ಬೆಂಗಳೂರಿನಲ್ಲಿ ಬಾಲಕಿ ಮೇಲೆ ಜರ್ಮನ್ ಶೆಫರ್ಡ್ ನಾಯಿ ದಾಳಿ- ವಿಡಿಯೋ
ಬೆಂಗಳೂರು ಜೂನ್ 28: ಬೆಂಗಳೂರಿನ ಕೆಆರ್ ಪುರಂನಲ್ಲಿ ಬಾಲಕಿಯ ಮೇಲೆ ಸಾಕುನಾಯಿವೊಂದು ಏಕಾಏಕಿ ದಾಳಿ ಮಾಡಿದೆ. ಈ ತಿಂಗಳು ಬೆಂಗಳೂರಿನಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಬೆಂಗಳೂರಿನ ಕೆಆರ್ ಪುರಂನಲ್ಲಿ ತನ್ನ ಮನೆ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮೇಲೆ ನೆರೆಹೊರೆಯವರ ಜರ್ಮನ್ ಶೆಫರ್ಡ್ ನಾಯಿ ದಾಳಿ ಮಾಡಿದೆ. ಜೂನ್ 28ರಂದು ಬೆಳಗ್ಗೆ 7.30ಕ್ಕೆ ನಡೆದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
A boy attack by German Shepherd dog in Bengaluru, incident captured in CCTVIn a horrific incident that has come to light from Bengaluru's KR Puram, a boy who was walking with his mother on a road outside their house was attacked by German Shepherd dog.Incident pic.twitter.com/j0kk0zG7H1
— AMIT KUMAR GOUR (@gouramit) June 28, 2023
ಮಹಿಳೆ ಗೇಟ್ ತೆರೆದಾಗ ರಸ್ತೆಯ ಮೂಲಕ ಹಾದು ಹೋಗುತ್ತಿದ್ದ ಪುಟ್ಟ ಬಾಲಕಿ ಮನೆಯ ಮುಂದೆ ನಿಂತಿದ್ದಳು ಮತ್ತು ಜರ್ಮನ್ ಶೆಫರ್ಡ್ ತಕ್ಷಣ ಬಾಲಕಿ ಮೇಲೆ ದಾಳಿ ಮಾಡಿದೆ. ಇದನ್ನು ನೋಡಿದ ಮಹಿಳೆ ಬಾಲಕಿ ರಕ್ಷಣೆಗಾಗಿ ಓಡಿ ಹೋಗುತ್ತಾಳೆ. ಅಷ್ಟರಲ್ಲಿ ಬಾಲಕಿ ತಾಯಿ ನಾಯಿಯಿಂದ ಬಾಲಕಿಯನ್ನು ರಕ್ಷಿಸಲು ಯತ್ನಿಸುತ್ತಾಳೆ.

ಬಾಲಕಿ ಕಿರುಚಾಡುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ನಿವಾಸಿಗಳು ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ನಾಯಿಯಿಂದ ಬಾಲಕಿಯನ್ನು ಬಿಡಿಸುತ್ತಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈ ತಿಂಗಳ ಆರಂಭದಲ್ಲಿ ಆಡುಗೋಡಿಯಲ್ಲಿ 9 ವರ್ಷದ ಬಾಲಕಿಗೆ ಸಾಕು ನಾಯಿ ಕಚ್ಚಿತ್ತು. ಇಂತಹ ಇನ್ನೊಂದು ಘಟನೆಯಲ್ಲಿ ಜಯನಗರದಲ್ಲಿ 11 ವರ್ಷದ ಬಾಲಕನ ಮೇಲೆ ಮತ್ತೊಂದು ಸಾಕು ನಾಯಿ ದಾಳಿ ಮಾಡಿತ್ತು. ಎರಡೂ ಘಟನೆಗಳಲ್ಲಿ ಸಾಕುಪ್ರಾಣಿಗಳ ಮಾಲೀಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.
#Karnataka
— Kiran Parashar (@KiranParashar21) June 28, 2023
Motorists and vehicles had a narrow escape as an iron pillar grid collapsed in the middle of a busy road in #Hubballi @IndianExpress pic.twitter.com/iUFh8FKzVB
ಮತ್ತೊಂದು ಘಟನೆ
ಜನನಿಬಿಡ ರಸ್ತೆಯ ಮಧ್ಯದಲ್ಲಿ ಕಬ್ಬಿಣದ ಪಿಲ್ಲರ್ ಗ್ರಿಡ್ ಕುಸಿದು ಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನ ಸವಾರರು ಮತ್ತು ವಾಹನಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯಿಂದಾಗಿ ಸವಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications