ಕರ್ನಾಟಕ ಪೊಲೀಸರನ್ನು ವಿಶೇಷ ಘಟಕಗಳಿಗೆ ನಿಯೋಜನೆ; ಹೊಸ ಸುತ್ತೋಲೆ

ಬೆಂಗಳೂರು, ಆಗಸ್ಟ್ 04; ಕರ್ನಾಟಕದ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳನ್ನು ಎರವಲು ಸೇವೆ ಮೇಲೆ ವಿಶೇಷ ಘಟಕಗಳಿಗೆ ನಿಯೋಜಿಸುವ ಬಗ್ಗೆ ಹೊಸ ಸುತ್ತೋಲೆಯನ್ನು ಪ್ರಕಟಿಸಲಾಗಿದೆ. ಪಿಎಸ್ಐ ಮತ್ತು ಕೆಳ ದರ್ಜೆಯ ಸಿಬ್ಬಂದಿಗಳನ್ನು ನಿಯೋಜನೆ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.

ಈ ಕುರಿತು ಸೌಮೇಂದು ಮುಖರ್ಜಿ, ಎಡಿಜಿಪಿ (ಆಡಳಿತ) ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರವರ ಪರವಾಗಿ ಸುತ್ತೋಲೆ ಹೊರಡಿಸಿದ್ದಾರೆ. ನಿಯೋಜನಾ ಮಾರ್ಗಸೂಚಿಯ ಅಧಿಕೃತ ಜ್ಞಾಪನ ಸಂಖ್ಯೆ ದಿನಾಂಕ 09/06/2006. ಸುತ್ತೋಲೆ ಸಂಖ್ಯೆ ದಿನಾಂಕ 01/04/2015, ಕರ್ನಾಟಕ ಸರ್ಕಾರ ಅಧಿಕೃತ ಜ್ಞಾಪನ ಸಂಖ್ಯೆ ದಿನಾಂಕ 16/07/1983 ಉಲ್ಲೇಖ ಮಾಡಿದ್ದಾರೆ.

karnataka-police (4)

ರಾಜ್ಯ ಗುಪ್ತವಾರ್ತೆ, ಸಿ.ಐ.ಡಿ., ಅರಣ್ಯ ಘಟಕ, ಕರ್ನಾಟಕ ಲೋಕಾಯುಕ್ತ, ಕೆ.ಪಿ.ಟಿ.ಸಿ.ಎಲ್., ಬಿ.ಡಿ.ಎ.. ಬಿ.ಎಂ.ಟಿ.ಎಫ್., ಹೈಕೋರ್ಟ್/ ಕೆ.ಎ.ಟಿ./ ಸಿ.ಎ.ಟಿ., ಡಿ.ಸಿ.ಆರ್.ಇ. ಎಸ್.ಸಿ.ಆರ್‌ ಬಿ. ಇತ್ಯಾದಿ ವಿಶೇಷ ಘಟಕಗಳಿಗೆ ಪಿ.ಎಸ್.ಐ. ಮತ್ತು ಕೆಳ ದರ್ಜೆಯ ಸಿಬ್ಬಂದಿಗಳನ್ನು ನಿಯೋಜಿಸುವ ಬಗ್ಗೆ ಉಲ್ಲೇಖಿತ ಸುತ್ತೋಲೆಗಳಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.

ಸುತ್ತೋಲೆಯ ಅಂಶಗಳು; ಸರ್ಕಾರಿ ನೌಕರರ ಎರವಲು ಸೇವೆಯು ಪ್ರಾರಂಭದ ಮೂರು ವರ್ಷ ಸಾಮಾನ್ಯ ಅವಧಿ ಮತ್ತು ಗರಿಷ್ಠ 5 ವರ್ಷಗಳಿಗೆ ಸೀಮಿತವಾಗಿರಬೇಕು ಎಂದು ಸರ್ಕಾರವು ಸೂಚಿಸಿರುತ್ತದೆ. ಅಲ್ಲದೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 50(3) ನಿಯಮದ ಪರಂತುಕದ ಪ್ರಕಾರ ಸರ್ಕಾರಿ ನೌಕರರ ಎರವಲು ಸೇವೆಯ ಅವಧಿ ಸರ್ಕಾರದ ವಿಶೇಷ ಆದೇಶಗಳ ಮೇರೆಗಲ್ಲದೇ ಸಾಮಾನ್ಯವಾಗಿ 5 ವರ್ಷಗಳಿಗಿಂತ ಹೆಚ್ಚಾಗಿ ಇರಕೂಡದು ಎಂದು ಸುತ್ತೋಲೆ ಹೇಳಿದೆ.

