KRS Dam Water Level: ಮುಂದುವರೆದ ಭಾರಿ ಮಳೆ; ಪ್ರಮುಖ ಜಲಾಶಯಗಳ ನೀರಿನ ಮಟ್ಟ
ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದೆ, ಸೋಮವಾರದಿಂದ ಹಲವು ಜಿಲ್ಲೆಗಳಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ನೆರೆ ಭೀತಿ ಕೂಡ ಎದುರಾಗಿದೆ. ಆಗ್ನೇಯ ಬಂಗಾಳ ಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಇನ್ನೂ ಮೂರ್ನಾಲ್ಕು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಮತ್ತೆ ಒಳಹರಿವು ಏರಿಕೆಯಾಗುತ್ತಿದೆ.
ವಾಡಿಕೆಗಿಂತ ಹೆಚ್ಚಿನ ಮುಂಗಾರು ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ನದಿಗಳಿಗೆ ಹರಿಸಲಾಗುತ್ತಿದೆ. ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದೆ. 151.75 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 146.08 ಟಿಎಂಸಿ ನೀರು ಭರ್ತಿಯಾಗಿದೆ. 3,065 ಕ್ಯೂಸೆಕ್ಸ್ ಒಳಹರಿವು ಇದ್ದು, 6723 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಕೃಷ್ಣರಾಜಸಾಗರ (ಕೆಆರ್ ಎಸ್), ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿದ್ದರೆ, ಅತ್ತ ಉತ್ತರ ಕರ್ನಾಟಕದ ಜೀವನಾಡಿಗಳಾದ ತುಂಗಭದ್ರ, ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಕೂಡ ಭರ್ತಿಯಾಗಿದ್ದು ರೈತರಲ್ಲಿ ಸಂತಸ ತಂದಿವೆ.
ವಿವಿಧ ಜಲಾಶಯಗಳ ನೀರಿನ ಮಟ್ಟ
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 562.68 ಮೀಟರ್ / 139.69 ಟಿಎಂಸಿ
ಒಳಹರಿವು: 1779 ಕ್ಯೂಸೆಕ್ಸ್
ಹೊರಹರಿವು: 3245 ಕ್ಯೂಸೆಕ್ಸ್
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 593.12 ಮೀಟರ್ / 28.71 ಟಿಎಂಸಿ
ಒಳಹರಿವು: 441 ಕ್ಯೂಸೆಕ್ಸ್
ಹೊರಹರಿವು: 0 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2859 ಅಡಿ / 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2855.26 ಅಡಿ / 7.23 ಟಿಎಂಸಿ
ಒಳಹರಿವು: 1,664 ಕ್ಯೂಸೆಕ್ಸ್
ಹೊರಹರಿವು: 300 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 2918.48 ಅಡಿ / 33.76 ಟಿಎಂಸಿ
ಒಳಹರಿವು: 5439 ಕ್ಯೂಸೆಕ್ಸ್
ಹೊರಹರಿವು: 5650 ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2283.89 ಅಡಿ / 19.45 ಟಿಎಂಸಿ
ಒಳಹರಿವು: 1,026 ಕ್ಯೂಸೆಕ್ಸ್
ಹೊರಹರಿವು: 1,300 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2158 ಅಡಿ / 71.53 ಟಿಎಂಸಿ
ಒಳಹರಿವು: 7869 ಕ್ಯೂಸೆಕ್ಸ್
ಹೊರಹರಿವು: 7869 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 1631.95 ಅಡಿ / 101.57 ಟಿಎಂಸಿ
ಒಳಹರಿವು: 45,287 ಕ್ಯೂಸೆಕ್ಸ್
ಹೊರಹರಿವು: 46,191 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2174.80 ಅಡಿ / 51.00 ಟಿಎಂಸಿ
ಒಳಹರಿವು: 2993 ಕ್ಯೂಸೆಕ್ಸ್
ಹೊರಹರಿವು: 2993 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2079 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2079 ಅಡಿ / 37.71 ಟಿಎಂಸಿ
ಒಳಹರಿವು: 777 ಕ್ಯೂಸೆಕ್ಸ್
ಹೊರಹರಿವು: 777 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 519.57 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 519.08 ಮೀಟರ್ / 123.08 ಟಿಎಂಸಿ
ಒಳಹರಿವು: 27,766 ಕ್ಯೂಸೆಕ್ಸ್
ಹೊರಹರಿವು: 18,908 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 492.02 ಮೀಟರ್ / 32.37 ಟಿಎಂಸಿ
ಒಳಹರಿವು: 48,267 ಕ್ಯೂಸೆಕ್ಸ್
ಹೊರಹರಿವು: 45,589 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2132.60 ಅಡಿ / 24.22 ಟಿಎಂಸಿ
ಒಳಹರಿವು: 2426 ಕ್ಯೂಸೆಕ್ಸ್
ಹೊರಹರಿವು: 135 ಕ್ಯೂಸೆಕ್ಸ್












Click it and Unblock the Notifications