ರಾಜ್ಯ ಬಜೆಟ್ನಲ್ಲಿ ಇಲಾಖಾವಾರು ಹಂಚಿಕೆ ಮಾಡಿದ ಅನುದಾನಗಳೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಫೆಬ್ರವರಿ 16: ಸಿಎಂ ಸಿದ್ದರಾಮಯ್ಯ 2024-25ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. 15 ಬಾರಿ ಬಜೆಟ್ ಮಂಡಿಸಿ ವಿಶೇಷ ದಾಖಲೆ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ 3, 71, 383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ.
Karnataka Budget 2024 LIVE: 44 ಕಿಮೀ ನಮ್ಮ ಮೊಟ್ರೋ ಹೊಸ ಮಾರ್ಗ, 7 ಪಟ್ಟಣಗಳಲ್ಲಿ ಸ್ಯಾಟಲೈಟ್ ಟೌನ್‌ಶಿಫ್
2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸಮಾರು 58,000 ಕೋಟಿ ರೂಪಾಯಿ ಅನುದಾನ ಮೀಸಲಿಡುವ ಅನಿವಾರ್ಯತೆ ಸರ್ಕಾರಕ್ಕಿದ್ದು, ಹೀಗಾಗಿ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಬಜೆಟ್ ಅನ್ನು ಸಿಎಂ ಮಂಡಿಸಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟು ರಾಜ್ಯದ ಜನತೆಗೆ ಒಂದಷ್ಟು ಕೊಡುಗೆ ನೀಡಿದ್ದು, ಕರ್ನಾಟಕ ಬಜೆಟ್‌ನ ಇಲಾಖಾವಾರು ಹಂಚಿಕೆಯ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯ ಬಜೆಟ್ 2024ರ ಇಲಾಖಾವಾರು ಹಂಚಿಕೆಯ ವಿವರ
- ಶಿಕ್ಷಣ ಇಲಾಖೆ- 44,422 ಕೋಟಿ ರೂಪಾಯಿ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- 34,406 ಕೋಟಿ ರೂಪಾಯಿ
- ಇಂಧನ ಇಲಾಖೆ-23,159 ಕೋಟಿ ರೂಪಾಯಿ
- ಗ್ರಾಮೀಣಾಭಿವೃದ್ಧಿ ಇಲಾಖೆ- 21,160 ಕೋಟಿ ರೂಪಾಯಿ
- ಒಳಾಡಳಿತ ಸಾರಿಗೆ ಇಲಾಖೆ- 19,777 ಕೋಟಿ ರೂಪಾಯಿ
- ನೀರಾವರಿ ಇಲಾಖೆ-19,179 ಕೋಟಿ ರೂಪಾಯಿ
- ನಗರಾಭಿವೃದ್ಧಿ ಇಲಾಖೆ -18,155 ಕೋಟಿ ರೂಪಾಯಿ
- ಕಂದಾಯ ಇಲಾಖೆ-16,170 ಕೋಟಿ ರೂಪಾಯಿ
- ಆರೋಗ್ಯಇಲಾಖೆ -15,145 ಕೋಟಿ ರೂಪಾಯಿ
- ಸಮಾಜ ಕಲ್ಯಾಣ ಇಲಾಖೆ- 13,334 ಕೋಟಿ ರೂಪಾಯಿ
- ಲೋಕೋಪಯೋಗಿ ಇಲಾಖೆ- 10,424 ಕೋಟಿ ರೂಪಾಯಿ
- ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ- 9,963 ಕೋಟಿ ರೂಪಾಯಿ
- ಕೃಷಿ ತೋಟಗಾರಿಕೆ ಇಲಾಖೆ- 6,688 ಕೋಟಿ ರೂಪಾಯಿ
- ಪಶುಸಂಗೋಪನೆ ಇಲಾಖೆ- 3,307 ಕೋಟಿ ರೂಪಾಯಿ
- ಇತರೆಗೆ- 1,24,593 ಕೋಟಿ ರೂಪಾಯಿ












Click it and Unblock the Notifications