ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಸ್ವಾಮೀಜಿ ಸ್ಫೋಟಕ ಭವಿಷ್ಯ.. DK Shivakumar

ದಾವಣಗೆರೆ, ಜುಲೈ, 10: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿ ಎದ್ದಿದೆ. ಈ ನಡುವೆಯೇ ಸ್ವಾಮೀಜಿಯೊಬ್ಬರು ಈ ಕುರಿತು ಸ್ಫೋಟಕ ಭವಷ್ಯ ನುಡಿದಿದ್ದು, ಇದು ಎಲ್ಲಡೆ ವೈರಲ್‌ ಆಗುತ್ತಿದೆ. ಹಾಗಾದ್ರೆ ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೆಲ ಸ್ವಾಮೀಜಿಗಳು ರಾಜ್ಯ ರಾಜಕೀಯದ ಬಗ್ಗೆ ಅಚ್ಚರಿ ಭವಿಷ್ಯಗಳನ್ನು ನುಡಿಯುತ್ತಲಿರುತ್ತಾರೆ. ಅದರಲ್ಲೂ ಇದೀಗ ರಾಜ್ಯದಲ್ಲಿ ಸಿಎಂ ಬದಲಾವಣೆ ಗುಂಗು ಎದ್ದಿದೆ. ಈ ಕುರಿತು ಸ್ವಾಮೀಜಿಯೊಬ್ಬರು ಸ್ಫೋಟಕ ಭವಿಷ್ಯ ನುಡಿದು ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.

DK Shivakumar Will Become Chief Minister Shivayogeeshwara swamiji prediction

ದಾವಣಗೆರೆ ಜಿಲ್ಲೆಯ ಸೊಕ್ಕೆ ಗ್ರಾಮದ ಕಾಡುಸಿದ್ದೇಶ್ವರ ಮಠದ ಶಿವಯೋಗೀಶ್ವರ ಸ್ವಾಮೀಜಿಯವರು ಡಿಸಿಎಂ ಡಿ.ಕೆ ಶಿವಕುಮಾರ್​​ ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತು ಕಾಡುಸಿದ್ದೇಶ್ವರ ಮಠ ನೊಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ ನುಡಿದಿರುವ ಭವಿಷ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಗುರುಪೂರ್ಣಿಮೆಯ ದಿನದಂದು ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಭವಿಷ್ಯ ನುಡಿದಿದ್ದಾರೆ. ಈ ಅವಧಿಯಲ್ಲೇ ಸಿಎಂ ಆಗುತ್ತಾರೆ ಎಂದು ಶಿವಯೋಗೀಶ್ವರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯ ನುಡಿದು ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್​​ನಲ್ಲಿ ಸೆಪ್ಟೆಂಬರ್​ ಕ್ರಾಂತಿ ಮತ್ತು ಸಿಎಂ ಬದಲಾವಣೆ ಚರ್ಚೆ ಜೋರಾಗುತ್ತಿದ್ದಂತೆ ಇತ್ತ ಗುರುಪೂರ್ಣಿಮೆಯ ದಿನದಂದೇ ಕಾಡುಸಿದ್ದೇಶ್ವರ ಮಠ ನೊಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಈ ಅವಧಿಯಲ್ಲೇ ಡಿ.ಕೆ.ಶಿವಕುಮಾರ್​​ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದು, ಇದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಸಚಿವ ಕೆ.ಎನ್.ರಾಜಣ್ಣ ಅವರು ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈ ಭವಿಷ್ಯ ಹೊರಬಿದ್ದಿದೆ.

ಡಿ.ಕೆ. ಶಿವಕುಮಾರ್ ರಾಜ್ಯದ ಸರ್ಕಾರದ ಕೆಲಸಗಳಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಯಾವಾಗಲೂ ಮಠಕ್ಕೆ ಭೇಟಿ ನೀಡುತ್ತಾರೆ, ಆದರೆ, ರಾಜಕೀಯ ವಿಚಾರಗಳಿಗಾಗಿ ಬರುವುದಿಲ್ಲ. ಅವರ ಹೋರಾಟ ಮತ್ತು ಜನಸೇವೆಯ ಕೆಲಸಗಳಿಗೆ ರಾಜ್ಯದ ಜನತೆಯೇ ಸಾಕ್ಷಿ ಆಗಿದ್ದಾರೆ. ರೈತರ, ಜನರ ಸಂಕಲ್ಪದ ಮೇರೆಗೆ, ಈ ಅವಧಿಯಲ್ಲೇ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಗುರುಪೂರ್ಣಿಮೆಯ ದಿನದಂದು ಈ ಆಶೀರ್ವಾದವನ್ನು ನೀಡಿರುವುದು ಡಿಕೆ ಶಿವಕುಮಾರ್‌ ಅವರ ಬೆಂಬಲಿಗರಲ್ಲಿ ಉತ್ಸಾಹವನ್ನು ತುಂಬಿದೆ. ಕಾಡುಸಿದ್ದೇಶ್ವರ ಮಠದ ಶ್ರೀಗಳ ಈ ಭವಿಷ್ಯವು ಕರ್ನಾಟಕದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಒಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸ್ಪರ್ಧೆ ಇದೆ ಎಂಬ ಊಹಾಪೋಹಗಳು ಹರಡಿವೆ. ಇದೀಗ ಸ್ವಾಮೀಜಿಯವರ ಈ ಹೇಳಿಕೆಯು ಡಿಕೆಶಿ ಬೆಂಬಲಿಗರಿಗೆ ಹೊಸ ಶಕ್ತಿ ತಂದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+