Dr Bro: ರಾತ್ರೋರಾತ್ರಿ ಯೂಟ್ಯೂಬ್ ಲೈವ್ ಬಂದು ಗಗನ್ ಹೇಳಿದ್ದೇನು?-ಇಲ್ಲಿದೆ ಮಾಹಿತಿ
Dr Bro Gagan: ತಮ್ಮ ಸ್ಟೈಲ್‌ನಲ್ಲೇ ದೇವ್ರು ನಮಸ್ಕಾರ ಅಂತಾ ಹೇಳುತ್ತಲೇ ರಾತ್ರೋ ರಾತ್ರಿ ಫಸ್ಟ್ ಟೈಂ ಯೂಟ್ಯೂಬ್ ಲೈವ್ ಬಂದಿದ್ದಾರೆ. ವೀವರ್ಸ್‌ಗೆಲ್ಲಾ ಹಾಯ್ ಹೇಳುತ್ತಾ ಮಾತು ಪ್ರಾರಂಭ ಮಾಡಿದರು. ಹಾಗಾದರೆ ಈ ವೇಳೆ ಅವರು ಏನೆಲ್ಲಾ ಹೇಳಿದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯೂಟ್ಯೂಬ್ ಲೈವ್ ಬಂದ ವೇಳೆ ಅವರು, ಡಾ ಬ್ರೋ ಮಾಸಿಕ ಆದಾಯವನ್ನು ಹಂಚಿಕೊಂಡಿದ್ದಾರೆ. ಮಾಸಿಕ ಆದಾಯ ಅಂದಾಜು 2100$ ಎಂದು ತಮ್ಮ ಫೋನ್ ಸ್ಕ್ರೀನ್‌ನಲ್ಲೇ ತೋರಿಸಿದ್ದಾರೆ. ಅಲ್ಲದೆ ಇದೇ ವೇಳೆ ಅವರು ಪ್ರಮುಖ ವಿಚಾರಗಳನ್ನು ಕೂಡ ಹಂಚಿಕೊಂಡಿದ್ದಾರೆ. ಮಾಹಿತಿ ಇಲ್ಲಿದೆ ನೋಡಿ ಗಮನಿಸಿ.

ದೇಶ ವಿದೇಶ ಸುತ್ತುವ ಮೂಲಕ ಕನ್ನಡವನ್ನು ಪಸರಿಸುತ್ತಿರುವ ಡಾ.ಬ್ರೋ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುವವರಿಗೆ ಅವರ ಬಗ್ಗೆ ಗೊತ್ತೇ ಇರುತ್ತದೆ. ಚಿಕ್ಕ ವಯಸ್ಸಿನಲ್ಲೇ ದೇಶ, ವಿದೇಶಗಳನ್ನು ಸುತ್ತಿ ಪ್ರಸಿದ್ಧಿಯಾಗಿದ್ದು, ಯೂಟ್ಯೂಬ್ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ದೇಶ-ವಿದೇಶಗಳಲ್ಲಿ ಸುತ್ತಾಡುತ್ತಾ, ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಮನೆ ಮಾತಾಗಿದ್ದಾರೆ 22 ವರ್ಷದ ಡಾ.ಬ್ರೋ.
ಇನ್ನು ಡಾ.ಬ್ರೋ ಬಿಗ್‌ಬಾಸ್‌ಗೆ ಹೋಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಸೀಸನ್ 11 ಶುರು ಆಗಲಿದ್ದು, ಸಂಭಾವ್ಯರ ಪಟ್ಟಿ ಒಂದೊಂದಾಗಿ ಹೊರಬರುತ್ತಲೇ ಇದೆ. ಈ ಪೈಕಿ ಡಾ.ಬ್ರೋ (ಗಗನ್) ಅವರ ಹೆಸರು ಕೂಡ ಸರದಿಯಲ್ಲಿದ್ದು, ಇದೀಗ ಖುದ್ದು ಲೈವ್ ಬಂದ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಇದೇ ಮೊದಲ ಬಾರಿಗೆ ಯೂಟ್ಯೂಬ್ ಲೈವ್ಗೆ ಬಂದಿರುವ ಗಗನ್ ಅವರು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಧ್ಯೆ ಕೆಲವು ದಿನಗಳು ಅಂತರ ಕಾಪಾಡಿಕೊಂಡಿದ್ದ ಬಗ್ಗೆ ವಿವರಿಸಿರುವ ಗಗನ್, ಒಂದು ದೇಶಕ್ಕೆ ಹೋಗಬೇಕು ಎಂದರೆ ಸಿಕ್ಕಾಪಟ್ಟೆ ಪ್ರಕ್ರಿಯೆಗಳು ಇರುತ್ತವೆ. ಅದನ್ನೆಲ್ಲಾ ಸರಿದೂಗಿಸಿ, ರೆಡಿ ಆಗಿ ಹೋಗಲು ಟೈಂ ಬೇಕಾಗುತ್ತದೆ. ಇದೇ ಕಾರಣಕ್ಕೆ ಅವುಗಳ ಪ್ರಕ್ರಿಯೆಯಲ್ಲಿದ್ದೆ ಎಂದಿದ್ದಾರೆ. ಇದೇ ವೇಳೆ ಯಶಸ್ವಿ ಯೂಟ್ಯೂಬರ್ ಆಗಲು ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಗಗನ್ ಮಾತನಾಡಿದ್ದಾರೆ.
ಲೈವ್‌ನಲ್ಲಿ ಬಿಗ್‌ಬಾಸ್‌ಗೆ ಹೋಗುತ್ತೀರಾ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಸ್ವಲ್ಪತ್ತು ಡಾ.ಬ್ರೋ. ಮೌನವಾಗಿಬಿಟ್ಟರು. ಬಳಿಕ ಮೂರು ತಿಂಗಳು ಒಂದೇ ಕಡೆ ಇರುವುದು ನನಗೆ ಕಷ್ಟ ಆಗಬಹುದು. ಅದೇ ಸಮಯದಲ್ಲಿ ನಾನು ಕೆಲವು ದೇಶ ಸುತ್ತಬಹುದು. ಆದ್ದರಿಂದ ಈ ಬಗ್ಗೆ ನಾನು ಏನೂ ಯೋಚನೆ ಮಾಡಿಲ್ಲ. ಬಿಗ್‌ಬಾಸ್‌ಗೆ ಹೋಗುತ್ತೇನೋ, ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟತೆ ಇಲ್ಲ ಅಂತಲೂ ಹೇಳಿದ್ದಾರೆ.
ಮತ್ತೊಂದೆಡೆ ಬಿಗ್‌ಬಾಸ್‌ಗೆ ಹೋಗಬೇಡಿ, ನಿಮಗೆ ನಿಮ್ಮದೇ ಆದ ಐಡೆಂಟಿಟಿ ಇದೆ, ಗೌರವ ಇದೆ. ಅದನ್ನು ಕಳೆದುಕೊಳ್ಳಬೇಡಿ ಎಂದು ಹಲವರು ಲೈವ್‌ನಲ್ಲಿ ಕಮೆಂಟ್ ಮೂಲಕ ತಿಳಿಸಿದರೆ, ಇನ್ನೂ ಕೆಲವರು ಮತ್ತೆ ಕೆಲವರು ಬಿಗ್‌ಬಾಸ್‌ನಲ್ಲಿ ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಡಾ.ಬ್ರೋ ಮುಂದಿನ ದಿನಗಳಲ್ಲಿ ಈ ಬಗ್ಗ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಎಂದು ಕಾದುನೋಡಬೇಕಿದೆ. ಇನ್ನು ಡಾ ಬ್ರೋ ಯೂಟ್ಯೂಬ್ ಲೈವ್ ಅನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣ ಮಾಡಿದ್ದು, 39 ಸಾವಿಕ್ಕೂ ಅಧಿಕ ಲೈಕ್ಸ್ ಬಂದಿವೆ.












Click it and Unblock the Notifications