ದ್ವಿತೀಯ ಪಿಯು ಅಂಕಪಟ್ಟಿ ತಿದ್ದುಪಡಿ ಇನ್ನು ಉಚಿತವಲ್ಲ, ಶುಲ್ಕ ನಿಗದಿ

ಬೆಂಗಳೂರು, ಜನವರಿ 19: ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ಇನ್ನು ಮುಂದೆ ಅಂಕಪಟ್ಟಿಯನ್ನು ಉಚಿತವಾಗಿ ತಿದ್ದುಪಡಿ ಮಾಡಿಕೊಡುವುದಿಲ್ಲ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ದ್ವಿತೀಯ ಪಿಯುಸಿ ಅಂಕಪಟ್ಟಿ ತಿದ್ದುಪಡಿ ಮಾಡಿಕೊಡಲು ಶುಲ್ಕವನ್ನು ನಿಗದಿಗೊಳಿಸಿ ಆದೇಶವನ್ನು ಹೊರಡಿಸಿದೆ. ವಿದ್ಯಾರ್ಥಿಗಳು, ಪೋಷಕರು ಮಂಡಲಿ ನಿರ್ಣಯಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅಧ್ಯಕ್ಷರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಪತ್ರವು ದ್ವಿತೀಯ ಪಿಯುಸಿ ಅಂಕಪಟ್ಟಿಗಳಲ್ಲಿನ ತಿದ್ದುಪಡಿಗೆ ಶುಲ್ಕ ನಿಗದಿಪಡಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ಆದೇಶ, ಹಿರಿಯ ಸಹಾಯಕ ನಿರ್ದೇಶಕರು, ಪಿಯು ಅಂಕಪಟ್ಟಿ ಶಾಖೆ ಇವರ ಟಿಪ್ಪಣಿಯನ್ನು ಸಹ ಉಲ್ಲೇಖಿಸಲಾಗಿದೆ.

Education Department Fixed Fee For PUC Marks Card Correction

ಪ್ರಸ್ತಾವನೆ ಏನು?; ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಿಂದ ಪ್ರಸ್ತಾವನೆಗಳು ಪಿಯು ಅಂಕಪಟ್ಟಿ ಶಾಖೆಗೆ ಮೂಲ ಅಂಕಪಟ್ಟಿಯೊಂದಿಗೆ ಸಲ್ಲಿಸಲಾಗುತ್ತಿದ್ದು, ಸದರಿ ಅಂಕಪಟ್ಟಿಯಲ್ಲಿ ತಿದ್ದುಪಡಿಗಳಿಗೆ ಯಾವುದೇ ಶುಲ್ಕ ನಿಗದಿಯಾಗಿರುವುದಿಲ್ಲ.

ಈ ಮೇಲಿನ ತಿದ್ದುಪಡಿಗಳನ್ನು ಮಾಡುವ ಸಂದರ್ಭಗಳಲ್ಲಿ ಅಭ್ಯರ್ಥಿಯು ಸಲ್ಲಿಸಿರುವಂತಹ ಮೂಲ ಅಂಕಪಟ್ಟಿಯಲ್ಲಿಯೇ ಬೆರಳಚ್ಚು ಯಂತ್ರದ ಮೂಲಕ ತಿದ್ದುಪಡಿ ಮಾಡಿ ಶಾಖೆಯ ಹಿರಿಯ ಸಹಾಯಕ ನಿರ್ದೇಶಕರಿಂದ ದೃಢಿಕರಿಸಲಾಗುತ್ತಿದೆ. ಆದರೆ ಕೆಲವು ಅಭ್ಯರ್ಥಿಗಳು ಮೂಲ ಅಂಕಪಟ್ಟಿಗಳಲ್ಲಿ ತಿದ್ದುಪಡಿಯಾಗಿರುವುದನ್ನು ಕೆಲವು ಸಂಸ್ಥೆ/ ಇಲಾಖೆಗಳಲ್ಲಿ ಒಪ್ಪದ ಕಾರಣ ಮೂಲ ಅಂಕಪಟ್ಟಿಯನ್ನು ಹಿಂದಿರುಗಿಸಿ ದ್ವಿಪ್ರತಿಗಾಗಿ ಪ್ರಸ್ತಾವನೆಗಳನ್ನು ಮಂಡಲಿಗೆ ಸಲ್ಲಿಸಲಾಗುತ್ತಿದೆ.

ಅಲ್ಲದೆ, ಭಾವಚಿತ್ರ ತಿದ್ದುಪಡಿಗಳಿಗೆ CORRECTED COPY ಎಂದು ಮುದ್ರಿಸಿ ನೀಡಲಾಗುತ್ತಿದ್ದು, ಇದೇ ಮಾದರಿಯಲ್ಲಿ ಪುಸಕ್ತ ಮತ್ತು ಹಿಂದಿನ ಎಲ್ಲಾ ವರ್ಷಗಳ ಅಂಕಪಟ್ಟಿ, ತಿದ್ದುಪಡಿಗಳಿಗೆ ಶುಲ್ಕವನ್ನು ನಿಗದಿಪಡಿಸಿ, ಅಂಕಪಟ್ಟಿಗಳನ್ನು ನೀಡುವ ಬಗ್ಗೆ ಮಂಡಲಿಯಿಂದ ಆದೇಶವನ್ನು ಹೊರಡಿಸಲು ಕ್ರಮ ಕೈಗೊಳ್ಳಲು ಕೋರಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ಮಾಧ್ಯಮ ತಿದ್ದುಪಡಿ ಮಾಡುವ ಸಂಬಂಧ ಆದೇಶಿಸಿದೆ.

ಆದೇಶದ ವಿವರಗಳು: ಪ್ರಸಕ್ತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿ ಸಂಬಂಧ ಸರ್ಕಾರಿ ಆದೇಶದಲ್ಲಿ ನಿಗದಿಯಾಗಿರುವಂತೆ ಹಾಗೂ ಮಂಡಲಿಯ ಇ-ಕಛೇರಿಯ ಕಡತದಲ್ಲಿ ಅನುಮೋದಿಸಿರುವಂತೆ ನಿಗದಿತ ಶುಲ್ಕ ರೂ. 1600 ವನ್ನು https://k2.karnataka.gov.in ಮೂಲಕ ಲಾಗಿನ್ ಆಗಿ ಚಲನ್ ಪ್ರತಿಯನ್ನು ಸೃಜಿಸಿ ಲೆಕ್ಕ ಶೀರ್ಷಿಕೆ 0202-01-101-1-06 ನ್ನು ನಮೂದಿಸಿ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಹಣ ಪಾವತಿಸಿದ ಮೂಲ ಕೆ-2 ಚಲನ್ ಪ್ರತಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪ್ರತಿ ಮತ್ತು ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಡಲಿಯ ವತಿಯಿಂದ ಪರಿಷ್ಕೃತ ಅಂಕಪಟ್ಟಿಯನ್ನು ನೀಡಲಾಗುವುದು ಎಂದು ಈ ಮೂಲಕ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+