. 40-55 ಗ್ರಾಂ ತೂಕದ ಮೊಟ್ಟೆ ಸ್ವೀಕಾರಾರ್ಹವಾಗಿರುತ್ತದೆ.
ಮೊಟ್ಟೆಯ ಚಿಪ್ಪಿನ ಬಣ್ಣವು ಮೊಟ್ಟೆಯ ಗುಣಮಟ್ಟ ಮತ್ತು ಪೌಷ್ಟಿಕಾಂಶದ ಮೇಲೆ ಪ್ರಭಾವ ಬೀರುವುದಿಲ್ಲ. ಮೊಟ್ಟೆಯ ಚಿಪ್ಪಿನ ಬಣ್ಣವು ಕೇವಲ ಹೊರ ನೋಟಕ್ಕೆ ಕಾಣಲ್ಪಡುವ ಅಂಶವಾಗಿದೆ. ಮೊಟ್ಟೆಯ ಚಿಪ್ಪು ಯಾವುದೇ ಗೋಚರ ಅಥವಾ ಕೂದಲಿನ ರೇಖೆಯ ಬಿರುಕುಗಳಿಲ್ಲದೆ ನಯವಾಗಿರಬೇಕು ಮತ್ತು ಕೊಳಕು ಮುಕ್ತವಾಗಿರಬೇಕು.
ಪ್ಯಾಕ್ ಮಾಡಿದ ಮೊಟ್ಟೆಗಳು ಬೆಸ್ಟ್ ಬಿಫೋರ್ ಡೇಟ್ (ಉಪಯೋಗಿಸ ಬಹುದಾದ ಗರಿಷ್ಕೃ ದಿನಾಂಕ) ಅನ್ನು ಹೊಂದಿರುತ್ತದೆ. ತಾಜಾ ಮೊಟ್ಟೆಯಲ್ಲಿ, ಗಾಳಿಯ ಕೋಶವು ಚಿಕ್ಕದಾಗಿರುತ್ತದೆ. ಮೊಟ್ಟೆಯಲ್ಲಿನ ನೀರಿನ ಆವಿಯಾಗುವಿಕೆಯಿಂದಾಗಿ ಹಳೆಯದಾದಂತೆ ಗಾಳಿಯ ಕೋಶವು
ದೊಡ್ಡದಾಗಿತ್ತದೆ.
ಮೊಟ್ಟೆಯ ತಾಜಾತನವನ್ನು ಪರೀಕ್ಷಿಸಲು, ಮೊಟ್ಟೆಯನ್ನು ಒಂದು ಲೋಟ ನೀರಿನಲ್ಲಿ ಮುಳುಗಿಸಿ ಮೊಟ್ಟೆ ಮುಳುಗಿದರೆ, ಸಣ್ಣ ಗಾಳಿಯ ಕೋಶದಿಂದಾಗಿ ಅದು ತಾಜಾವಾಗಿರುತ್ತದೆ. ಮೊಟ್ಟೆ ನಿಂತಿದ್ದರೆ, ಅದು ಕಡಿಮೆ ತಾಜಾವಾಗಿರುತ್ತದೆ. ಮೊಟ್ಟೆಯು ಮೇಲಕ್ಕೆ ತೇಲುತ್ತಿದ್ದರೆ, ದೊಡ್ಡ ಗಾಳಿಯ ಕೋಶದಿಂದಾಗಿ ಹಳೆಯದಾಗಿರುತ್ತದೆ.
ಮೊಟ್ಟೆಗಳ ಸಂಗ್ರಹಣೆ, ಕುದಿಸುವುದು ಹೇಗೆ?; ಒಂದು ಪಾತ್ರೆಯಲ್ಲಿ ಮೊಟ್ಟೆಗಳನ್ನು ಇರಿಸಿ ಮತ್ತು ನೀರಿನಿಂದ ಮುಚ್ಚಿ, ಕುದಿಯುವ ಸಮಯದಲ್ಲಿ ಮೊಟ್ಟೆಯು ಬಿರುಕು ಬಿಡುವುದನ್ನು ತಡೆಯಲು ಸ್ವಲ್ಪ ಉಪ್ಪು ಸೇರಿಸಿ ಹಾಗೂ 12 ರಿಂದ 13 ನಿಮಿಷ ಬೇಯಿಸಿ, ಬಿಸಿ ನೀರನ್ನು ತೆಗೆದುಹಾಕಿ ಸಾಮಾನ್ಯ ನೀರನ್ನು ಸೇರಿಸುವುದು.
ಮೊಟ್ಟೆಗಳನ್ನು ತಂಪಾದ ಸ್ಥಳದಲ್ಲಿ ಸಂಗ್ರಹಿಸಿ, ಈರುಳ್ಳಿಯಂತಹ ಆಹಾರಗಳಿಂದ ದೂರವಿರಿಸಿ, ಏಕೆಂದರೆ ಮೊಟ್ಟೆಗಳು ಶೇಖರಣೆಯ ಸಮಯದಲ್ಲಿ ವಾಸನೆಯನ್ನು ಹೀರಿಕೊಳ್ಳುತ್ತವೆ. ಯಾವಾಗಲೂ ಮೊಟ್ಟೆಗಳನ್ನು ಪ್ಲಾಸ್ಟಿಕ್/ ಪೇಪರ್ ಟ್ರೇಗಳಲ್ಲಿ ವಿಶಾಲವಾದ ಭಾಗವನ್ನು ಮೇಲಕ್ಕೆ ಇರಿಸಿ ಶೇಖರಣೆ ಮಾಡುವುದು.
ಚಳಿಗಾಲದ ಪರಿಸ್ಥಿತಿಗಳಲ್ಲಿ (25 °C ಗಿಂತ ಕಡಿಮೆ ತಾಪಮಾನ), ಮೊಟ್ಟೆಗಳನ್ನು 10-15 ದಿನಗಳವರೆಗೆ ಸಂಗ್ರಹಿಸಬಹುದು. ಆದರೆ ಬೇಸಿಗೆಯ ಪರಿಸ್ಥಿತಿಗಳಲ್ಲಿ (ತಾಪಮಾನ 30 ° C ಮತ್ತು ಹೆಚ್ಚಿನದು), ಸಾಧ್ಯವಾದಷ್ಟು 5-7 ದಿನಗಳಲ್ಲಿ ಬಳಸುವುದು. ರೆಫ್ರಿಜರೇಟರ್ನಲ್ಲಿ ಮೊಟ್ಟೆಗಳನ್ನು 30-60 ದಿನಗಳವರೆಗೆ 2-8 °Cನಲ್ಲಿ ಸಂಗ್ರಹಿಸಬಹುದು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications