ರಾಜ್ಯದಲ್ಲಿ ಡೆಂಗಿ ತಾಂಡವ: ಒಂದೇ ದಿನ ಪತ್ತೆಯಾದ 381 ಕೇಸ್‌

ರಾಜ್ಯದಲ್ಲಿ ಡೆಂಗಿ ಮಹಾಮಾರಿ ತಾಂಡವ ಆಡುತ್ತಿದೆ. ದಿನ ಕಳೆದಂತೆ ಈ ರೋಗದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿದೆ. ಗುರುವಾರ ಒಂದೇ ದಿನ 381 ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 88 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಜುಲೈ 11 ರಂದು ಡೆಂಗಿ ಪ್ರಕರಣಗಳ ತಪಾಸಣೆ ಹೆಚ್ಚಾಗಿದ್ದು, ರೋಗಿಗಳ ಸಂಖ್ಯೆಯು ಏರು ಗತಿಯಲ್ಲಿ ಕಂಡು ಬದಿದೆ. ಬುಧವಾರಕ್ಕೆ ಹೋಲಿಸಿದರೆ, ಡೆಂಗಿ ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ ಸುಮಾರು 600ಕ್ಕೂ ಹೆಚ್ಚಾಗಿದೆ. ಗುರುವಾರ ಒಂದೇ ದಿನ ರಾಜ್ಯದಲ್ಲಿ 2503 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 381 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ.

Dengue Outbreak in the State 381 Cases Detected in a Single Day

ಬಿಬಿಎಂಪಿ ವ್ಯಾಪ್ತಿಯಲ್ಲಿ 171 ಪ್ರಕರಣ

ಗುರುವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 481 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ, 171 ಜನರಲ್ಲಿ ರೋಗ ಲಕ್ಷಣಗಳು ಕಂಡು ಬಂದಿವೆ. ಇನ್ನು 12 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ 2463 ಪ್ರಕರಣಗಳು ಸಕ್ರಿಯವಾಗಿದ್ದು, 143 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮೈಸೂರು, ಹಾಸನದಲ್ಲೂ ಹೆಚ್ಚು

ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲೂ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಮೈಸೂರಿನಲ್ಲಿ ಒಂದೇ ದಿನ 44, ಹಾಸನದಲ್ಲಿ 38 ಪ್ರಕರಣಗಳು ಪತ್ತೆಯಾಗಿವೆ. ಈ ಎರಡೂ ಜಿಲ್ಲೆಗಳನ್ನು ಸೇರಿಸಿದರೆ, 24 ಗಂಟೆಯಲ್ಲಿ ಒಟ್ಟು 22 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಡೆಂಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 540, ಹಾಸನದಲ್ಲಿ 262 ಜನರಲ್ಲಿ ಡೆಂಗಿ ಇನ್ನು ಸಕ್ರಿಯವಾಗಿದೆ.

Dengue Outbreak in the State 381 Cases Detected in a Single Day

ಮಂಡ್ಯ ಭಾಗದಲ್ಲೂ ಗುರುವಾರ 18 ಪ್ರಕರಣಗಳು ಕಾಣಿಸಿಕೊಂಡಿದ್ದು, ಚಿಕ್ಕಮಗಳೂರಿನಲ್ಲಿ 12 ಪ್ರಕರಣ ಪತ್ತೆಯಾಗಿವೆ. ವಿಜಯಾಪುರದಲ್ಲಿ 10, ಚಿತ್ರುದರ್ಗದಲ್ಲಿ 20, ತುಮಕೂರಿನಲ್ಲಿ 17 ಪ್ರಕರಣಗಳು ಒಂದೇ ದಿನದಲ್ಲಿ ಕಾಣಿಸಿಕೊಂಡಿವೆ.

ಉಳಿದಂತೆ ಬೀದರ್‌ನಲ್ಲಿ 9, ಉಡುಪಿಯಲ್ಲಿ 5, ಚಾಮರಾಜನಗರ, ಕೊಪ್ಪಳ, ರಾಯಚೂರು, ಬಳ್ಳಾರಿ, ಭಾಗದಲ್ಲಿ ತಲಾ 4 ಪ್ರಕರಣಗಳು ಪತ್ತೆಯಾಗಿವೆ. ಚಿಕ್ಕಬಳ್ಳಾಪುರ, ವಿಜಯನಗರದಲ್ಲಿ ತಲಾ ಎರಡು ಸಕ್ರಿಯ ಕೇಸ್‌ಗಳು ದಾಖಲಾಗಿವೆ. ಇನ್ನು ಉತ್ತರ ಕನ್ನಡದಲ್ಲಿ ಒಂದು ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ 8221 ಸಕ್ರಿಯ ಕೇಸ್‌

ರಾಜ್ಯದಲ್ಲಿ ಒಟ್ಟಾರೆಯಾಗಿ ಈ ವರೆಗೆ ಒಟ್ಟು 61037 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 8221 ಜನರಲ್ಲಿ ಡೆಂಗಿ ಸಕ್ರಿಯವಾಗಿದೆ. ಇದರಲ್ಲಿ 362 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 7 ಜನ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+