ಐಎಸ್‌ಐಎಸ್ ಸೇರಲು ಹೊರಟಿದ್ದ ಭಟ್ಕಳದ ಯುವಕ ಸೆರೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 06 : ಐಎಸ್‌ಐಎಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ ಆರೋಪದ ಮೇಲೆ ಭಟ್ಕಳ ಮೂಲದ ರಾವೂಫ್ ಅಹ್ಮದ್ ಎಂಬ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಹವಾಲಾ ಹಣ ಸಾಗಣೆಯಲ್ಲಿಯೂ ಅಹ್ಮದ್ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.

ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಪುಣೆ ವಿಮಾನ ನಿಲ್ದಾಣದಲ್ಲಿ ರಾವೂಫ್ ಅಹ್ಮದ್‌ನನ್ನು ವಶಕ್ಕೆ ಪಡೆದಿದ್ದು, ರಾಷ್ಟ್ರೀಯ ತನಿಖಾ ದಳಕ್ಕೆ ಆತನನ್ನು ಹಸ್ತಾಂತರ ಮಾಡುವ ಸಾಧ್ಯತೆ ಇದೆ. ದುಬೈಗೆ ಹಾರುವ ತಯಾರಿಯಲ್ಲಿದ್ದಾಗ ಅಹ್ಮದ್‌ನನ್ನು ವಶಕ್ಕೆ ಪಡೆಯಲಾಗಿದೆ. [ಕಲಬುರಗಿಯ ಸಿರಾಜುದ್ದೀನ್ ತನಿಖೆ NIA]

isis

ಅಹ್ಮದ್ ದುಬೈ ಮೂಲಕ ಸಿರಿಯಾಕ್ಕೆ ಹೋಗಲು ಪ್ರಯತ್ನ ನಡೆಸಿದ್ದಾನೆಯೇ? ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಸಿಕ್ಕಿಲ್ಲ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾರೆ. ಅಹ್ಮದ್ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಆತನ ಮೊಬೈಲ್ ಸಂದೇಶಗಳ ಮಾಹಿತಿ ಆಧರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.[ಯಾಸಿನ್ ಭಟ್ಕಳ್ ಪರಾರಿಗೆ ಸಂಚು ರೂಪಿಸಿದ್ದ ವಿದ್ಯಾರ್ಥಿ]

ಹವಾಲಾ ಹಣ ಸಾಗಣೆ ಶಂಕೆ? : ಅಹ್ಮದ್ ಐಎಸ್‌ಐಎಸ್ ಉಗ್ರ ಸಂಘಟನೆಗೆ ಹವಾಲಾ ಹಣವನ್ನು ಸಾಗಣೆ ಮಾಡುತ್ತಿದ್ದ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸಂಘಟನೆ ಜೊತೆ ನಂಟು ಹೊಂದಿದ ಆರೋಪದ ಮೇಲೆ ದೇಶದ ವಿವಿಧ ಸ್ಥಳಗಳಲ್ಲಿ 14 ಜನರನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು. ಈತನೂ ಅವರ ಜೊತೆ ಸಂಪರ್ಕದಲ್ಲಿದ್ದನೇ? ಎಂದು ತನಿಖೆ ನಡೆಸಲಾಗುತ್ತಿದೆ. [ಭಟ್ಕಳ ಮೂಲದ ಶಫಿ ಭಾರತದಲ್ಲಿ ISIS ಮುಖ್ಯಸ್ಥ]

ಅಹ್ಮದ ಭಟ್ಕಳದ ಆಯೇಷಾ ಮಸೀದಿ ಕಾಪೌಂಡ್ ನಿವಾಸಿಯಾಗಿದ್ದಾನೆ. ಹಲವು ತಿಂಗಳುಗಳಿಂದ ಕೇಂದ್ರ ಗುಪ್ತಚರ ಇಲಾಖೆ ಈತನ ಚಟುವಟಿಕೆ ಮೇಲೆ ಕಣ್ಣಿಟ್ಟಿತ್ತು. ಕೆಲವು ತಿಂಗಳ ಹಿಂದೆ ಎನ್‌ಐಎ ಮೊಹಮದ್ ಶಫಿ ಅರ್ಮರ್ ಎಂಬುವವನನ್ನು ಬಂಧಿಸಿತ್ತು. ಭಾರತ ಮತ್ತು ಉಗ್ರರ ನಡುವಿನ ಕೊಂಡಿಯಾಗಿ ಆತ ಕೆಲಸ ಮಾಡುತ್ತಿದ್ದ. ಆತನೂ ಭಟ್ಕಳ ಮೂಲದವಾಗಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The preliminary probe that is being conducted following the detention of a Bhatkal resident Rawoof Ahmed for alleged ISIS links suggests that he may have been involved in haawala transactions. The Intelligence Bureau had detained Ahmed at Pune.
Please Wait while comments are loading...