ಸಾಮಾನ್ಯ ನಿಯೋಜನಾ ಅವಧಿ ಪೂರ್ಣಗೊಳಿಸಿದ ಹಿಂತಿರುಗಿಸಿದೆ ನಿರಂತರವಾಗಿ 5 ವರ್ಷಗಳವರೆಗೆ ಸಿಬ್ಬಂದಿಗಳನ್ನು ಮಾತೃ ಘಟಕಕ್ಕೆ ಮುಂದುವರೆಸಿರುವುದನ್ನು ಹಾಗೂ ಬದಲಿ ಸಿಬ್ಬಂದಿಯನ್ನು ನಿಯೋಜನೆಗೆ ನೇಮಿಸಿಸುವುದು ಸೂಕ್ತವಲ್ಲವೇ? ಅವರನ್ನು ಮುಂದುವರೆಸಲು ಇರುವ ಸಮರ್ಥನಿಯ ಕಾರಣಗಳೇನು ಎಂಬುದನ್ನು ಪರಿಶೀಲಿಸದೆ ವಿಸ್ತರಿಸಿರುವುದನ್ನು ಗಮನಿಸಲಾಗಿದೆ.

ಈ ರೀತಿ ಸಿಬ್ಬಂದಿಗಳನ್ನು ನಿರ್ದಿಷ್ಟಪಡಿಸಿರುವ ಅವಧಿಯ ನಂತರ ಮುಂದುವರೆಸುವುದು ಆಡಳಿತಾತ್ಮಕ ದೃಷ್ಠಿಯಿಂದ ಸೂಕ್ತವಾಗಿರುವುದಿಲ್ಲ. ಆದ್ದರಿಂದ ಸ್ಥಾಯಿ ಆದೇಶ 1008 ರಡಿ ಹಂಚಿಕೆ ಮಾಡಿರುವ ವಿಶೇಷ ಘಟಕದ ಹುದ್ದೆಗಳಲ್ಲಿ ನಿರ್ದಿಷ್ಟಪಡಿಸಿರುವ 3 ವರ್ಷದ ಅವಧಿ ಪೂರೈಸಿದ ಸಿಬ್ಬಂದಿಗಳ ನಿಯೋಜನೆಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ.

* ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳ ಎರವಲು ಸೇವೆಯ ಪ್ರಾರಂಭದ ಸಾಮಾನ್ಯ ಅವಧಿ ಮೂರು (3) ವರ್ಷಗಳಿಗೆ ಸೀಮಿತವಾಗಿರಬೇಕು.

* ಎರವಲು ಸೇವೆಯ ಸಾಮಾನ್ಯ ಅವಧಿ 3 ವರ್ಷ ಮುಗಿದ ಬಳಿಕ ಯಾವುದೇ ವಿಶೇಷ ಸಂದರ್ಭ/ ಕಾರಣಗಳಿದ್ದಲ್ಲಿ ಸೀಮಿತ ಸಾಮಾನ್ಯ ಅವಧಿಯನ್ನು ಪೊಲೀಸ್ ಪ್ರಧಾನ ಕಛೇರಿಯ ವಿಶೇಷ ಆದೇಶದ ಮೇರೆಗೆ ಮಾತ್ರ ವಿಸ್ತರಿಸುವುದು.

* ಎರವಲು ಸೇವೆಯ ಗರಿಷ್ಠ ಅವಧಿ 5 ವರ್ಷ ಮುಗಿದ ಬಳಿಕ ಮಾತೃ ಘಟಕದಲ್ಲಿ ಕನಿಷ್ಠ ಎರಡು ವರ್ಷವಾದರೂ ಚಾತುರ್ಮಶ್ಯ ಅವಧಿ (cooling off period) ಪೂರೈಸದ ಹೊರತು ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳನ್ನು ಮತ್ತೆ ಎರವಲು ಸೇವೆಗೆ ಪ್ರತಿ ನಿಯೋಜಿಸಕೂಡದು.

ಎಲ್ಲಾ ಘಟಕಾಧಿಕಾರಿಗಳು ಮತ್ತು ವಿಶೇಷ ಘಟಕಾಧಿಕಾರಿಗಳು ಇಂತಹ ಎಲ್ಲಾ ಪ್ರಕರಣಗಳಲ್ಲಿ ಮೇಲೆ ಸೂಚಿಸಿದ ಕಾರ್ಯನೀತಿಯ ಪ್ರಕಾರ ಕ್ರಮತೆಗೆದುಕೊಳ್ಳಬೇಕೆಂದು ನಿರ್ದೆಶಿಸಿದೆ. ಈ ಸುತ್ತೋಲೆ ಡಿಜಿ ಮತ್ತು ಐಜಿಪಿ ಅವರಿಂದ ಅನುಮೋದಿಸಲ್ಪಟ್ಟಿದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+