ಕರ್ನಾಟಕದಲ್ಲಿ ಮೊದಲ ದಿನ ಎಷ್ಟು ಮಕ್ಕಳಿಗೆ ಕೊರೊನಾವೈರಸ್ ಲಸಿಕೆ?
ಬೆಂಗಳೂರು, ಜನವರಿ 3: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ತೀವ್ರತೆಯನ್ನು ತಡೆಯುವ ನಿಟ್ಟಿನಲ್ಲಿ 15 ರಿಂದ 18 ವರ್ಷದ ಮಕ್ಕಳಿಗೂ ಲಸಿಕೆಯನ್ನು ವಿತರಿಸುವುದಕ್ಕೆ ಈಗಾಗಲೇ ಪ್ರಾರಂಭಿಸಲಾಗಿದೆ. ಕಳೆದ ಡಿಸೆಂಬರ್ 25ರಂದು ದೇಶಾದ್ಯಂತ 15 ವರ್ಷ ಮೀರಿದ ಮಕ್ಕಳಿಗೂ ಲಸಿಕೆ ವಿತರಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು.
ಮೊದಲ ದಿನವಾದ ಸೋಮವಾರ ರಾತ್ರಿ 7 ಗಂಟೆ ವೇಳೆಗೆ ಒಟ್ಟು 37,84,212 ಮಕ್ಕಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿತ್ತು. ತಡನಂತರ ರಾತ್ರಿ 8 ಗಂಟೆ ಹೊತ್ತಿಗೆ ದೇಶಾದ್ಯಂತ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮಟ್ಟಿಗೆ ಕೊವಿಡ್-19 ಲಸಿಕೆ ವಿತರಣೆ ಬಗ್ಗೆ ಮಾಹಿತಿಯನ್ನು ನೋಡುವುದಾದರೆ ಮೊದಲ ದಿನವೇ ರಾಜ್ಯದಲ್ಲಿ ಒಟ್ಟು 4,14,723 ಮಕ್ಕಳಿಗೆ ಲಸಿಕೆಯನ್ನು ವಿತರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂಬುದರ ಪಟ್ಟಿಯನ್ನು ಮುಂದೆ ನೀಡಲಾಗಿದೆ.

ಜಿಲ್ಲಾವಾರು ಲಸಿಕೆ ವಿತರಣೆ ಪಟ್ಟಿ:
ಕರ್ನಾಟಕದಲ್ಲಿ 15 ರಿಂದ 18 ವರ್ಷದ ಒಟ್ಟು 414723 ಮಕ್ಕಳಿಗೆ ಮೊದಲ ದಿನವೇ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳಿಗೆ ಲಸಿಕೆಯನ್ನು ವಿತರಿಸಲಾಗಿದೆ ಎಂಬುದರ ಪಟ್ಟಿಯನ್ನು ಮುಂದೆ ಓದಿ ತಿಳಿಯಿರಿ.
| ಜಿಲ್ಲೆ | ಲಸಿಕೆ ಪಡೆದ ಮಕ್ಕಳ ಸಂಖ್ಯೆ |
| ಮೈಸೂರು | 8404 |
| ಯಾದಗಿರಿ | 5524 |
| ಬೆಂಗಳೂರು ನಗರ | 9213 |
| ಚಿಕ್ಕಬಳ್ಳಾಪುರ | 5876 |
| ಕೊಪ್ಪಳ | 10451 |
| ಬಳ್ಳಾರಿ | 37959 |
| ಬೀದರ್ | 20060 |
| ಗದಗ | 2047 |
| ವಿಜಯಪುರ | 8251 |
| ರಾಯಚೂರು | 10979 |
| ಬೆಂಗಳೂರು ಗ್ರಾ. | 5293 |
| ಚಾಮರಾಜನಗರ | 11694 |
| ಬಿಬಿಎಂಪಿ | 22604 |
| ಮಂಡ್ಯ /td> | 9037 |
| ರಾಮನಗರ | 6042 |
| ಚಿತ್ರದುರ್ಗ | 13988 |
| ಬಾಗಲಕೋಟೆ | 21174 |
| ಶಿವಮೊಗ್ಗ | 8405 |
| ದಾವಣಗೆರೆ | 13225 |
| ತುಮಕೂರು | 22044 |
| ದಕ್ಷಿಣ ಕನ್ನಡ | 14823 |
| ಕೊಡಗು | 3103 |
| ಉಡುಪಿ | 10530 |
| ಉತ್ತರ ಕನ್ನಡ | 16428 |
| ಕಲಬುರಗಿ | 12390 |
| ಚಿಕ್ಕಮಗಳೂರು | 6778 |
| ಹಾಸನ | 13937 |
| ಕೋಲಾರ | 10476 |
| ಧಾರವಾಡ | 11982 |
| ಬೆಳಗಾವಿ | 47940 |
| ಹಾವೇರಿ | 14066 |
| ವಲಯಬಿಬಿಎಂಪಿ ವ್ಯಾಪ್ತಿಯಲ್ಲಿ 15-17 ವರ್ಷದ ಮಕ್ಕಳಿಗೆ ಲಸಿಕೆ | |
| ವಲಯ | ಎಷ್ಟು ಮಕ್ಕಳಿಗೆ ಲಸಿಕೆ? |
| ದಾಸರಹಳ್ಳಿ | 2025 |
| ಆರ್.ಆರ್.ನಗರ | 3444 |
| ಬೊಮ್ಮನಹಳ್ಳಿ | 3812 |
| ಮಹದೇವಪುರ | 2706 |
| ಪಶ್ಚಿಮ | 7265 |
| ಯಲಹಂಕ | 3113 |
| ದಕ್ಷಿಣ | 3291 |
| ಪೂರ್ವ | 3767 |












Click it and Unblock the Notifications