12 ಮತಗಟ್ಟೆಗಳಲ್ಲಿ ಏ.29ರಂದು ಮರುಮತದಾನ

ಬೆಂಗಳೂರು, ಏ. 27 : ಕರ್ನಾಟಕದ 12 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ವಿವಿಧ ಕಾರಣಗಳಿಂದಾಗಿ 12 ಮತಗಟ್ಟೆಯಲ್ಲಿ ಏ.29ರಂದು ಮರುಮತದಾನ ನಡೆಯಲಿದೆ, ಆದ್ದರಿಂದ ಮೂರು ದಿನಗಳ ಕಾಲ ಈ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಮುಂದುವರೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಕುಮಾರ್ ಝಾ, ಏ.17ರಂದು ನಡೆದ ಮತದಾನದ ವೇಳೆ ಮತಯಂತ್ರಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಒಂದು ಕಡೆ ಚುನಾವಣಾಧಿಕಾರಿಗಳು ಕರ್ತವ್ಯಲೋಪವೆಸಗಿದ ಕಾರಣ 12 ಮತಗಟ್ಟೆಗಳಲ್ಲಿ ಏಪ್ರಿಲ್‌ 29ರಂದು ಮರು ಮತದಾನ ನಡೆಯಲಿದೆ ಎಂದರು.

Election Commission

ತುಮಕೂರು ಲೋಕಸಭಾ ಕ್ಷೇತ್ರದ ತುರುವೇಕೆರೆಯ ಮತಗಟ್ಟೆ ಸಂಖ್ಯೆ 8ರಲ್ಲಿ ಮತದಾರರು ಮತ ಚಲಾಯಿಸುವಾಗ ಅನುಮತಿ ಪಡೆಯದೆ ಸಿಬ್ಬಂದಿಯೇ ಮತಯಂತ್ರ ನಿರ್ವಹಣೆ ಮಾಡುತ್ತಿದ್ದರು. ಇನ್ನುಳಿದ 11 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ದೋಷ ಇರುವುದು ದೃಢಪಟ್ಟಿದೆ. ಆದ್ದರಿಂದ ಮರುಮತದಾನಕ್ಕೆ ಆದೇಶ ನೀಡಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು. [ಕರ್ನಾಟಕದ ಮತದಾನದ ಚಿತ್ರಗಳನ್ನು ನೋಡಿ]

ಎಲ್ಲ 12 ಮತಗಟ್ಟೆಗಳಲ್ಲಿ ಏ. 29ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮರು ಮತದಾನ ನಡೆಯಲಿದೆ. ತುರುವೇಕರೆಯಲ್ಲಿ ಮರು ಮತದಾನಕ್ಕೆ ಕಾರಣರಾದ ನಾಲ್ವರು ಚುನಾವಣಾ ಸಿಬ್ಬಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ. 12 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಅವರು ವಿವರಣೆ ನೀಡಿದರು. [ಕರ್ನಾಟಕದಲ್ಲಿ ಎಷ್ಟು ಮತದಾನವಾಗಿದೆ]

ಎಲ್ಲೆಲ್ಲಿ ಮರು ಮತದಾನ : ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 57, ಬಾಗಲಕೋಟೆಯ ಮತಗಟ್ಟೆ ಸಂಖ್ಯೆ 7 ಮತ್ತು ಜಮಖಂಡಿಯ ಮತಗಟ್ಟೆ ಸಂಖ್ಯೆ 27, ವಿಜಾಪುರದ ಸಿಂಧಗಿಯ- 216, ಗುಲ್ಬರ್ಗದ ಸೇಡಂನ- 165, ರಾಯಚೂರಿನ ಶಹಾಪುರ -35, ಯಾದಗಿರಿ- 112, ಬೀದರ್‌- 20 ಮತ್ತು 201, ಶಿವಮೊಗ್ಗದ ಬೈಂದೂರು- 174, ಹಾಸನದ ಅರಸೀಕೆರೆ- 72 ಹಾಗೂ ತುಮಕೂರಿನ ತುರುವೇಕೆರೆಯ ಮತಗಟ್ಟೆ ಸಂಖ್ಯೆ 8ರಲ್ಲಿ ಮರು ಮತದಾನ ನಡೆಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+