• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧರ್ಮಸ್ಥಳ ಸಾಮಾಜಿಕ ಜಾಲ ತಾಣಗಳ ಅನಾವರಣ

By ಸಚ್ಚಿದಾನಂದ ಆಚಾರ್ಯ, ಮಧುಕರ್ ಶೆಟ್ಟಿ
|

ಧರ್ಮಸ್ಥಳ, ನ.23: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವಧರ್ಮ ಸಮ್ಮೇಳನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾಗಿದೆ. ಸಾಹಿತ್ಯ ಸಮ್ಮೇಳನ ಹಾಗೂ ಸಾಮಾಜಿಕ ಜಾಲತಾಣಗಳ ಅಧಿಕೃತ ಲೋಕಾರ್ಪಣೆ ಕುರಿತ ವರದಿ ಇಲ್ಲಿದೆ...ಫೋಟೋ : ಶ್ರೇಯಸ್

ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀಕೃತ ಸಾಮಾಜಿಕ ಜಾಲತಾಣಗಳಿಗೆ ಐಟಿ ಬಿಟಿ ಸಚಿವ ಎಸ್ಆರ್ ಪಾಟೀಲ್ ಅವರು ಚಾಲನೆ ನೀಡಿದರು.ಎಸ್. ಆರ್. ಪಾಟೀಲ್ ಅವರು ಶ್ರೀ ಕ್ಷೇತ್ರದ ಫೇಸ್‍ಬುಕ್ ಪುಟ ಹಾಗೂ ಯೂಟ್ಯೂಬ್ ಪುಟವನ್ನು ಅನ್ನು ಮೌಸ್ ಒತ್ತುವ ಮೂಲಕ ಅಧೀಕೃತವಾಗಿ ಸಮರ್ಪಿಸಿದರು. ಇದರೊಂದಿಗೆ 51 ದೇಶಗಳ ಸುಮಾರು 1.91 ಲಕ್ಷ ಅನುಯಾಯಿಗಳು ನೇರವಾಗಿ ಸಂಪರ್ಕವನ್ನು ಇಟ್ಟುಕೊಳ್ಳಬಹುದಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಚಿವರಾದ ಅಭಯಚಂದ್ರ ಜೈನ್, ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಸಿ. ಸೋಮಶೇಖರ್, ಡಾ. ಪಿ. ಕೆ. ರಾಜಶೇಖರ್, ಡಾ. ಧರಣೀದೇವಿ ಮಾಲಗತ್ತಿ ವಿಶೇಷ ಉಪನ್ಯಾಸ ನೀಡಿದರು. [ದೀಪೋತ್ಸವ ಯಶಸ್ಸಿಗೆ ಕಾರಣರಾದ ಪೊಲೀಸರಿಗೆ ಸಲಾಂ]

ಧರ್ಮಸ್ಥಳದ ಸಾಹಿತ್ಯ ಸಮ್ಮೇಳನ: ಸಾಹಿತಿಗಳಾದವರು ಮಾನವೀಯತೆಯ ಪರವಾಗಿ ವಕಾಲತ್ತು ವಹಿಸಬೇಕು, ಸತ್ಯದ ಪರವಾಗಿ ಮಾತಾಡಬೇಕು. ಜಾತಿಯ, ಕುರ್ಚಿಯ ಪರವಾಗಿ ವಕಾಲತ್ತು ಮಾಡಬಾರದು ಎಂದು ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಸ್.ಆರ್. ಪಾಟೀಲ್ ಅಭಿಪ್ರಾಯಪಟ್ಟರು.

ಶ್ರೀ ಕೇತ್ರ ಧರ್ಮಸ್ಥಳದಲ್ಲಿ ನಡೆದ 82ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕನ್ನು ಬಿಟ್ಟು ಸಾಹಿತ್ಯವಿಲ್ಲ. ಬದುಕಿನ ಎಲ್ಲಾ ಆಯಾಮಗಳನ್ನು ಹಿಡಿದಿಡುವವರು ಬರಹಗಾರರು ಮಾತ್ರ. ಸಾಹಿತ್ಯ ಸಮಾಜದ ಪ್ರತಿಬಿಂಬ. ಮನುಕುಲದ ಶ್ರೇಯಸ್ಸಿಗೆ, ಒಳಿತಿಗೆ ಸಾಹಿತ್ಯ ಶ್ರಮಿಸುತ್ತದೆ ಎಂದರು.

ದಾರಿ ತಪ್ಪಿ ಹೋದ ಸಾಹಿತ್ಯವನ್ನು ಸರಿದಾರಿಗೆ ತರುವ ಹಕ್ಕು ಮತ್ತು ಜವಾಬ್ದಾರಿ ಬರಹಗಾರರ ಮೇಲಿದೆ. ಸಮಾಜದಲ್ಲಿನ ಅನ್ಯಾಯಗಳನ್ನು ಹೊಡೆದೋಡಿಸುವ ಕಾರ್ಯದಲ್ಲಿ ಸಾಹಿತಿಗಳು ತೊಡಗಿಸಿಕೊಳ್ಳಬೇಕು. ಸಾಹಿತ್ಯ ಅನ್ಯಾಯದ ವಿರುದ್ಧ ಬಡಿದೇಳುವ ಧ್ವನಿಯಾಬೇಕು ಎಂದು ಕರೆ ನೀಡಿದರು. [[ಗ್ಯಾಲರಿ: ಧರ್ಮಸ್ಥಳದ ಲಕ್ಷದೀಪೋತ್ಸವ ಸಂಭ್ರಮ] ]

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು, ಜಾತಿ ಪಂಗಡಗಳನ್ನು ಮೀರಿ ಸಾಹಿತಿಗಳು ಬೆಳೆಯಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನವನ್ನು ಕೊಡಬೇಕಾದುದು ಮಾತ್ರ ಸರಕಾರದ ಕೆಲಸ, ಶಾಸ್ತ್ರೀಯ ಮಾನವನ್ನು ಕೊಡಬೇಕಾದವರು ಜನರು. ಸುಸಜ್ಜಿತ, ಸುಸಂಸ್ಕøತ, ಮಾದರಿ ಕನ್ನಡ ಶಾಲೆಗಳನ್ನು ಸರಕಾರ ಮತ್ತು ಸ್ಥಳೀಯರೂ ತೆರೆಯಬೇಕು ಎಂದು ಆಗ್ರಹಿಸಿದರು.

ಇತರ ಭಾಷೆಗಳ ಜ್ಞಾನ ನಮಗೆ ಅಗತ್ಯ. ವಿವಿಧ ಭಾಷೆಗಳನ್ನು ಕಲಿಯಬೇಕು, ಆದರೆ ಅಲ್ಲಿಯ ಜ್ಞಾನವನ್ನು ಕನ್ನಡ ಭಾಷೆಯಲ್ಲೇ ಇತರರಿಗೆ ತಿಳಿಸಿಕೊಡುವಂತಾಗಬೇಕು. ಕನ್ನಡದ ಮೂಲಕವೇ ಮಾತನಾಡಬೇಕು, ಅಭಿವ್ಯಕ್ತಿಸಬೇಕು. ಹೀಗೆ ಕನ್ನಡವನ್ನು ಬಳಸುವುದರ ಮೂಲಕವಷ್ಟೇ ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ, ನಮ್ಮ ನಾಡಿನ ಎಲ್ಲಾ ಗ್ರಂಥ ಭಂಡಾರಗಳಲ್ಲೂ ಕೋಮು ಸೌಹಾರ್ದಕ್ಕೆ ಪೂರಕವಾದ ವೈವಿಧ್ಯದಿಂದ ಕೂಡಿದ ಧರ್ಮ, ನೀತಿ, ಆಚಾರ, ಶೀಲ, ಸದಾಚಾರಗಳಿಗೆ ಪೂರಕವಾದ ಸಾಹಿತ್ಯ ಗ್ರಂಥಗಳನ್ನು ಒದಗಿಸಿದರೆ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಲು ಸಾಧ್ಯ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KarnatakaIT, BT, science and technology minister S.R Patil inaugurated eighty-second literary convention organized as part of Lakshadeepotsav at Sri Kshetra Dharmasthala. He also launched Sri Kshetra Dhamasthala Temple's official social networking sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more